Connect with us

Hi, what are you looking for?

ಪ್ರಮುಖ ಸುದ್ದಿ

ಕಿಚ್ಚ ಸುದೀಪ್ ಆರೋಗ್ಯದ ಬಗ್ಗೆ ಸಿಕ್ತು ಕ್ಲಾರಿಟಿ….! ಬಿಗ್ ಬಾಸ್ ನಿರೂಪಣೆ ಬಗ್ಗೆ ಕಿಚ್ಚ ಹೇಳಿದ್ದೇನು…?

ಅಭಿನಯ ಚಕ್ರವರ್ತಿ, ಅಭಿಮಾನಿ ನೆಚ್ಚಿನ ಕಿಚ್ಚ ಸುದೀಪ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿನಿಂದ ನಿನ್ನೆಯಿಂದ ವೈರಲ್ ಆಗ್ತಿದೆ. ಈ ಬಗ್ಗೆ ಸ್ವತಃ ಸುದೀಪ್ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಟ್ವೀಟರ್ ನಲ್ಲಿ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಸ್ಪಷ್ಟಪಡಿಸಿರುವ ಕಿಚ್ಚ, ಆದರೆ, ನಿಖರವಾಗಿ ಆರೋಗ್ಯದಲ್ಲಿ ಏನಾಗಿದೆ ಎಂಬುದರ ಬಗ್ಗೆ ತಿಳಿಸಿಲ್ಲ. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

ಕಿಚ್ಚನ ಟ್ವೀಟ್ ನಲ್ಲಿ ಏನಿದೆ…?

ಅನಾರೋಗ್ಯಕ್ಕೀಡಾಗಿದ್ದೇನೆ. ವಾರಾಂತ್ಯದೊಳಗೆ ಚೇತರಿಸಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಈ ವಾರಾಂತ್ಯದ ‘ಬಿಗ್ ಬಾಸ್’ ಸಂಚಿಕೆಗಳಲ್ಲಿ ಭಾಗವಹಿಸುವುದಿಲ್ಲ. ಇನ್ನೂ ಈ ವಾರದ ಬಿಗ್ ಬಾಸ್ ಎಲಿಮಿನೇಷನ್ಗಾಗಿ ಕ್ರಿಯೇಟಿವ್ ಟೀಮ್ ಕೈಗೊಳ್ಳುವ ಇನ್ನೋವೇಟಿವ್ ಪ್ಲಾನ್ಅನ್ನು ತಿಳಿದುಕೊಳ್ಳುವ ಕುತೂಹಲ ಇದೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

ಕಿಚ್ಚ ಆರೋಗ್ಯದಲ್ಲಿ ತೊಂದರೆ ಉಂಟಾಗಿರುವ ಹಿನ್ನೆಲೆ ಬಿಗ್ ಬಾಸ್ ವೀಕೆಂಡ್ ಕಾರ್ಯಕ್ರಮದಿಂದ ಸುದೀಪ್ ಹಿಂದೆ ಸರಿದಿದ್ದಾರೆ. ವಾರಾಂತ್ಯದಲ್ಲಿ ಸುದೀಪ್ ಎರಡು ಸಂಚಿಕೆ ನಡೆಸಿಕೊಡುತ್ತಿದ್ದರು. ಆದರೆ ಈ ವಾರ ಸುದೀಪ್ ಇಲ್ಲದೇ ಆ ಸಂಚಿಕೆಯನ್ನು ಯಾರು ನಡೆಸಿಕೊಡುವವರೆಂಬ ಕ್ಯೂರಿಯಾಸಿಟಿ ಸ್ವತಃ ಕಿಚ್ಚನಿಗೆ ಕಾಡ್ತಿದೆಯಂತೆ.

