Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ : ಡಿ.16 ರಂದು ವಿದ್ಯುತ್ ವ್ಯತ್ಯಯ

Facebook
Twitter
Telegram
WhatsApp

ಚಿತ್ರದುರ್ಗ, (ಡಿಸೆಂಬರ್.15) : ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರುವ 66/11ಕೆ.ವಿ ಹಿರೇಗುಂಟನೂರು, ಭರಮಸಾಗರ, ಸಿರಿಗೆರೆ ಮತ್ತು ವಿಜಾಪುರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ದುರಸ್ತಿ ಕಾಮಗಾರಿ ನಿರ್ವಹಿಸುವುದರಿಂದ ಡಿಸೆಂಬರ್ 16ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಆಗುವ 11 ಕೆ.ವಿ. ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

66/11 ಕೆ.ವಿ ಹಿರೇಗುಂಟನೂರು, ಭರಮಸಾಗರ, ಸಿರಿಗೆರೆ ಮತ್ತು ವಿಜಾಪುರ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11 ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಭರಮಸಾಗರ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಆಡಚಣೆಗೊಳಪಡುವ ಪ್ರದೇಶಗಳು: ಹೆಗ್ಗೆರೆ, ಎಮ್ಮೇಹಟ್ಟಿ, ನಲ್ಲಿಕಟ್ಟೆ, ಕೊಳಹಾಳು ಎನ್‍ಜೆವೈ, ಹೆಗಡೆಹಾಳು, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದ್ದೂರ್ ಘಟ್ಟ, ಅಡವಿಗೊಲ್ಲಹಳ್ಳಿ, ಭರಮಸಾಗರ, ಪಾಮರಹಳ್ಳಿ, ಕೋಗುಂಡೆ, ಎಸ್‍ಕೆಎಮ್, ಕೋಡಿಹಳ್ಳಿ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಸಿರಿಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಆಡಚಣೆಗೊಳಪಡುವ ಪ್ರದೇಶಗಳು: ಕೋಣನೂರು, ಹಳವುದರ, ಓಬಳಪುರ, ಅಳಗವಾಡಿ, ಪಳಕೆಹಳ್ಳಿ ಎನ್‍ಜೆವಯ, ಮದಕರಿಪುರ, ಸಿದ್ದಾಪುರ, ಸಿರಿಗೆರೆ, ಎಂಇಎಲ್,ಬಿಬಿಹೆಚ್, ಚಿಕ್ಕೇನಹಳ್ಳಿ, ಆಲಘಟ್ಟ ಮತ್ತು ಚೀಳಂಗಿ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ವಿಜಾಪುರ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಆಡಚಣೆಗೊಳಪಡುವ ಪ್ರದೇಶಗಳು: ಕಲ್ಕುಂಟೆ, ಎನ್.ಬಳ್ಳಿಗಟ್ಟೆ, ಲಕ್ಷ್ಮಿಸಾಗರ, ವಿಜಾಪುರ, ಮರಡಿ ಆಂಜನೇಯ ಮತ್ತು ಚಿಕ್ಕಾಲಗಟ್ಟ ಮಾರ್ಗಗಳಿಂದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಹಿರೇಗುಂಟನೂರು ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಆಡಚಣೆಗೊಳಪಡುವ ಪ್ರದೇಶಗಳು: ಹುಣಸೆಕಟ್ಟೆ, ಕೊಡಗವಳ್ಳಿ, ಚಿಕ್ಕಾಪುರ, ಹಿರೇಗುಂಟನೂರು, ಭೀಮಸಮುದ್ರ, ವಿ.ಪಾಳ್ಯ, ಬಿ.ಟೆಂಪಲ್, ಕ್ಯಾಂಪ್, ಸೀಬಾರ, ಬೀರಾವರ, ಎನ್.ಬಳ್ಳೆಕಟ್ಟೆ, ಹೊಸಳ್ಳಿ, ಮಳಲಿ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಡಿಸೆಂಬರ್ 18 ರಂದು ಗ್ರಾಹಕ ಸಂವಾದ ಸಭೆ :

ಚಿತ್ರದುರ್ಗ ನಗರ ಉಪವಿಭಾಗದ ಆವರಣದಲ್ಲಿ ಡಿಸೆಂಬರ್ 18ರಂದು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಗ್ರಾಹಕ ಸಂವಾದ ಸಭೆ ನಡೆಸಲಾಗುವುದು.
ನಗರ ಉಪವಿಭಾಗದ ವ್ಯಾಪ್ತಿಯ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳಲು ಕೋರಲಾಗಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ಹೋರಾಟ ಅನಿವಾರ್ಯ : ಬಿ.ಎನ್.ಚಂದ್ರಪ್ಪ

ಸುದ್ದಿಒನ್,  ಚಿತ್ರದುರ್ಗ: ಏ.20 :  ಕೇಂದ್ರ ಬಿಜೆಪಿ ಸರ್ಕಾರದ ನಿರುದ್ಯೋಗ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಹೇಳಿದರು. ಹಿರಿಯೂರು ತಾಲೂಕಿನ ಕೋಡಿಹಳ್ಳಿ

ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ 25 ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.20  : ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಮೊಳಕಾಲ್ಮುರು ತಾಲ್ಲೂಕಿನ ಬಿಜೆಪಿಯ ಇಪ್ಪತ್ತೈದಕ್ಕೂ ಹೆಚ್ಚು ಮಂದಿ ಬಿ.ಯೋಗೇಶ್‍ಬಾಬು ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಎಸ್.ಬಸವರಾಜು, ಕೆ.ಚಂದ್ರಣ್ಣ,

ಬಿ.ಎನ್.ಚಂದ್ರಪ್ಪನವರ ಗೆಲುವು ಖಚಿತ : ನಗುತಾ ರಂಗನಾಥ್

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.20 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರ ಪರ ಎಲ್ಲೆಡೆ ಮತದಾರರ ಉತ್ತಮ ಒಲವು

error: Content is protected !!