Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಚಿತ್ರಹಳ್ಳಿ ಗೇಟ್ ಪೊಲೀಸರಿಂದ ಇಬ್ಬರು ಕೊಲೆ ಆರೋಪಿಗಳ ಬಂಧನ

Facebook
Twitter
Telegram
WhatsApp

ಚಿತ್ರದುರ್ಗ,(ಜ.17) : ಹೊಳಲ್ಕೆರೆ ತಾಲ್ಲೂಕು ಶಿವಗಂಗ ಗ್ರಾಮದಲ್ಲಿ ಜನವರಿ 13 ರಂದು ನಡೆದ ಬಸವರಾಜ, (35 ವರ್ಷ) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ತಾಲ್ಲೂಕಿನ

ಚಿತ್ರಹಳ್ಳಿ ಗೇಟ್ ಪೊಲೀಸರು ಜನವರಿ 16 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಹಿರಿಯೂರು ತಾಲ್ಲೂಕಿನ ಪಿಲಾಲಿ ಗ್ರಾಮದ ತಿಮ್ಮರಾಜು ಮತ್ತು ರಾಧಮ್ಮ ಎಂದು ಗುರುತಿಸಲಾಗಿದೆ.
ಹಣಕಾಸಿನ ವಿಚಾರಕ್ಕಾಗಿ ಈ ಕೊಲೆ ಮಾಡಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು.

 ಎಸ್.ಪಿ. ಪರುಶುರಾಮ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿರುವುದು.

ಕೃತ್ಯದ ಹಿನ್ನೆಲೆ:  ತಿಮ್ಮರಾಜು ಮತ್ತು  ರಾಧಮ್ಮ ಇವರು ಗಂಡ
ಹೆಂಡತಿಯರಾಗಿದ್ದು, 2020 ನೇ ಇಸವಿಯಲ್ಲಿ ಲಾಕ್‍ಡೌನ್ಯ ಆದಾಗ ಮೃತ ಬಸವರಾಜನು ತನ್ನ ಹೆಂಡತಿ ದಿವ್ಯಳು
ಹೆರಿಗೆಗೆಂದು ತನ್ನ ತವರುಮನೆಗೆ ಹೋಗಿದ್ದರಿಂದ ತನ್ನ ಅಕ್ಕ ರಾಧಮ್ಮ ಮತ್ತು ಅವರ ಮಕ್ಕಳನ್ನು ಶಿವಗಂಗ ಗ್ರಾಮಕ್ಕೆ ಕರೆಯಿಸಿಕೊಂಡು ತನ್ನದೆ ಸ್ಟುಡಿಯೋದಲ್ಲಿ ಇಟ್ಟುಕೊಂಡಿದ್ದು ಅಂದಿನಿಂದ ರಾಧಮ್ಮ ಮತ್ತು ಮಕ್ಕಳು ಶಿವಗಂಗ ಗ್ರಾಮದಲ್ಲಿಯೇ ವಾಸವಾಗಿದ್ದರು.

ಮೃತ ಬಸವರಾಜನು ತನ್ನ ಭಾವ ತಿಮ್ಮರಾಜುಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿರುತ್ತಾನೆ. ತಿಮ್ಮರಾಜು ತನ್ನ ಹೆಂಡತಿ ಮಕ್ಕಳನ್ನು ತನ್ನ ಮನೆಗೆ ವಾಪಾಸ್ ಕಳುಹಿಸು ಎಂದಾಗ ನಾನು ಕೊಟ್ಟಿರುವ
ದುಡ್ಡು, ಅದರ ಬಡ್ಡಿ, ನಿನ್ನ ಹೆಂಡತಿ ಮಕ್ಕಳನ್ನು 2 ವರ್ಷದಿಂದ ಸಾಕಿದ್ದಕ್ಕೆ 4 ಲಕ್ಷ ರೂ ಒಟ್ಟು 5 ಲಕ್ಷ ರೂಪಾಯಿಗಳನ್ನು ಕೊಡಬೇಕು. ಇಲ್ಲದಿದ್ದರೆ ನಿನ್ನ ಹೆಂಡತಿ ಮಕ್ಕಳನ್ನು ಕಳುಹಿಸುವುದಿಲ್ಲ. ನೀನು ಅವರನ್ನು ಕರೆಯಲು ಬಂದರೆ ಸಾಯಿಸಿ ಬಿಡುತ್ತೇನೆ ಎಂದು ಹಣಕಾಸಿನ ವಿಚಾರದಲ್ಲಿ ಪ್ರಾಣಬೆದರಿಕೆ ಹಾಕಿರುತ್ತಾನೆ. ತಿಮ್ಮರಾಜು, ಬಸವರಾಜ ಬದುಕಿದ್ದರೇ ನನ್ನನ್ನೆ ಸಾಯಿಸಿಬಿಡುತ್ತಾನೆ. ಇವನು ಬದುಕಿದ್ದರೆ ನಮಗೆ ನೆಮ್ಮದಿಯಿಲ್ಲ. ಇವನನ್ನು ಏನಾದರೂ
ಮಾಡಿ ಮುಗಿಸಿಬಿಡೋಣ ಎಂದು ತಿಮ್ಮರಾಜು ಮತ್ತು ರಾಧಮ್ಮ ಇಬ್ಬರು ಸಂಚನ್ನು ರೂಪಿಸಿ, ಜನವರಿ 14 ರಂದು ಬೆಳಿಗ್ಗೆ ಸುಮಾರು 4-45 ಗಂಟೆ ಸಮಯದಲ್ಲಿ ಬಸವರಾಜನು ಒಬ್ಬನೇ ತನ್ನ ಮನೆಯಲ್ಲಿ ಮಲಗಿದ್ದಾಗ ಇಬ್ಬರು ಮನೆಯ ಒಳಗಡೆ ಪ್ರವೇಶ ಮಾಡಿ ಗಾಢ
ನಿದ್ರೆಯಲ್ಲಿದ್ದ ಬಸವರಾಜನ ತಲೆಗೆ ಮುಖಕ್ಕೆ, ಹರಿತವಾದ ಕಬ್ಬಿಣದ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಮಾಡಿರುತ್ತಾನೆ. ರಾಧಮ್ಮ ಕೊಲೆ ಮಾಡಲು ಸಹಕರಿಸಿ, ಬಸವರಾಜನನ್ನು ಕೊಲೆ ಮಾಡಿದ ನಂತರ ರಕ್ತದ ಕಲೆಯಾಗಿದ್ದ ತಿಮ್ಮರಾಜು ಬಟ್ಟೆಗಳನ್ನು ಸುಟ್ಟುಹಾಕಿ ಬಸವರಾಜನ ಮೊಬೈಲ್ ಫೋನ್‍ನ್ನು ಸಹ ಸುಟ್ಟು ಸಾಕ್ಷಿಗಳನ್ನು ನಾಶ ಮಾಡಿರುತ್ತಾಳೆ.

ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಈ ದೂರಿನನ್ವಯ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಲು ಶ್ರೀ ಕೆ.ಪರುಶುರಾಮ, ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ.ಎಸ್.ಜೆ.ಕುಮಾರಸ್ವಾಮಿ ರವರ
ಮಾರ್ಗದರ್ಶನದಲ್ಲಿ ಚಿತ್ರದುರ್ಗ ಪೊಲೀಸ್ ಉಪಾಧೀಕ್ಷಕರವರಾದ ಎನ್.ಎಸ್ ಅನಿಲ್‍ಕುಮಾರ್ ನೇತೃತ್ವದಲ್ಲಿ ಹೊಳಲ್ಕೆರೆ ವೃತ್ತದ ಪೊಲೀಸ್ ನಿರೀಕ್ಷಕರಾದ ಕೆ.ಎನ್. ರವೀಶ್, ಚಿತ್ರಹಳ್ಳಿ ಗೇಟ್ ಪೊಲೀಸ್ ಉಪನಿರೀಕ್ಷಕರವರಾದ ಶ್ರೀಮತಿ ಆಶಾ ಮತ್ತು ಸಿಬ್ಬಂದಿಯವರಾದ ಜಿ.ನಾಗರಾಜು, ರುದ್ರೇಶ, ಸನಾವುಲ್ಲಾ, ಆರ್.ಡಿ.ರಮೇಶ ಎನ್.ತಿಮ್ಮಣ್ಣ, ಕೆ.ಜೆ.ಲೊಕೇಶ್, ವೀರೇಶ, ತಿಮ್ಮೇಶ, ಶಿವಣ್ಣ, ಬಿ.ಜಿ ರವಿಕುಮಾರ, ಗಿರೀಶ, ಸಂತೋಷ, ಮಹಿಳಾ ಸಿಬ್ಬಂದಿಯವರಾದ ಮಮತ, ಪುಷ್ಪ, ಸವಿತ ರವರನ್ನು ಒಳಗೊಂಡ ವಿಶೇಷ ತಂಡ ಪ್ರಕರಣ  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಇಬ್ಬರೂ ಆರೋಪಿಗಳನ್ನು ಬಂಧಿಸಿ, ಅವರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಆಯುಧವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚಿತ್ರ ಹಳ್ಳಿ ಗೇಟ್ ಪೊಲೀಸರ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಕೆ. ಪರುಶುರಾಮ ಅವರು ಶ್ಲಾಘಿಸಿರುತ್ತಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!