Connect with us

Hi, what are you looking for?

ಪ್ರಮುಖ ಸುದ್ದಿ

ಭೂಕಂಪ, ಸುನಾಮಿಗೆ ಜಗ್ಗಲ್ಲ‌ ಕೋಟೆನಾಡು; ಚಿತ್ರದುರ್ಗ ಜಿಲ್ಲೆಗೆ ಪ್ರಕೃತಿ ಕೊಟ್ಟ ವರ !

ವಿಶೇಷ ಲೇಖನ: ಜೆ. ಪರಶುರಾಮ

ಚಿತ್ರದುರ್ಗ ಜಿಲ್ಲೆ ಸುರಕ್ಷಿತವಾದ ಭೌಗೋಳಿಕ ಪ್ರದೇಶವಾಗಿದೆ. ಭೂಕಂಪ, ಸುನಾಮಿ, ಚಂಡ ಮಾರುತ ಹಾಗೂ ನೆರೆಹಾವಳಿಯಂತಹ ಪ್ರಕೃತಿ ವಿಕೋಪಗಳಿಂದ ಮುಕ್ತವಾಗಿದೆ. ಭೂ ಮೇಲ್ಭಾಗದ ಶಿಲೆಗಳಿಂದ ಹಿಡಿದು ಭೂಚಿಪ್ಪಿನ ಕೆಳಭಾಗದ ಶಿಲೆಗಳು ಬಹಳಗಟ್ಟಿಯಾದ ಅಗ್ನಿ ಶಿಲೆಗಳು, ಪದರ ಶಿಲೆಗಳು ಮತ್ತು ರೂಪಾಂತರ ಶಿಲೆಗಳನ್ನು ಹೊಂದಿದೆ.

ಈ ಶಿಲೆಗಳು ಸುಮಾರು 2500 ರಿಂದ 2400 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿವೆ ಎಂದು ಭೂವೈಜ್ಞಾನಿಕವಾಗಿ ಕಂಡುಹಿಡಿಯಲಾಗಿದೆ. ಈ ಶಿಲೆಗಳನ್ನು ಆರ್‌ಕೆಎನ್ ( Archaean) ಯುಗದ ಶಿಲೆಗಳೆಂದು (ಬಹಳ ಹಳೆಯ) ಹೆಸರಿಸಲಾಗಿದೆ. ಭೂಮಿಯ ಉಗಮವಾದ ಕೆಲವು ಮಿಲಿಯನ್ ವರ್ಷಗಳ ನಂತರ ಭೂಮಿಯ ಅಂತರಾಳದ ಶಿಲಾಪಾಕ (ಹೆಚ್ಚು ಉಷ್ಣತೆ ಮತ್ತು ಒತ್ತಡ) ವು ದುರ್ಬಲ ಕವಚದಿಂದ ಹೊರಚಿಮ್ಮಿ ಭೂಚಿಪ್ಪಾಗಿದೆ. ಅದನ್ನು ಮೊದಲ ಅಗ್ನಿಶಿಲೆ ಎಂದು ಹೇಳಲಾಗಿದೆ.

ಈ ಶಿಲೆಯಲ್ಲಿ ಯಾವ ವಿಧವಾದ ಪಳೆಯುಳಿಕೆಗಳು (Fossils) ಇರುವುದಿಲ್ಲ. ಆ ಸಂದರ್ಭದಲ್ಲಿ ಗಿಡಮರಗಳಾಗಲೀ ಅಥವಾ ಪ್ರಾಣಿಗಳಾಗಲೀ, ಮಾನವನಾಗಲೀ ಜನ್ಮ ತಾಳಿರಲಿಲ್ಲ ಎಂದು ದೃಢಪಟ್ಟಿದೆ. ಭೂಚಿಪ್ಪಿನ ಮೇಲೆ ನಂತರ ಅನೇಕ ಬಾರಿ ಶಿಲಾಪಾಕವು ಭೂಚಿಪ್ಪನ್ನು ಛೇದಿಸಿಕೊಂಡು ಬಂದು ಈಗಿನ ಭೂಮೇಲ್ಭಾಗದ ಪ್ರಕೃತಿ ಹೊಂದಿದೆ.

ಭೂಮಿಯ ಆಳದ ಶಿಲೆಗಳು ಬಹಳ ಗಟ್ಟಿಯಾಗಿರುವುದರಿಂದ ಭಾರತದ ಯಾವ ಭಾಗದಲ್ಲಾಗಲೀ ಭೂಕಂಪಗಳು ಸಂಭವಿಸಿದರೆ ಅದರ ಕೊನೆಯ ಕಂಪನವು (ದುರ್ಬಲ) ನಮ್ಮ ಭೂಪ್ರದೇಶವನ್ನು ತಲುಪುವುದರಿಂದ ಅದರ ತೀವ್ರತೆಯು ಕಡಿಮೆ ಇರುವುದರಿಂದ ಅದರ ಅನುಭವವಾಗುವುದಿಲ್ಲ. ಹಾಗೂ ಹೆಚ್ಚಿನ ಅನಾಹುತಗಳು ಸಂಭವ ಕಡಿಮೆ.

ಭೂಚಿಪ್ಪಿನ ಶಿಲೆಯು 45 ಕಿ.ಮೀ. ಆಳದವರೆಗೆ ಆವೃತ್ತವಾಗಿದೆ ಎಂದು ಭೂ ವೈಜ್ಞಾನಿಕವಾಗಿ ಸಂಶೋಧನೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ ಸುತ್ತಮುತ್ತ ಯಾವ ಸಮುದ್ರಗಳು ಇಲ್ಲದ ಪ್ರಯುಕ್ತ ಚಂಡಮಾರುತದಿAದ ಹಾಗೂ ಸುನಾಮಿ ಅಲೆಗಳಿಂದ ಮುಕ್ತವಾಗಿದೆ. ಪ್ರಕೃತಿಯು ಹೆಚ್ಚಿನ ಖನಿಜ ಸಂಪತ್ತು ಕೂಡ ಕೊಟ್ಟಿದೆ.

