ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಫೆ. 28 : ಮದಕರಿಪುರದ ಕೆರೆ ಒತ್ತುವರಿಯಾಗಿದೆ ಎನ್ನಲಾಗಿದೆ. ಇದನ್ನು ಇಲ್ಲಿನ ಅಧಿಕಾರಿಗಳು ಪೂರ್ಣವಾದ ಅಳತೆಯನ್ನು ಮಾಡಿಸಿ ಒತ್ತುವರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಸೂಚನೆಯನ್ನು ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಚಿತ್ರದುರ್ಗ ತಾಲ್ಲೂಕು ಇವರ ಅರ್ಥಿಕ ಸಹಕಾರದೊಂದಿಗೆ ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮ ಪಂಚಾಯತ್ ಗೋವಿನ ಗೋಕಟ್ಟೆ ಕೆರೆ ಅಭೀವೃದ್ದಿ ಸಮಿತಿ ಇವರ ಸಹಭಾಗಿತ್ವದಲ್ಲಿ ನಮ್ಮೂರ ನಮ್ಮ ಕರೆ ಕಾರ್ಯಕ್ರಮದಲ್ಲಿ ಮದಕರಿಪುರ ಗೋವಿನ ಗೋಕಟ್ಟೆ ಕರೆ ಹೊಳೆತ್ತುವ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಉತ್ತಮವಾದ ಕಾರ್ಯಕ್ರಮವನ್ನು ಮಾಡುತ್ತಿದೆ. ಸಮಾಜಮುಖಿಯಾದಚ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇದಕ್ಕೆ ಬೇಕಾದ ತಂಡವನ್ನು ರಚಿಸುವುದರ ಮೂಲಕ ಜನರ ಹಿತವನ್ನು ಕಾಪಾಡುವ ಪ್ರಮಾಣೀಕ ಪ್ರಯತ್ನವನ್ನು ಮಾಡುತ್ತಿದೆ. ಈ ಕಾರ್ಯಕ್ಕೆ ನಾನು ಹಾಗೂ ನನ್ನ ಅಧಿಕಾರಿಗಳು ಯಾವಾಗಲೂ ಸಹಾ ಸಹಕಾರವನ್ನು ನೀಡಲಾಗುವುದು ಎಂದ ಶಾಸಕರು ಈ ಮದಕರಿಪುರದ ಕೆರೆ ಒತ್ತುವರಿಯಾಗಿದೆ ಎನ್ನಲಾಗಿದೆ ಇದನ್ನು ಇಲ್ಲಿನ ಅಧಿಕಾರಿಗಳು ಪೂರ್ಣವಾದ ಅಳತೆಯನ್ನು ಮಾಡಿಸಿ ಒತ್ತುವರಿಯನ್ನು ತೆರವುಗೊಳಿಸುವಂತೆ ಸೂಚನೆಯನ್ನು ನೀಡಿದರು.
ಮದಕರಿಪುರದ ಅಭೀವೃದ್ದಿಗಾಗಿ ಮುಖ್ಯಮಂತ್ರಿಗಳಿಂದ ಅನುದಾನವನ್ನು ತರಲಾಗಿದೆ ಅದನ್ನು ಬಳಸಿಕೊಂಡ ಇಲ್ಲಿ ಉತ್ತಮವಾದ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೆ ಇಲ್ಲಿ ಹೈಮಾಸ್ ದೀಪವನ್ನು ಅಳವಡಿಕೆ ಮಾಡಲಾಗಿದೆ. ಅಪ್ಪರ್ ಭದ್ರಾದಿಂದ ಮದಕರಿಪುರದ ಕೆರೆಗೂ ಸಹಾ ನೀರನ್ನು ತುಂಬಿಸುವ ಕಾರ್ಯವನ್ನು ಮಾಡುವಂತೆ ಸಂಬಂಧಪಟ್ಟ ಆಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗುವುದು. ಇದರ ಬಗ್ಗೆ ಟಿಪಿಆರ್‍ನ್ನು ಮಾಡುವಂತೆ ಹೇಳಲಾಗುವುದು ಎಂದರು.
