in ,

ಚಿತ್ರದುರ್ಗ | ರೂ. 6 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

suddione whatsapp group join

 

ಸುದ್ದಿಒನ್, ಚಳ್ಳಕೆರೆ, (ನ.24) : ಬಳ್ಳಾರಿಯಿಂದ ತುಮಕೂರಿನ ಕಡೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಳಕು ಪೊಲೀಸರು ಹಿರೇಹಳ್ಳಿ ಟೋಲ್ ಗೇಟ್ ಬಳಿ ಬುಧವಾರ ಸಂಜೆ ವೇಳೆ ವಶಕ್ಕೆ ಪಡೆದು, ತಳಕು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾರಿಯನ್ನು ಕಂಡ ತಳಕು ಪೊಲೀಸರು ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ 6 ಲಕ್ಷ ರೂ ಮೌಲ್ಯದ ಅಕ್ಕಿ ಸಾಗಾಟ ಮಾಡುವುದು ಬೆಳಕಿಗೆ ಬಂದಿದೆ. ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನಿಬ್ಬರನ್ನು ವಿಚಾರಣೆ ನಡೆಸಿದಾಗ ಅಕ್ರಮವಾಗಿ ಸಾಗಾಟ ಮಾಡುವುದು ಬೆಳಿಕಿಗೆ ಬಂದಿದೆ. ಲಾರಿಯಲ್ಲಿದ್ದ ಇಬ್ಬರು ಲಾರಿ ಬಿಟ್ಟು ಪರಾರಿಯಾದೆ, ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ್ ಎನ್. ರಘುಮೂರ್ತಿ, ಆಹಾರ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತಳಕು ಪಿಎಸ್‍ಐ ತಿಮ್ಮಪ್ಪ ಸಿಬ್ಬಂದಿಗಳು ಇದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಮುಂಬರುವ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಹೆಚ್.ಆಂಜನೇಯ ನೇರ ಹೊಣೆ : ಜಿ.ಎಸ್.ಮಂಜುನಾಥ್

ಚೆಕ್ ಡ್ಯಾಂನಲ್ಲಿ ಬಿದ್ದ ಇಬ್ಬರು ನೀರುಪಾಲು