Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನೀಟ್ ಹಾಗೂ ಐಐಟಿ-ಜೆಇಇ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಎಸ್. ಆರ್. ಎಸ್. ಪಿಯು ಕಾಲೇಜು ವಿದ್ಯಾರ್ಥಿಗಳು

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, (ನ.02) : ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು 2021ರ ನೀಟ್ ಮೆಡಿಕಲ್ ಫಲಿತಾಂಶದಲ್ಲಿ ಅತ್ಯುತ್ತಮ ರ್ಯಾಂಕ್‍ಗಳೊಂದಿಗೆ ಇತಿಹಾಸ ದಾಖಲಿಸಿದ್ದಾರೆ.

ನ.01 ರಂದು ಪ್ರಕಟಗೊಂಡ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿ ಕು.ಆರ್ ಶ್ರೇಯಸ್, 620 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 1539ನೇ ಕ್ಯಾಟಗರಿ ರ್ಯಾಂಕ್ ಪಡೆದು ಜಿಲ್ಲೆಗೆ  ಕೀರ್ತಿಯನ್ನು ತಂದಿದ್ದಾರೆ.

ಅತ್ಯುತ್ತಮ ಸಾಧನೆ ಮಾಡಿದ  ಕು. ಎಲ್ ಎನ್ ನಿಹಾರಿಕ, 601 ಅಂಕಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 7779ನೇ ಕ್ಯಾಟಗರಿ ರ್ಯಾಂಕ್ ಪಡೆದಿದ್ದಾರೆ.

ಜೆಇಇ ಮೈನ್ಸ್‍ನಲ್ಲಿ ರಾಷ್ಟ್ರಮಟ್ಟದಲ್ಲಿ 525ನೇ ರ್ಯಾಂಕ್ ಪಡೆದಿದ್ದ ಕು. ಅಮೂಲ್ಯ ಎನ್.ಪಿ. ನೀಟ್‍ನಲ್ಲೂ ರಾಷ್ಟ್ರಮಟ್ಟದ 550ನೇ ರ್ಯಾಂಕ್ ಪಡೆದಿರುವುದು ವಿಷೇಶ ಸಾಧನೆಯಾಗಿದೆ.

ಕು.ಅನುಷಾ ಜಿ. ಎಂ – 586,
ಕು.ಕೃಷ್ಣಪ್ರಸಾದ್ ಜಿ ಟಿ.- 578,
ಕು.ಅರ್ಫಾ ಎ ಆರ್- 570,
ಕು. ಶಶಾಂಕ್ ಈ – 560,
ಕು.ಹಿಮಂತ್ ರೆಡ್ಡಿ ಎಂ ಎ – 555,
ಕು. ಆಕಾಶ ಸಿ – 553,
ಕು. ಸಿಂಧು ಜಿ ಆರ್ – 540,
ಕು.ಜಗನ್ನಾಥ್ ಹೆಚ್ ಎನ್ – 540,
ಕು.ನಿಶ್ಚಿತ ಡಿ ಹೆಚ್-  526,
ಕು. ಲತಾ ಸಿ – 524,
ಕು.ಅಮೂಲ್ಯ ಎನ್ ಪಿ – 515,
ಕು.ಉದಯ್ ಕಿರಣ್ ರೆಡ್ಡಿ ಎನ್ – 515 ಹಾಗೂ ಕು.ಎರ್ರಿಸ್ವಾಮಿ ಬಿ – 502,

ಅಂಕಗಳನ್ನು ಪಡೆದು ಮೊದಲ ಸುತ್ತಿನಲ್ಲಿಯೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ಇವರಲ್ಲದೆ ಇತರೆ 21 ವಿದ್ಯಾರ್ಥಿಗಳು 450ಕ್ಕಿಂತ ಅಧಿಕ ಅಂಕಗಳಿಸಿದ್ದು, ಇವರೆಲ್ಲರೂ ವಿವಿಧ ಮೀಸಲಾತಿಗಳಡಿಯಲ್ಲಿ ವೈದ್ಯಕೀಯ ಸೀಟುಗಳನ್ನು ಪಡೆದುಕೊಳ್ಳಲಿದ್ದಾರೆ.

