ಚಿತ್ರದುರ್ಗ ನಗರಸಭೆ ನಿರ್ಲಕ್ಷ್ಯಕ್ಕೆ ಜನರ ಆರೋಗ್ಯ ಹಾಳು : ಸ್ವಯಂ ಪ್ರೇರಿತ ದೂರು ದಾಖಲು

ಚಿತ್ರದುರ್ಗ ಜ. 23 : ಚಿತ್ರದುರ್ಗ ನಗರದ ಹೊರ ವಲಯದ ಹಂಪಯ್ಯನಮಾಳಿಗೆ ಬಳಿ ಇರುವ ಕಸ ಹಾಗೂ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಗುರುವಾರ ಬೆಳಿಗ್ಗೆ ದಿಢೀರ್ ಭೇಟಿ ನೀಡಿ, ಘಟಕದ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.  ಅಲ್ಲದೆ ಘಟಕದಿಂದ ವಾಸನೆ, ಸೊಳ್ಳೆ, ನೊಣಗಳ ಹರಡುವಿಕೆಯನ್ನು ತಡೆಗಟ್ಟಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು ಎಂದು ತಾಕೀತು ಮಾಡಿದರು.

 

ಗುರುವಾರ ಬೆಳ್ಳಂ ಬೆಳಿಗ್ಗೆ ಹಂಪಯ್ಯನಮಾಳಿಗೆ ಬಳಿಯ ಕಸ ವಿಲೇವಾರಿ ಘಟಕಕ್ಕೆ ಭೇಟಿ ಉಪಲೋಕಾಯುಕ್ತರು ಭೇಟಿ ನೀಡಿದ ವೇಳೆ, ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ಗ್ರಾಮಸ್ಥರು, ಕಸ ವಿಲೇವಾರಿ ಘಟಕದ ಅಸಮರ್ಪಕ ನಿರ್ವಹಣೆಯ ಕಾರಣದಿಂದ, ಈ ಭಾಗದಲ್ಲಿ ನೊಣ, ಸೊಳ್ಳೆಗಳ ಕಾಟ ವಿಪರೀತವಾಗಿದೆ, ಇದರ ಜೊತೆಗೆ ಮಾಂಸದ ತ್ಯಾಜ್ಯವನ್ನು ಕೂಡ ಇಲ್ಲಿ ಹಾಕುವುದರಿಂದ ನಾಯಿಗಳು ಸೇರಿಕೊಂಡು, ವಿಪರೀತ ಹಾವಳಿ ಮಾಡುತ್ತಿವೆ.  ಸಾರ್ವಜನಿಕರು ಈ ದಾರಿಯಲ್ಲಿ ಓಡಾಡುವುದು ಕಷ್ಟವಾಗಿದೆ.  ಸೊಳ್ಳೆ, ನೊಣದ ವಿಪರೀತ ಕಾಟದ ಕಾರಣಯಲ್ಲಿ ತುಂಬಾ ತೊಂದರೆಯಾಗುತ್ತಿದೆ, ಮನೆಯಲ್ಲಿ ಊಟ ಮಾಡಲೂ ಕಷ್ಟವಿದೆ,  ಪದೇ ಪದೇ ಮಕ್ಕಳು, ವೃದ್ಧರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಉಪಲೋಯುಕ್ತರು, ಕಸ ವಿಲೇವಾರಿ ಘಟಕವನ್ನು ಒಂದು ಸುತ್ತುಹಾಕಿ ವೀಕ್ಷಿಸಿ, ಘಟಕ ನಿರ್ವಹಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಘಟಕದ ಕಾರಣದಿಂದ ಸುತ್ತಮುತ್ತಲ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದ ರೀತಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು, ಒಣ ಕಸದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಆದರೆ ಹಸಿ ಕಸ ಮತ್ತು ಇಲ್ಲಿ ಹರಿಯುವ ಚರಂಡಿ ನೀರಿನ ಕಾರಣದಿಂದ ಸೊಳ್ಳೆ, ನೊಣಗಳು ಹೆಚ್ಚು ಉತ್ಪತ್ತಿಯಾಗುತ್ತವೆ.  ಹೀಗಾಗಿ ಹಸಿ ಕಸ ಮತ್ತು ತ್ಯಾಜ್ಯ ನೀರು ಹರಿಯುವ ಚರಂಡಿಯನ್ನು ಸೂಕ್ತ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳಬೇಕು.

