ಚಿತ್ರದುರ್ಗ ಗ್ರಾಮೀಣ ಪ್ರದೇಶದಲ್ಲಿ ಮೇ 20 ರಿಂದ 22 ರವರೆಗೆ ವಿದ್ಯುತ್ ವ್ಯತ್ಯಯ

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಮೇ.19) : ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಪಂಡರಹಳ್ಳಿ ವಿ.ವಿ.ಕೇಂದ್ರದಲ್ಲಿ 20ಎಂ.ವಿ.ಎ ಪರಿವರ್ತಕ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇದೇ ಮೇ.20 ರಿಂದ 22 ರವರೆಗೆ ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಮಾರ್ಗಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ಅಡಚಣೆ ಯಾಗುವ ಪ್ರದೇಶಗಳು: 66/11 ಕೆವಿ ಪಂಡರಹಳ್ಳಿ ವಿವಿ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಅಡಚಣೆಯಾಗುತ್ತದೆ.

ಅನ್ನೆಹಾಳ್, ಹುಲ್ಲೂರು ಎನ್.ಜೆ.ವೈ, ಪಂಡರಹಳ್ಳಿ ಕಾವಲಹಟ್ಟಿ, ಜಾನುಕೊಂಡ, ಸಿದ್ದಾಪುರ, ಮಹದೇವನಕಟ್ಟೆ, ಗೊಡಬನಹಾಳ್, ಸೊಂಡೆಕೊಳ, ಸೊಲ್ಲಾಪುರ ಎನ್.ಜೆ.ವೈ, ಕುರುಬರಹಳ್ಳಿ, ಬೆಟ್ಟಡನಾಗೇನಹಳ್ಳಿ, ಸಿಂಗಾಪುರ, ಕಕ್ಕೇರು ಎನ್.ಜೆ.ವೈ.

ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು: 66/11 ಕೆವಿ ಪಂಡರಹಳ್ಳಿ ವ್ಯಾಪ್ತಿಯ ಅನ್ನೆಹಾಳ್, ಹುಲ್ಲೂರು, ಪಂಡರಹಳ್ಳಿ ಕಾವಲಹಟ್ಟಿ, ಜಾನುಕೊಂಡ, ಸಿದ್ದಾಪುರ, ಮಹದೇವನಕಟ್ಟೆ, ಗೊಡಬನಹಾಳ್, ಸೊಂಡೆಕೊಳ, ಮಾಳಪ್ಪನಹಟ್ಟಿ, ಕುರುಬರಹಳ್ಳಿ, ಬೆಟ್ಟಡನಾಗೇನಹಳ್ಳಿ, ಸಿಂಗಾಪುರ ಹಾಗೂ ಕಕ್ಕೇರು ಗ್ರಾಮಗಳು ಮತ್ತು ಐ.ಪಿ. ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!