ಇದರೊಂದಿಗೆ ಎಸ್ ಆರ್ ಎಸ್ ಕಾಲೇಜೊಂದರಲ್ಲೇ 37ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟು, 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯುರ್ವೇದ ಹಾಗೂ ಇತರೆ ಭಾರತೀಯ ವೈದ್ಯಕೀಯ ಪದ್ಧತಿಯ ಸೀಟುಗಳನ್ನು ಪಡೆದುಕೊಳ್ಳಲಿದ್ದಾರೆ.

2021ರ ನೀಟ್ ಪ್ರವೇಶ ಪರೀಕ್ಷೆ ಅರ್ಹತೆ ಗಳಿಸಿದವರ ಒಟ್ಟು ಸಂಖ್ಯೆ 178. ಹಾಗೂ ಕಳೆದೆರಡು ವರ್ಷಗಳಿಂದ IIಖಿ ಗೆ ಪ್ರವೇಶ ಪಡೆದವರು 5 ಮತ್ತು ಓIಖಿ ಗೆ 12 ವಿದ್ಯಾರ್ಥಿಗಳು ಓಂಖಿಂ ಗೆ  24,  ಓಆಂ ಗೆ 01   Iಅಂಖ ಗೆ  36 ವಿದ್ಯಾರ್ಥಿಗಳು ಪ್ರವೇಶಾರ್ಹತೆ ಪಡೆಯುವುದರ ಮೂಖಾಂತರ ಮಧ್ಯ ಕರ್ನಾಟಕದಲ್ಲಿ ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅದ್ವಿತೀಯ ಫಲಿತಾಂಶ ನೀಡಿದ ಅತ್ಯುತ್ತಮ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜೆಇಇ ಅಡ್ವಾನ್ಸ್ ನಲ್ಲಿ ರಾಷ್ಟ್ರಮಟ್ಟzಲ್ಲಿ ಸತತ ಎರಡು ವರ್ಷಗಳಿಂದ ಅದ್ವಿತೀಯ ಸಾಧನೆಯೊಂದಿಗೆ    ಅತ್ಯುತ್ತಮ ರ್ಯಾಂಕ್‍ಗಳಿಸಿ ಗಮನ ಸೆಳೆದಿದ್ದ ಬೆನ್ನಲ್ಲೇ ‘ನೀಟ್’ನಲ್ಲೂ ಕೂಡ ಅಮೋಘ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿಯವರು ಅಭಿನಂದನೆಗಳನ್ನು ಸಲ್ಲಿಸಿ ವೈದ್ಯಕೀಯ ಮಹಾದಾಸೆ ಇದ್ದು ಈ ವರ್ಷ ಈಡೇರುವ ಸಾಧ್ಯತೆಗಳಿಲ್ಲದ ವಿದ್ಯಾರ್ಥಿಗಳಿಗೆ ನಾಳೆಯಿಂದಲೇ ಎಸ್.ಆರ್.ಎಸ್ ಕಾಲೇಜಿನಲ್ಲಿ ಪ್ರಾರಂಭವಾಗುವ ನೀಟ್ ಲಾಂಗ್‍ಟರ್ಮ್ ಕೋಚಿಂಗ್ ಉಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿಗಳಾದ ಡಾ.ರವಿ ಟಿ.ಎಸ್. ಪ್ರಾಂಶುಪಾಲರಾದ ಶ್ರೀ ಗಂಗಾಧರ್ ಈ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಎಸ್ಐಟಿ ತನಿಖೆಗೆ : ಡಿಸಿಎಂ ಮಾತಿಗೆ ಅಭಿನಂದನೆ ಸಲ್ಲಿಸಿದ ಠೇವಣಿದಾರರು

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಈ ಮೊದಲು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದರ ತನಿಖೆಯನ್ನು ಎಸ್ಐಟಿಗೆ ವಹಿಸುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೀದರ್, ಏಪ್ರಿಲ್ 25: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

error: Content is protected !!