
ಚಿತ್ರದುರ್ಗ, (ಜ.31) : ಚಿತ್ರದುರ್ಗ ನಗರಸಭೆಯ ಪೌರಾಯುಕ್ತರಾಗಿ ಕಾಂತರಾಜ್ ಹೆಚ್, ಮತ್ತು ಚಳ್ಳಕೆರೆ ತಹಶೀಲ್ದಾರರಾಗಿ ರೇಹಾನ್ ಪಾಷಾ ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆಯ ಮತ್ತು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಖಾಲಿಯಿದ್ದ ಚಿತ್ರದುರ್ಗ ನಗರಸಭೆ ಪೌರಾಯುಕ್ತ ಹುದ್ದೆಗೆ ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಚ್. ಕಾಂತರಾಜು ಅವರನ್ನು ಸರ್ಕಾರ ನೇಮಿಸಿದೆ.
ಜೆ.ಟಿ. ಹನುಮಂತ ರಾಜು ಅವರು ಕಳೆದ ನವೆಂಬರ್ ತಿಂಗಳಲ್ಲಿ ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಚಿತ್ರದುರ್ಗ ನಗರಸಭೆಯ ಪೌರಾಯುಕ್ತ ಹುದ್ದೆ ಖಾಲಿಯಿತ್ತು.
ಚಳ್ಳಕೆರೆ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್. ರಘುಮೂರ್ತಿ ಅವರ ಸ್ಥಾನಕ್ಕೆ ಬಳ್ಳಾರಿ ಜಿಲ್ಲೆಯ ಪುರಸಭಾ ತಹಶೀಲ್ದಾರ್ ಉಪ ವಿಭಾಗಧಿಕಾರಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೇಹಾನ್ ಪಾಷಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
GIPHY App Key not set. Please check settings