ಸುದ್ದಿಒನ್, ಚಿತ್ರದುರ್ಗ, ಜನವರಿ. 02 : ನಗರದ ಬಿ.ಎಲ್. ಗೌಡ ಲೇಔಟ್ ನಲ್ಲಿರುವ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025 ಕ್ಯಾಲೆಂಡರ್ ಉದ್ಘಾಟನಾ ಸಮಾರಂಭ ಹಾಗೂ ಪ್ರಕೃತಿ ಹಬ್ಬದ ಕ್ರೀಡಾಕೂಟ ನೆರವೇರಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಟಿ. ರಾಜು ಆಗಮಿಸಿದ್ದರು.
ಅಪರಾಧ, ಅಪಘಾತಗಳ ಮುಂಜಾಗ್ರತೆಯನ್ನು ವಹಿಸುವ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷರಾದ ರೋಟೇರಿಯನ್ ಪಿ ಎಚ್ ಎಫ್ ಎಂ ಕೆ ರವೀಂದ್ರ ಸರ್ ಅವರು ವಹಿಸಿದ್ದರು.
ಪ್ರಾರ್ಥನೆಯನ್ನು ಸಹ ಶಿಕ್ಷಕಿಯಾದ ಶ್ರೀಮತಿ ಕವಿತಾ ಟಿ ಅವರು ಸುಸ್ವಾಗ್ಯವಾಗಿ ಹಾಡಿದರು.
ಸ್ವಾಗತವನ್ನು ಸಾಹ ಶಿಕ್ಷಕಿಯಾದ ಶಿಲ್ಪ ರವರು ಎಲ್ಲರನ್ನೂ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಕ್ಯಾಲೆಂಡರ್ ಉದ್ಘಾಟನೆಯ ಜೊತೆಗೆ ಎಲ್ಲ ಪೋಷಕರಿಗೂ ಮತ್ತು ಮಕ್ಕಳಿಗೂ ಬಹುಮಾನ ವಿತರಣೆ ವನ್ನು ಮಾಡಲಾಯಿತು. ವಂದನಾರ್ಪಣೆಯನ್ನು ಶಾಲೆಯ ಕಾರ್ಯದರ್ಶಿಗಳಾದ ಕಾರ್ತಿಕ್ ಎಂ. ರವರು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ರೊಟೇರಿಯನ್ ಪಿ ಎಚ್ ಎಫ್ ಉಮೇಶ್ ವಿ ತುಪ್ಪದ, ರೊಟೇರಿಯನ್ ಪಿ ಎಚ್ ಎಫ್ ಮಾರುತಿ ಮೋಹನ್, ರೊಟೇರಿಯನ್ ಪಿ ಎಚ್ ಎಫ್ ಡಾಕ್ಟರ್ ಮಧುಸೂದನ್ ರೆಡ್ಡಿ, ಖಜಾಂಚಿಗಳಾದ ಶ್ರೀಮತಿ ಶ್ವೇತ ಕಾರ್ತಿಕ್, ಶ್ರೀಮತಿ ಸ್ವಾತಿ ಆನಂದ್, ನಮ್ಮ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶಶಿಕಲಾ ಎಂ.ಎಸ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಅನಿ ಫಾತಿಮ ರವರು ನಡೆಸಿಕೊಟ್ಟರು.
ಸುದ್ದಿಒನ್ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತು. ಇದರೊಂದಿಗೆ, ತಂಡವು 2017…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಫೆ. 23…
ಸುದ್ದಿಒನ್ ವಿರಾಟ್ ಕೊಹ್ಲಿ 14,000 ಏಕದಿನ ರನ್ ಗಳಿಸಿದ ವೇಗದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸಚಿನ್…
ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು…
ತುಮಕೂರು: ಬೆಸ್ಕಾಂ ತುಮಕೂರು ನಗರ ಉಪ ವಿಭಾಗ 1ರ ವ್ಯಾಪ್ತಿಯಲ್ಲಿ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪ್ರತ್ಯೇಕ ಕೃಷಿ…
ಸುದ್ದಿಒನ್ ಪ್ರತಿಯೊಬ್ಬ ಭಾರತೀಯ ಅಭಿಮಾನಿಯೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ರನ್‌ಗಳನ್ನು ನಿರೀಕ್ಷಿಸುತ್ತಾರೆ.…