ಕಿಚ್ಚನ ಅನಾರೋಗ್ಯದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.
ಆದಷ್ಟೂ ಬೇಗ ವಿಶ್ರಾಂತಿ ಗುಣಮುಖರಾಗಿ ಎಂದು ಅಭಿಮಾನಿಗಳು ಸುದೀಪ್ಗೆ ಹಾರೈಸುತ್ತಿದ್ದಾರೆ. ನೀವಿಲ್ಲದೆ ಬಿಗ್ ಬಾಸ್ ಊಹಿಸಿಕೊಳ್ಳುವುದು ಕಷ್ಟ ಅಂತಲೂ ಫ್ಯಾನ್ಸ್ ಕಿಚ್ಚನ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಕೊಡಗು: ಸದ್ಯ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರ ಸಹಾಯಕ್ಕಾಗಿ ಅದೆಷ್ಟೋ ಜನ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈ ಮಧ್ಯೆ ಅಲ್ಲೊಬ್ಬ ಯುವಕ ತನ್ನ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಬೆಂಗಳೂರು : ಸಂಚಾರಿ ವಿಜಯ್ ಅವರು ನಟನೆಯಲ್ಲಿ ಅದ್ಭುತ ನಟ ಅನ್ನೋದು ಎಲ್ಲರಿಗೂ ಗೊತ್ತು. ತನ್ನ ನಟನೆಯಿಂದಲೇ ಎಲ್ಲರ ಗಮನ ಸೆಳೆದ ನಟ. ತಾನೊಬ್ಬ ನಟ ಎಂಬ ಹಮ್ಮಿಗಿಂತ ತಾನೊಬ್ಬ ಕಲಾವಿದ ಎಂಬಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಬೆಂಗಳೂರು, (ಜೂ.15) : ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವ ಕುರಿತು ಪರಿಶೀಲಿಸಿ ನಿರ್ಧಾರ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ರಾಜ್ಯ...

ಪ್ರಮುಖ ಸುದ್ದಿ

ಬೆಂಗಳೂರು: ಮೊದಲ ಹಂತದ ಅನ್ಲಾಕ್ ಶುರುವಾಗಿದ್ದು, ಬಿಬಿಎಂಪಿ ಆಟೋ ಚಾಲಕರಿಗೆ ಹೊಸ ರೂಲ್ಸ್ ತಂದಿದೆ. ಈ ರೂಲ್ಸ್ ಪ್ರಕಾರ ಆಟೋ ಡ್ರೈವರ್ ಗಳು ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇದ್ರೆ ಆಟೋ ಚಾಲನೆ ಮಾಡುವ ಹಾಗಿಲ್ಲ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಬೈಕ್ ಅಪಘಾತದಿಂದ ತೀವ್ರ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿನ್ನೆ ನಿಧನರಾಗಿದ್ದರು. ಇಂದು ರವಿಂದ್ರ ಕಲಾಕ್ಷೇತ್ರದಲ್ಲಿ ಅವರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಇಂಡಸ್ಟ್ರಿಯಲ್ಲಿ ಎಲ್ಲರೊಟ್ಟಿಗೂ ಬೆರೆಯುತ್ತಿದ್ದ ನಟ....

ಪ್ರಮುಖ ಸುದ್ದಿ

ಇತರರು ತನಗೆ ಸ್ವಲ್ಪ ಕಷ್ಟ ಕೊಟ್ಟರೂ ಕ್ಷಮಾ ಗುಣವು ದೀರ್ಘಾಯಸ್ಸನ್ನು ಕೊಡುತ್ತದೆ. ಇದು ಹೇಗೆ ಸಾಧ್ಯ ಎಂದು ಅಂದುಕೊಳ್ಳುತ್ತಿರುವಿರಾ? ಈ ಮಾತಿಗೆ ಕೆಲವರು ವಿರೋಧವನ್ನು ವ್ಯಕ್ತಪಡಿಸುವವರೂ ಇರುವರು. ಯಾಕೆಂದರೆ ಅಂಥವರ ಪ್ರಕಾರವಾಗಿ ಇತರರ...

ದಿನ ಭವಿಷ್ಯ

ಮಂಗಳವಾರ ರಾಶಿ ಭವಿಷ್ಯ-ಜೂನ್-15,2021 ಮಿಥುನ ಸಂಕ್ರಾಂತಿ ಸೂರ್ಯೋದಯ: 05:52 AM, ಸೂರ್ಯಸ್ತ: 06:45 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಜ್ಯೇಷ್ಠ ಮಾಸ,ಉತ್ತರಾಯಣ, ವಸಂತ ಋತು,...

ಪ್ರಮುಖ ಸುದ್ದಿ

ಬೆಂಗಳೂರು: ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 6835 ಹೊಸ ಪ್ರಕರಣ ಪತ್ತೆಯಾಗಿದೆ. 31828 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್, 117914 RTPCR ಟೆಸ್ಟ್ ಸೇರಿದಂತೆ ಒಟ್ಟು,...

error: Content is protected !!