Connect with us

Hi, what are you looking for?

ಪ್ರಮುಖ ಸುದ್ದಿ

ಅಧಿವೇಶನದಲ್ಲಿ ಮೊಳಗಲಿದೆ ಕುರುಬರ ಎಸ್ಟಿ ಮೀಸಲಾತಿ ಸದ್ದು; ಪಕ್ಷಾತೀತವಾಗಿ ಧ್ವನಿಗೂಡಿಸಲು ಸ್ವಾಮೀಜಿ ಕರೆ

ಚಿತ್ರದುರ್ಗ : ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರ್ಪಡೆಗೊಳಿಸುವಂತೆ ಕಾಗಿನೆಲೆ ಕನಕ ಗುರುಪೀಠ ದಿಂದ ಹೊರಟ ಪಾದಯಾತ್ರೆ ರಾಜಧಾನಿಯನ್ನು ತಲುಪುವ ಮುನ್ನವೇ ವಿಧಾನಸೌಧದಲ್ಲಿ ಎಸ್ಟಿ ಮೀಸಲು ಸದ್ದು ಮೊಳಗಲಿದೆ.

ಕಾಗಿನೆಲೆಯಿಂದ ನಿರಂಜನಾನಂದಪುರಿ, ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ 22 ದಿನದ 340 ಕಿ.ಮೀ. ಐತಿಹಾಸಿಕ ಪಾದಯಾತ್ರೆ ಜ.23 ರಂದು ಚಿತ್ರದುರ್ಗ ತಲುಪಿದೆ. ಇನ್ನೂ 200 ಕಿ.ಮೀ. ಹಾದಿ ಕ್ರಮಿಸಬೇಕು. ಈ ಹೊತ್ತಿಗೆ ಕುರುಬ ಸಮುದಾಯದ ಶಕ್ತಿ ಅದ್ಭುತವಾಗಿ ಪ್ರದರ್ಶನವಾಗಿದ್ದು, ಶಕ್ತಿ ಕೇಂದ್ರದಲ್ಲಿ ಸದ್ದು ಮೊಳಗಲು ವೇದಿಕೆ ಸಜ್ಜಾಗಿದೆ.

ಚಿತ್ರದುರ್ಗದ ಕಬೀರಾನಂದ ಸಮುದಾಯ ಭವನದಲ್ಲಿ ಶನಿವಾರ ನಡೆದ ಸಮುದಾಯದ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದ ಶಾಸಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ ” ಇನ್ನೂ ಕೆಲ ದಿನಗಳಲ್ಲೇ ಪ್ರಾರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕೆಂದು ಹಕ್ಕೊತ್ತಾಯ ಮಾಡಲಾಗುತ್ತದೆ. ಈ ಮೂಲಕ ಪಾದಯಾತ್ರೆ ಬೆಂಗಳೂರು ತಲುಪುವ ಮುನ್ನವೇ ಸ್ವಾಮೀಜಿಗಳಿಗೆ ಸಿಹಿ ಸುದ್ದಿ ನೀಡಲಾಗುವುದು ” ಎಂದು ಹೇಳಿದರು.

ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಸಮುದಾಯದ ಹಿತದೃಷ್ಟಿಯಿಂದ ಈ ಬೃಹತ್ ಪಾದಯಾತ್ರೆ ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಶಾಸಕ ಬಂಡೆಪ್ಪ ಕಾಶಂಪುರ್ ಅವರಿಗೆ ಅಧಿವೇಶನದಲ್ಲಿ ಎಲ್ಲ ಪಕ್ಷದ ಸಮುದಾಯದ ಶಾಸಕರು, ಸಚಿವರು ಧ್ವನಿಗೂಡಿಸಬೇಕು. ಈ ಮೂಲಕ ಹೋರಾಟಕ್ಕೆ ಜಯ ತಂದು ಕೊಟ್ಟು ಸಮುದಾಯಕ್ಕೆ ಒಳಿತು ಮಾಡಬೇಕು ಎಂದು ಕರೆ ನೀಡಿದರು.

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

  ಸೂರ್ಯೋದಯ: 06:36 AM, ಸೂರ್ಯಸ್ತ: 06:26 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ, ಶಿಶಿರ ಋತು, ಉತ್ತರಾಯಣ, ಶುಕ್ಲ ಪಕ್ಷ, ತಿಥಿ: ತ್ರಯೋದಶೀ ( 17:19 ) ನಕ್ಷತ್ರ: ಪುಷ್ಯ...