ತಜ್ಞರಿಂದ ಸಲಹೆ ಪಡೆದು, ಅದರಂತೆ ಘಟಕದಲ್ಲಿ ಸುಧಾರಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು.  ಘಟಕದ ಒಳಗಡೆ ನಾಯಿಗಳು ಬೀಡು ಬಿಡದಂತೆ, ಇಲ್ಲಿನ ನಾಯಿಗಳನ್ನು ಹಿಡಿಸಿ, ಬೇರೆ ದೂರದ ಸ್ಥಳಕ್ಕೆ ಸಾಗಿಸಬೇಕು.  ಘಟಕದಲ್ಲಿ ಕೆಟ್ಟ ವಾತಾವರಣ ಆಗದಂತೆ ಲೆಮನ್ ಗ್ರಾಸ್ ನಿತ್ಯ ಎರಡೆರಡು ಬಾರಿ ಬಳಸಬೇಕು, ಲಿಚೆಟ್ ಡ್ರೈನ್ ಅನ್ನು ಸಂಪೂರ್ಣವಾಗಿ ಕವರ್ ಮಾಡಬೇಕು.  ಇಲ್ಲಿ ಕೆಲಸ ಮಾಡುವವರಿಗೆ ಶೂ, ಗ್ಲೌಸ್, ಮಾಸ್ಕ್ ಸೇರಿದಂತೆ ಎಲ್ಲ ಸುರಕ್ಷಾ ಸಾಮಗ್ರಿಗಳನ್ನು ನೀಡಬೇಕು ಎಂದು ತಾಕೀತು ಮಾಡಿದರು.
ಪರಿಸರ ಅಧಿಕಾರಿ ಆಸೀಫ್ ಅವರನ್ನು ಉಪಲೋಕಾಯುಕ್ತರು, ಎಷ್ಟು ಬಾರಿ ಈ ಘಟಕಕ್ಕೆ ಭೇಟಿ ನೀಡಿದ್ದೀರಿ,  ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಹಾಗೂ ನಿರ್ವಹಣೆಗೆ ಏನೆಲ್ಲ ಸಲಹೆ ನೀಡಿದ್ದೀರಿ, ನಿಯಮ ಉಲ್ಲಂಘಿಸಿದ್ದಲ್ಲಿ ಯಾವ ಕ್ರಮವನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.  ಅವರಿಂದ ಸಮರ್ಪಕ ಉತ್ತರ ದೊರೆಯದ ಕಾರಣ ಅಸಮಾಧಾನ ವ್ಯಕ್ತಪಡಿಸಿ, ಜನರ ಆರೋಗ್ಯದ ಬಗ್ಗೆಯೂ ಆಡಳಿತ ಯಂತ್ರ ಯೋಚಿಸಬೇಕು. ಘಟಕ ನಿರ್ವಹಣೆ ಸಮರ್ಪಕವಾಗಿ ಇಲ್ಲದರಿವುದನ್ನು ಗಂಭೀರವಾಗಿ ಪರಿಗಣಿಸಿದ್ದು, ನಗರಸಭೆ ಹಾಗೂ ಪರಿಸರ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗುತ್ತಿದ್ದು, 01 ತಿಂಗಳ ಒಳಗಾಗಿ ಕಸ ವಿಲೇವಾರಿ ಘಟಕದ ನಿರ್ವಹಣೆ ಸಮರ್ಪಕವಾಗಿಸಿ,  ಇದಕ್ಕೆ ಪೂರಕವಾಗಿ ಕೈಗೊಂಡ ಕ್ರಮಗಳ ಬಗ್ಗೆ ಫೊಟೋ, ವಿಡಿಯೋ ಸಹಿತ ವರದಿಯನ್ನು ಸಲ್ಲಿಸಬೇಕು, ಈ ಬಗ್ಗೆ ಗ್ರಾಮಸ್ಥರನ್ನು ಕೂಡ ಸಾಕ್ಷಿದಾರರನ್ನಾಗಿಸಿಕೊಳ್ಳಲಾಗಿದ್ದು, ಅವರಿಂದಲೂ ಹೇಳಿಕೆ ಪಡೆದು, ಬಳಿಕವಷ್ಟೇ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು ಎಂದು ಉಪಲೋಕಾಯುಕ್ತ ಫಣೀಂದ್ರ ಅವರು ಹೇಳಿದರು.

suddionenews

Recent Posts

ಯಾವ ವಯಸ್ಸಿನಿಂದ ಮಕ್ಕಳಿಗೆ ಚಹಾ ಅಥವಾ ಕಾಫಿಯನ್ನು ನೀಡಬಹುದು ? ಚಿಕ್ಕ ವಯಸ್ಸಿನಲ್ಲಿ ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…

2 hours ago

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

2 hours ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

11 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

12 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

12 hours ago

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು  ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…

12 hours ago