ಚಿತ್ರದುರ್ಗದಲ್ಲಿ ಅರಳಿದ ಹೂವುಗಳು ಚಿತ್ರದ ಚಿತ್ರೀಕರಣಕ್ಕೆ  ಚಾಲನೆ

1 Min Read

ಚಿತ್ರದುರ್ಗ : ನಿವೃತ್ತ ಶಿಕ್ಷಕ ಕೆ.ಮಂಜುನಾಥನಾಯ್ಕರವರ ಸೋನು ಫಿಲಂಸ್ ಕಾದಂಬರಿ ಆಧಾರಿತ ಅರಳಿದ ಹೂವುಗಳು ಚಿತ್ರಕ್ಕೆ ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಹೊಳಲ್ಕೆರೆ ರಸ್ತೆಯಲ್ಲಿರುವ ಬರಗೇರಮ್ಮ ದೇವಸ್ಥಾನದಲ್ಲಿ ಸೋಮವಾರ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಚಿತ್ರದುರ್ಗ ಸುತ್ತಮುತ್ತ ಹಾಗೂ ಬೆಂಗಳೂರಿನಲ್ಲಿ 30 ದಿನಗಳ ಕಾಲ ನಡೆಯುವ ಚಿತ್ರೀಕರಣ ಯಶಸ್ವಿಯಾಗಿ ಅತ್ಯುತ್ತಮವಾಗಿ ಮೂಡಿ ಬರಲಿ ಎಂದು ಸ್ವಾಮೀಜಿ ಶುಭ ಹಾರೈಸಿದರು.

ನಿರ್ಮಾಪಕ ಹಾಗೂ ನಟ ಕೆ.ಮಂಜುನಾಥನಾಯ್ಕ, ಧನಲಕ್ಷ್ಮಿ, ಭಾಗ್ಯಶ್ರೀ, ಶಶಿಕಲ ಇನ್ನು ಮೊದಲಾದವರು ನಟಿಸಿರುವ ಅರಳಿದ ಹೂವುಗಳು ಚಿತ್ರಕ್ಕೆ ಬಿ.ಎ.ಪುರುಷೋತ್ತಮ್ ಓಂಕಾರ್ ನಿರ್ದೇಶನವಿದೆ. ಸಹ ನಿರ್ದೇಶನ ದೀಪು ಅವಂತ್‍ಕರ್, ಛಾಯಾಗ್ರಹಣ ಮುತ್ತುರಾಜ್,
ನಂದಮಸಂದ್ ಸೇವಾಲಾಲ್ ಸ್ವಾಮೀಜಿ ಚಿತ್ರೀಕರಣದ ಶುಭ ಮುಹೂರ್ತದಲ್ಲಿ ಉಪಸ್ಥಿತರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *