Connect with us

Hi, what are you looking for?

ಪ್ರಮುಖ ಸುದ್ದಿ

ಕೋಟೆನಾಡಲ್ಲಿ ಮೊಳಗಿದ ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಕೂಗು

ಚಿತ್ರದುರ್ಗ : ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರ್ಪಡೆಗೊಳಿಸುವಂತೆ ಕಾಗಿನೆಲೆ ಕನಕ ಗುರುಪೀಠದಿಂದ ರಾಜಧಾನಿ ಬೆಂಗಳೂರಿಗೆ ಹೊರಟಿರುವ ಎಸ್.ಟಿ.ಮೀಸಲಾತಿ ಹೋರಾಟ ಪಾದಯಾತ್ರೆಯನ್ನು ಶನಿವಾರ ಐತಿಹಾಸಿಕ ಚಿತ್ರದುರ್ಗ ಕೋಟೆ ನಗರಿಗೆ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ನಿರಂಜನಾನಂದಪುರಿ, ಈಶ್ವರಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ 22 ದಿನಗಳ ಕಾಲ 340 ಕಿ.ಮೀ.ಪಾದಯಾತ್ರೆ ಹೊರಟಿದ್ದು, ಮಾಳಪ್ಪನಹಟ್ಟಿ ಸಮೀಪವಿರುವ ತಿರುಮಲ ಕಲ್ಯಾಣ ಮಂಟಪದಿಂದ ಮೆರವಣಿಗೆ ಮೂಲಕ ಚಳ್ಳಕೆರೆ ಟೋಲ್‍ಗೇಟ್ ಸಮೀಪವಿರುವ ಎಸ್.ಕೆ.ಎಸ್.ಸಮುದಾಯ ಭವನ ತಲುಪಿತು.

ತಮಟೆ, ಉರುಮೆ, ಡೊಳ್ಳು, ಕಹಳೆ, ವೀರಗಾಸೆ ನೃತ್ಯ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿದ್ದವು. ಹೊಳಲ್ಕೆರೆ ರಸ್ತೆಯಲ್ಲಿರುವ ಕನಕ ಪ್ರತಿಮೆ, ಸಂಗೊಳ್ಳಿರಾಯಣ್ಣ ಪ್ರತಿಮೆ, ಅಂಬೇಡ್ಕರ್, ಮದಕರಿನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಕುರುಬ ಸಮಾಜದ ಪುರುಷ ಮಹಿಳೆಯರು ವಿಶೇಷವಾಗಿ ಯುವತಿಯರು ಡೊಳ್ಳಿನ ಸದ್ದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಕೆಲವರು ಕರಿಕಂಬಳಿಯನ್ನು ಹೆಗಲ ಮೇಲೆ ಹೊದ್ದುಕೊಂಡಿದ್ದರು. ಮತ್ತೆ ಕೆಲವರು ಭಂಡಾರಗಳನ್ನು ಪೂಸಿಕೊಂಡು ಮೆರವಣಿಗೆಯುದ್ದಕ್ಕೂ ಜೈಕಾರಗಳನ್ನು ಕೂಗುತ್ತ ಸಾಗುತ್ತಿದ್ದುದು ಕಂಡು ಬಂದಿತು. ಕುರಿ ಸಾಕಾಣಿಕೆಯೆ ಕುರುಬ ಸಮುದಾಯದ ವೃತ್ತಿಯಾಗಿರುವುದರಿಂದ ಅಲ್ಲಲ್ಲಿ ಟಗರುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ರಸ್ತೆಯುದ್ದಕ್ಕೂ ಅಲ್ಲಲ್ಲಿ ನೀರು ಸಿಂಪಡಿಸಿ ಮೆರವಣಿಗೆಯನ್ನು ಸ್ವಾಗತಿಸುತ್ತಿದ್ದರು. ಪ್ರಮುಖ ರಸ್ತೆ ಸೇರಿದಂತೆ ಎಲ್ಲಾ ವೃತ್ತಗಳನ್ನು ಹಳದಿ ಬಣ್ಣದ ವಸ್ತ್ರ ಹಾಗೂ ಭಾವುಟಗಳಿಂದ ಸಿಂಗರಿಸಲಾಗಿತ್ತು. ರಸ್ತೆ ಮಧ್ಯದಲ್ಲಿರುವ ಡಿವೈಡರ್‍ಗಳ ಉದ್ದಕ್ಕೂ ಬಾಳೆ ಕಂದುಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಪೊಲೀಸರು ಸಂಚಾರವನ್ನು ನಿಯಂತ್ರಿಸಿ ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.

ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಕುರುಬ ಸಮಾಜದ ಮುಖಂಡರಾದ ಆರ್.ಮಂಜುನಾಥ್, ನಿಶಾನಿ ಜಯಣ್ಣ, ಮಲ್ಲಿಕಾರ್ಜುನ್ ಎಸ್.ಬಿ.ಎಲ್, ಸುರೇಶ್‍ತಕ್ಕಡಿ, ಡಿ.ವಿ.ಟಿ.ಕರಿಯಪ್ಪ, ಜೆ.ಶಶಿಧರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಂ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಕಾಂ.ಜಿ.ಸಿ.ಸುರೇಶ್‍ಬಾಬು, ಉಮಾಶಂಕರ್, ಬಿ.ಟಿ.ಜಗದೀಶ್, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ನಗರಸಭೆ ಮಾಜಿ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್, ಜಿ.ಪಂ.ಸದಸ್ಯ ಅನಂತ್, ನ್ಯಾಯವಾದಿ ಜಿ.ಎಸ್.ಕುಮಾರ್‌ ಗೌಡ, ಕಂದಿಕೆರೆ ಸುರೇಶ್‍ಬಾಬು ಸೇರಿದಂತೆ ಮತ್ತಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಕುರುಬ ಸಮಾಜದವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

  ಸೂರ್ಯೋದಯ: 06:36 AM, ಸೂರ್ಯಸ್ತ: 06:26 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ, ಶಿಶಿರ ಋತು, ಉತ್ತರಾಯಣ, ಶುಕ್ಲ ಪಕ್ಷ, ತಿಥಿ: ತ್ರಯೋದಶೀ ( 17:19 ) ನಕ್ಷತ್ರ: ಪುಷ್ಯ...

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರದ ಕರೋನ ವೈರಸ್ ಗೆ ಸಂಬಂಧಿಸಿದಂತೆ ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 22,432 ಮಂದಿಗೆ ಸೋಂಕು ತಗುಲಿದಂತಾಗಿದೆ. ಇಂದು ಯಾರೊಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿಲ್ಲ. ಇಲ್ಲಿಯವರೆಗೂ 22,133...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕರೋನ ವೈರಸ್ ವರದಿಗೆ ಸಂಬಂಧಿಸಿದಂತೆ ಬುಧವಾರ 5 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 14,893ಕ್ಕೆ ಏರಿಕೆಯಾಗಿದೆ. 6 ಜನರು ಗುಣಮುಖರಾಗಿದ್ದು, 1483 ಜನರ...

ಪ್ರಮುಖ ಸುದ್ದಿ

ಮೊಳಕಾಲ್ಮೂರು : ಅಸ್ಪೃಶ್ಯತೆ ಆಚರಣೆ ಹಾಗೂ ಪರಿಶಿಷ್ಟ ಜಾತಿ, ವರ್ಗಗಳ ಮೇಲೆ ದೌರ್ಜನ್ಯ ಎಸಗುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರಕ್ಷಕ ಉಪ ನಿರೀಕ್ಷಕ ಬಸವರಾಜ್...

ಪ್ರಮುಖ ಸುದ್ದಿ

ಚಿತ್ರದುರ್ಗ :ಬುಧವಾರ ಮುಂಜಾನೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ನಗರ ಪ್ರದಕ್ಷಿಣೆ ನಡೆಸಿದರು. ನಗರದ ಬಿ.ಡಿ.ರಸ್ತೆಯ ಚಳ್ಳಕೆರೆ ಗೇಟ್, ಒನಕೆ ಓಬವ್ವ ಸ್ಟೇಡಿಯಂ ತಿರುವು, ಮೆಜೆಸ್ಟಿಕ್ ವೃತ್ತ, ಶಂಕರ್ ಟಾಕೀಸ್ ಎದುರು, ಗಾಂಧಿವೃತ್ತ, ಕೆಎಸ್‍ಆರ್‍ಟಿಸಿ...

ಪ್ರಮುಖ ಸುದ್ದಿ

ಈ ರಾಶಿಯವರಿಗೆ ವಿವಾಹ ಮತ್ತು ಗೃಹನಿರ್ಮಾಣ ಕನಸು ನನಸಾಗಲಿದೆ ಬುಧವಾರ- ರಾಶಿ ಭವಿಷ್ಯ ಫೆಬ್ರವರಿ-24,2021 ಸೂರ್ಯೋದಯ: 06:37 AM, ಸೂರ್ಯಸ್ತ: 06:26 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ,ಶಿಶಿರ ಋತು, ಉತ್ತರಾಯಣ...

ಪ್ರಮುಖ ಸುದ್ದಿ

ಚಿತ್ರದುರ್ಗ : ಕತ್ತೆಹೊಳೆ ಅರಣ್ಯ ವಾಸಿ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸಬಾರದೆಂದು ಕರ್ನಾಟಕ ಭೂಹಕ್ಕುದಾರರ ವೇದಿಕೆ ಮತ್ತು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಯವರಿಗೆ ಮನವಿ ಸಲ್ಲಿಸಿತು. ಅರಣ್ಯ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ : ಫೆ.22ರಂದು ವಿಶ್ವ ಮೆದುಳಿನ ಉರಿಯೂತ ದಿನದ ಅಂಗವಾಗಿ ನಗರದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿ ಕಟ್ಟಡ ಹಾಗೂ ಆಸ್ಪತ್ರೆಗಳನ್ನು ಕೆಂಪು ದೀಪಗಳಿಂದ ಬೆಳಗಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು....

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಮಂಗಳವಾರ ಕರೋನ ವೈರಸ್ ವರದಿಗೆ ಸಂಬಂಧಿಸಿದಂತೆ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 14,888ಕ್ಕೆ ಏರಿಕೆಯಾಗಿದೆ. ಮೂವರು ಗುಣಮುಖರಾಗಿದ್ದು, 1266 ಜನರ ಗಂಟಲು, ಮೂಗು...

error: Content is protected !!