ಚಿತ್ರದುರ್ಗ ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆಯ ಸಂಘಟನೆ ಯಾವುದೇ ಜನಪರವಾದ ಕಾರ್ಯಕ್ರಮವನ್ನು ಹಾಕಿದರೂ ಅದಕ್ಕೆ ನನ್ನ ಹಾಗೂ ನಮ್ಮ ಅಧಿಕಾರಿಗಳ ಸಹಕಾರ ಇರುತ್ತದೆ ಎಂದು ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಪ್ರಾದೇಶಿಕ ನಿದೇಶಕರಾದ ಶ್ರೀಮತಿ ಗೀತಾ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗೆಡೆ ಹಾಗೂ ಶ್ರೀಮತಿ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಈ ಕರೆ ಹೊಳೆತ್ತುವ ಯೋಜನೆ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. 2017ರಲ್ಲಿ ಪ್ರಾರಂಭವಾದ ಈ ಯೋಜನೆಯಲ್ಲಿ ಇದುವರೆವಿಗೂ 813 ಕೆರೆಗಳ ಹೂಳನ್ನು ತೆಗೆಯಲಾಗಿದೆ. 52 ಕಾಮಗಾರಿಗಳು ಈಗ ಪ್ರಗತಿಯಲ್ಲಿವೆ. ಇದಕ್ಕಾಗಿ 63 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ, 1,80,497 ರೈತ ಈ ಹೊಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದರಿಂದ 3,77,845 ಕುಟುಂಬಗಳು ಪ್ರಯೋಜವನ್ನು ಪಡೆದಿವೆ. 62,787,ಕೊಳವೆಬಾವಿಗಳು, 37,060 ಭಾವಿಗಳು ಜಲ ಮರು ಪೂರಣವನ್ನು ಹೊಂದಿವೆ. ಇದರಲ್ಲಿ ಒತ್ತುವಾರಿಯಾಗಿದ್ದ 305 ಎಕರೆ ಕೆರೆಯನ್ನು ತೆರವು ಮಾಡಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿಯೂ ಸಹಾ ಈ ಯೋಜನೆ ಜಾರಿಯಲ್ಲಿದ್ದು ಇದುವರೆವಿಗೂ 34 ಕರೆಗಳ ಹೊಳನ್ನು ತೆಗೆಯಲಾಗಿದೆ. ಇದಕ್ಕಾಗಿ 3 ಕೋಟಿಯಷ್ಟು ಹಣವನ್ನು ವೆಚ್ಚ ಮಾಡಲಾಗಿದೆ. ಚಿತ್ರದುರ್ಗದಲ್ಲಿ 06, ಹೊಳಲ್ಕೆರೆಯಲ್ಲಿ 10, ಹಿರಿಯೂರಿನಲ್ಲಿ 06, ಚಳ್ಳಕೆರೆಯಲ್ಲಿ 04, ಹೊಸದುರ್ಗದಲ್ಲಿ 07 ಹಾಗೂ ಮೊಳಕಾಲ್ಮೂರಿನಲ್ಲಿ 03 ಕರೆಗಳ ಹೊಳನ್ನು ತೆಗೆಯಲಾಗಿದೆ ಇದಕ್ಕೆ ಯಾವುದೇ ಮಿತಿ ಇಲ್ಲ ಯಾವ ತಾಲ್ಲೂಕಿನಲ್ಲಿ ಬೇಡಿಕೆ ಬಂದರೆ ಅದನ್ನು ಪರೀಶಿಲಿಸಿ ಹೊಳನ್ನು ತೆಗೆಯಲಾಗುವುದು, ಇದುವರೆವಿಗೂ ನಾವು ಹೊಳ ತೆಗೆದ ಕೆರೆಗಳಲ್ಲಿ ಶೇ.90 ರಷ್ಟು ನೀರು ತುಂಬಿದೆ. ಇದ್ದಲ್ಲದೆ ನಮ್ಮ ಸಂಸ್ಥೆವತಿಯಿಂದ ಇನ್ನೂ ಹಲವಾರು ಉಪಯುಕ್ತವಾದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲಾಗಿದೆ ಎಂದು ಗೀತಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲ್ಲೂಕು ತಹಶೀಲ್ದಾರರಾದ ಗೋವಿಂದ ರಾಜು, ಚಿತ್ರದುರ್ಗ ತಾ,ಪಂ ಕಾರ್ಯ ನಿರ್ವಹಕ ಆಧಿಕಾರಿ ರವಿಕುಮಾರ್, ಮದಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಉಪಾಧ್ಯಕ್ಷೆ ಜ್ಯೋತಿ, ಕೆರೆ ಅಭೀವೃದ್ದಿ ಸಮಿತಿ ಅಧ್ಯಕ್ಷರಾದ ನವೀನ್, ಪಿಡಿಓ ನಾಗರಾಜ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆಯ ಯೋಜನಾಧಿಕಾರಿ ರವಿ ಹಿತ್ತಲಮನಿ, ಅಶೋಕ ಕೆರೆ ಇಂಜಿನಿಯರ್ ಹರೀಶ್, ಸುರೇಶ್ ನಿಜಲಿಂಗಪ್ಪ, ಕೆಡಿಪಿ ನಾಗರಾಜ್, ನಾಗರಾಜ್ ಸಂಗಂ, ರೂಪ ಜನಾರ್ಧನ್ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.
ದಾವಣಗೆರೆ; ಇಂದು ದ್ವಿತೀಯ ಪಿಯು ಫಲಿತಾಂಶವನ್ನು ಸಚಿವ ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ. ಆದರೆ ಈ ಬಾರಿ ಸಾಕಷ್ಟು ಮಕ್ಕಳು ಫೇಲ್…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 08 : ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ ಹಾಗೂ ಛಾಯಾಗ್ರಾಹಕ ಶಂಕರ್ ಇವರ ತಾಯಿ ಲಕ್ಷ್ಮಮ್ಮ…
ಚಳ್ಳಕೆರೆ, ಏಪ್ರಿಲ್. 08 : 2025 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು,ಪ್ರತಿ ವರ್ಷದ ಹಾಗೆ ಈ ಬಾರಿಯೂ…
ಚಿತ್ರದುರ್ಗ. ಏ.08: ಜಿಲ್ಲೆಯಲ್ಲಿ ಕಳೆದ ಮಾರ್ಚ್ 01 ರಿಂದ 20ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಗೆ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…