ಈದ್ ಮಿಲಾದುನ್ನಬಿಯ ಪ್ರಯುಕ್ತ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

suddionenews
1 Min Read

ಚಿತ್ರದುರ್ಗ : ಪ್ರವಾದಿ ಮಹಮದ್ ಪೈಗಂಬರ್  ಹುಟ್ಟುಹಬ್ಬದ ದಿನವಾದ ಮಂಗಳವಾರ ಜಿಲ್ಲಾಸ್ಪತ್ರೆ ಮುಂಭಾಗವಿರುವ ಉದ್ಯಾನವನವನ್ನು ಎಸ್.ಐ.ಓ.ತಂಡ, ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಸ್ವಚ್ಚತೆ ಕೈಗೊಳ್ಳಲಾಯಿತು.

ಪ್ಲಾಸ್ಟಿಕ್ ಬಾಟಲ್, ಕವರ್, ಕೊಳೆತ ಹೂವಿನ ಹಾರಗಳು, ಎಳನೀರು ಬುರುಡೆ ಸೇರಿದಂತೆ ಅನೇಕ ತ್ಯಾಜ್ಯಗಳು ತುಂಬಿದ್ದ ಉದ್ಯಾನವನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸ್ವಚ್ಚಗೊಳಿಸಲಾಯಿತು.
ಆರ್.ಎಂ.ಡಿ.ಆಯಿಲ್ ಮಿಲ್ ಮಾಲೀಕರಾದ ಹಾಜಿ ಆರ್.ದಾದಾಪೀರ್ ಮಾತನಾಡಿ ಪ್ರವಾದಿ ಮಹಮದ್ ಪೈಗಂಬರ್‍ರವರು ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ.

ಅದರಂತೆ ಪ್ರತಿಯೊಬ್ಬರು ಜೀವಿಸಿದಾಗ ನೆಮ್ಮದಿ ಕಂಡುಕೊಳ್ಳಬಹುದು. ಮಾನವರೆಲ್ಲರೂ ಸಮಾನರು, ಜಾತಿ ಭೇದವಿರಬಾರದು. ಒಂದು ಧರ್ಮ ಮತ್ತೊಂದು ಧರ್ಮವನ್ನು ಅವಹೇಳನ ಮಾಡಬಾರದು. ಸಮಾನತೆ ಪೈಗಂಬರ್‍ರವರ ಧ್ಯೇಯವಾಗಿತ್ತು. ಹಾಗಾಗಿ ಈದ್‍ಮಿಲಾದ್ ಹಬ್ಬದಂದು ಉದ್ಯಾನವನ ಸ್ವಚ್ಚತೆಯಲ್ಲಿ ತೊಡಗಿದ್ದೇವೆಂದು ಹೇಳಿದರು.

ಬಾರ್‍ಲೈನ್ ಮಸೀದಿಯ ಧರ್ಮಗುರುಗಳಾದ ಮುದಫರ್ ಶಕೀಲ್‍ಸಾಬ್, ಡಾ.ರಹಮತ್‍ವುಲ್ಲಾ, ಆಫೀಜ್‍ರೆಹಮಾನ್, ಫೈಜಾನ್, ಮುಜಿಬುರ್ ರೆಹಮಾನ್, ಮುಜಮಿಲ್ಲಾ, ನಗರಸಭೆ ಸದಸ್ಯೆ ಶ್ರೀದೇವಿರವರ ಪತಿ ಚಕ್ರವರ್ತಿ,ಈ ಸಂದರ್ಭ ಜಮಾತೆ ಇಸ್ಲಾಮಿ ಹಿಂದ್ ಕಾರ್ಯಕರ್ತರಾದ ಮೌಲಾನಾ ಮುಜಪ್ಫರ್ ಹುಸೇನ್ , ಜೆ.ಡಿ.ಎಸ್. ಮುಖಂಡರಾದ ಎಮ್. ಹನೀಫ್, ಶಕೀಲ್ ನದ್ವಿ, ಉದ್ಯಮಿ ಹಾಜಿ ದಾದಾಪೀರ್, ಡಾ. ರಹಮತುಲ್ಲಾ, ಮುಹಮ್ಮದ್ ಲುಕ್ಮಾನ್ ಸೈಫ್, ಅಬ್ದುಲ್ ರೆಹಮಾನ್, ಮುಸ್ತಕೀಮ್, ಹಾಗೂ ಜಮಾತ್ ನ ವಿದ್ಯಾರ್ಥಿ ಸಂಘಟನೆಯಾದ ಎಸ್.ಐ.ಒ ವಿದ್ಯಾರ್ಥಿಗಳಾದ ಮುನೀಬುರ್ರಹ್ಮಾನ್, ಕಬೀರ್, ಹನ್ನಾನ್, ಮುಜಮ್ಮಿಲ್,ಫೈಜಾನ್, ಸಾದಿಕ್ ರವರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *