ಚಿತ್ರದುರ್ಗ : ನಿವೃತ್ತ ಡಿಹೆಚ್‍ಓ ಡಾ.ಹೆಚ್.ಹೆಚ್.ನಾಯ್ಕ ನಿಧನ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 21 : ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಹೆಚ್.ನಾಯ್ಕ (88 ವರ್ಷ) ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪತ್ನಿ ಪುಟ್ಟು ಬಾಯಿ ನಾಯ್ಕ ಅವರು ಒಮ್ಮೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರೆ, ಪುತ್ರ ಸುನಿಲ್ ಚಿತ್ರದುರ್ಗ ನಗರಸಭೆಯ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇಬ್ಬರೂ ಪುತ್ರಿಯರು ಅಮೇರಿಕಾದಲ್ಲಿ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದು, ಅಲ್ಲಿಯೇ ನೆಲೆಸಿದ್ದಾರೆ. ಮಾ.24ರ ಸೋಮವಾರ ಮದ್ಯಾಹ್ನ ಹುಟ್ಟೂರು ಸಿರಿಗೆರೆ ಬಳಿಯ ದೊಡ್ಡಿಗನಾಳ್ ಹೊಸಹಟ್ಟಿಯಲ್ಲಿ ಮದ್ಯಾಹ್ನ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಚಿತ್ರದುರ್ಗದ ಪಿಎನ್‍ಟಿ ಕ್ವಾಟರ್ಸ್ ಬಳಿಯಲ್ಲಿರುವ ನಿವಾಸದ ಬಳಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಮೇರಿಕಾದಲ್ಲಿ ನೆಲೆಸಿರುವ ಅವರ ಪುತ್ರಿಯರು ಮತ್ತು ಇತರೆ ಸದಸ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವರು.

suddionenews

Recent Posts

ಭೂಮಿಗೆ ತಂಪೆರೆದ ಮಳೆರಾಯ ; ಶೆಕೆಯಿಂದ ಬೆವರಿಳಿಸಿದ ಜನಕ್ಕೆ ಆನಂದ

ಹೌದು ಯುಗಾದಿ ಹಬ್ಬಕ್ಕೂ ಮುನ್ನ ಒಂದು ಮಳೆಯಾಗಬೇಕಿದೆ. ಇದು ಅನಾದಿ ಕಾಲದಿಂದಾನೂ ನಡೆದುಕೊಂಡು ಬಂದಿರುವ ಪದ್ಧತಿ. ಪ್ರಕೃತಿಯೇ ಹಾಗೇ ಯಾರೂ…

2 minutes ago

ಚಳ್ಳಕೆರೆ : ಪ್ರಸವ ವೇದನೆಯಿಂದ ಬಳತಿದ್ದ ಹಸುವಿನ ಜೀವ ಉಳಿಸಿದ ವೈದ್ಯರು

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 22 :  ತಾಲ್ಲೂಕಿನ ಮುಚ್ಚುಗುಂಟೆ ಗ್ರಾಮದ ನಿವಾಸಿಯಾದ ಗಾದ್ರಿಪಾಪಯ್ಯನವರ ರಾಜೇಶ್ ಕುಟುಂಬಕ್ಕೆ ಸೇರಿದ ಗರ್ಭ ಧರಿಸಿದ…

51 minutes ago

ಇನ್ನು ಮುಂದೆ ಬ್ಯಾಂಕುಗಳು ವಾರದಲ್ಲಿ 5 ದಿನ ಮಾತ್ರ ತೆರೆದಿರುತ್ತವೆಯೇ?

ಸುದ್ದಿಒನ್ : ಬ್ಯಾಂಕ್ ನೌಕರರ ಸಂಘಗಳು ಬಹಳ ದಿನಗಳಿಂದ ವಾರಕ್ಕೆ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿವೆ.…

1 hour ago

ತಮಿಳುನಾಡಿನಲ್ಲಿ ಆಡಿದ ಒಂದೇ ಒಂದು ಮಾತಿಗೆ ಕೆರಳಿದ ಅಣ್ಣಾಮಲೈ ; ಅಂಥದ್ದೇನಿಳಿದ್ರು ಡಿಕೆಶಿ..?

ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ತಮಿಳುನಾಡಿನ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಡುವೆ ಜೋರು ಗದ್ದಲ ಎದ್ದಿದೆ. ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್…

2 hours ago

ಚಿತ್ರದುರ್ಗದಲ್ಲಿ ಬಂದ್ ಹೇಗಿತ್ತು ?

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

2 hours ago

ಕೇರಳದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ರಾ ನಟ ದರ್ಶನ್..?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿ, ಜಾಮೀನಿನ ಮೇಲೆ ಹೊರ ಬಂದ ಮೇಲೆ ದರ್ಶನ್ ಆಕ್ಡೀವ್ ಆಗಿದ್ದಾರೆ. ಅರ್ಧಕ್ಕೆ…

2 hours ago