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರದ ಕರೋನ ವೈರಸ್ ಗೆ ಸಂಬಂಧಿಸಿದಂತೆ ನಾಲ್ವರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 22,432 ಮಂದಿಗೆ ಸೋಂಕು ತಗುಲಿದಂತಾಗಿದೆ. ಇಂದು ಯಾರೊಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿಲ್ಲ. ಇಲ್ಲಿಯವರೆಗೂ 22,133...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಕರೋನ ವೈರಸ್ ವರದಿಗೆ ಸಂಬಂಧಿಸಿದಂತೆ ಬುಧವಾರ 5 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 14,893ಕ್ಕೆ ಏರಿಕೆಯಾಗಿದೆ. 6 ಜನರು ಗುಣಮುಖರಾಗಿದ್ದು, 1483 ಜನರ...

ಪ್ರಮುಖ ಸುದ್ದಿ

ಮೊಳಕಾಲ್ಮೂರು : ಅಸ್ಪೃಶ್ಯತೆ ಆಚರಣೆ ಹಾಗೂ ಪರಿಶಿಷ್ಟ ಜಾತಿ, ವರ್ಗಗಳ ಮೇಲೆ ದೌರ್ಜನ್ಯ ಎಸಗುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರಕ್ಷಕ ಉಪ ನಿರೀಕ್ಷಕ ಬಸವರಾಜ್...

ಪ್ರಮುಖ ಸುದ್ದಿ

ಚಿತ್ರದುರ್ಗ :ಬುಧವಾರ ಮುಂಜಾನೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ನಗರ ಪ್ರದಕ್ಷಿಣೆ ನಡೆಸಿದರು. ನಗರದ ಬಿ.ಡಿ.ರಸ್ತೆಯ ಚಳ್ಳಕೆರೆ ಗೇಟ್, ಒನಕೆ ಓಬವ್ವ ಸ್ಟೇಡಿಯಂ ತಿರುವು, ಮೆಜೆಸ್ಟಿಕ್ ವೃತ್ತ, ಶಂಕರ್ ಟಾಕೀಸ್ ಎದುರು, ಗಾಂಧಿವೃತ್ತ, ಕೆಎಸ್‍ಆರ್‍ಟಿಸಿ...

ಪ್ರಮುಖ ಸುದ್ದಿ

ಈ ರಾಶಿಯವರಿಗೆ ವಿವಾಹ ಮತ್ತು ಗೃಹನಿರ್ಮಾಣ ಕನಸು ನನಸಾಗಲಿದೆ ಬುಧವಾರ- ರಾಶಿ ಭವಿಷ್ಯ ಫೆಬ್ರವರಿ-24,2021 ಸೂರ್ಯೋದಯ: 06:37 AM, ಸೂರ್ಯಸ್ತ: 06:26 PM ಶಾರ್ವರೀ ನಾಮ ಸಂವತ್ಸರ ಮಾಘ ಮಾಸ,ಶಿಶಿರ ಋತು, ಉತ್ತರಾಯಣ...

ಪ್ರಮುಖ ಸುದ್ದಿ

ಚಿತ್ರದುರ್ಗ : ಕತ್ತೆಹೊಳೆ ಅರಣ್ಯ ವಾಸಿ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸಬಾರದೆಂದು ಕರ್ನಾಟಕ ಭೂಹಕ್ಕುದಾರರ ವೇದಿಕೆ ಮತ್ತು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿಯವರಿಗೆ ಮನವಿ ಸಲ್ಲಿಸಿತು. ಅರಣ್ಯ ಮತ್ತು...

ಪ್ರಮುಖ ಸುದ್ದಿ

ಚಿತ್ರದುರ್ಗ : ಫೆ.22ರಂದು ವಿಶ್ವ ಮೆದುಳಿನ ಉರಿಯೂತ ದಿನದ ಅಂಗವಾಗಿ ನಗರದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸರ್ಕಾರಿ ಕಚೇರಿ ಕಟ್ಟಡ ಹಾಗೂ ಆಸ್ಪತ್ರೆಗಳನ್ನು ಕೆಂಪು ದೀಪಗಳಿಂದ ಬೆಳಗಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು....

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯಲ್ಲಿ ಮಂಗಳವಾರ ಕರೋನ ವೈರಸ್ ವರದಿಗೆ ಸಂಬಂಧಿಸಿದಂತೆ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 14,888ಕ್ಕೆ ಏರಿಕೆಯಾಗಿದೆ. ಮೂವರು ಗುಣಮುಖರಾಗಿದ್ದು, 1266 ಜನರ ಗಂಟಲು, ಮೂಗು...

error: Content is protected !!