ಈ ಮೇಲಿನ ವಿವರಗಳನ್ನು ನೋಡಲಾಗಿ, ಈ ಜಿಲ್ಲೆಗೆ ಪ್ರಕೃತಿ ಕೊಟ್ಟ ಸುರಕ್ಷಿತ ವರ ಎಂದರೆ ತಪ್ಪಾಗಲಾರದು. ಸುಮಾರು 1.6 ಮಿಲಿಯನ್ ವರ್ಷಗಳ ಮೊದಲು ಮಾನವನ ಪೂರ್ವಜರ ಉದಯವು ಭೂಮಿಯ ಮೇಲೆ ಉಂಟಾಯಿತು. ಭೂಮಿಯ ಇತಿಹಾಸವು ಅನೇಕ ವಿಸ್ಮಯಕಾರಿ ಬದಲಾವಣೆಗಳನ್ನು ಕೌತುಕಗಳನ್ನು ಒಳಗೊಂಡಿದೆ.

ಸುಮಾರು 205 ಮಿಲಿಯನ್ ವರ್ಷಗಳ ಮೊದಲು ಸಂಪೂರ್ಣ ಭೂಮಂಡಲವು ಡೈನೋಸಾರ್‌ಗಳಿಂದ ತುಂಬಿ ಹೋಗಿತ್ತು. ಸುಮಾರು 355 ಮಿಲಿಯನ್ ವರ್ಷಗಳ ಪೂರ್ವದಲ್ಲಿ ಭೂಮಿಯ ಮೇಲೆ ದಟ್ಟವಾದ ಅರಣ್ಯಗಳಿಂದ ಆವೃತ್ತವಾಗಿತ್ತು. 250 ಮಿಲಿಯನ್ ವರ್ಷಗಳ ಪೂರ್ವದಲ್ಲಿ ಸಾಗರಗಳು ಮತ್ತು ಸಮುದ್ರಗಳಲ್ಲಿ ತಿಮಿಂಗಿಲಗಳAತಹ ಜಲಚರಗಳ ಉಗಮವಾಯಿತು. ಭೂಮಿಯ ಇತಿಹಾಸ ಕೌತುಕ ಪೂರ್ಣ, ಅತ್ಯಂತ ಕುತೂಹಲಕಾರಿ, ಶಿಲಾ ರಚನೆಗಳು, ಪಳೆಯುಳಿಕೆಗಳು, ಭೂಮಿಯ ಇತಿಹಾಸವನ್ನು ಅಧ್ಯಯನ ಮಾಡುವಲ್ಲಿ ಸಹಕಾರಿಯಾಗಿವೆ.

(ಈ ಕಿರಿಯ ಲೇಖನದ ಮೂಲ ಜಿಯಾಲಜಿಕಲ್ ರಿಪೋರ್ಟ್ಸ್)

– ಲೇಖಕರು- ಜೆ. ಪರಶುರಾಮ, ನಿವೃತ್ತ ಹಿರಿಯ ಭೂವಿಜ್ಞಾನಿ, ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (Org.)

Click to comment

Leave a Reply

Your email address will not be published. Required fields are marked *

Latest

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ-ಆಗಸ್ಟ್-4,2021 ಕಾಮಿಕಾ ಏಕಾದಶಿ ಸೂರ್ಯೋದಯ: 06:04 AM, ಸೂರ್ಯಸ್ತ: 06:44 PM ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077, ಪ್ಲವ ನಾಮ ಸಂವತ್ಸರ ಆಷಾಢ ಮಾಸ, ದಕ್ಷಿಣಾಯಣ, ಗ್ರೀಷ್ಮ...

ಚಿತ್ರದುರ್ಗ

upper bhadra meeting in DS Hally, chitradurga ಡಿಎಸ್ ಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಸಭೆ; ಗ್ರಾಮಸ್ಥರು ಭಾಗಿ ಸುದ್ದಿಒನ್, ಚಿತ್ರದುರ್ಗ, (ಆ.03) : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಜ್ಞಾನಪೂರ್ಣ ಶಾಲೆ ಆವರಣದಲ್ಲಿ...

ಚಿತ್ರದುರ್ಗ

ಸುದ್ದಿಒನ್, ಚಿತ್ರದುರ್ಗ, (ಆ.03) : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಸ್ ಜೆ ಎಮ್ ಸಿ ಬಿ ಎಸ್ ಇ ರೆಸಿಡೆನ್ಷಿಯಲ್ ಶಾಲೆಯು 2020-21 ನೇ ಸಾಲಿನ ಸಿ ಬಿ ಎಸ್ ಇ...

ಪ್ರಮುಖ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸೋದಕ್ಕಾಗಿಯೇ ಸಿಎಂ ಮೂರು ದಿನದಿಂದ ದೆಹಲಿಯಲ್ಲಿದ್ದಾರೆ. ಈಗಾಗಲೇ ಹೈಕಮಾಂಡ್ ಜೊತೆ ಈ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಸಂಪುಟದಲ್ಲಿ ಯಾರೆಲ್ಲಾ ಇರ್ಬೇಕು...

ಪ್ರಮುಖ ಸುದ್ದಿ

ಮುಂಬೈ: ಶಿಲ್ಲಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ರೋ ಮಗ ವಿಹಾನ್ ಕುಂದ್ರಾ ಕೂಡ ಅಷ್ಟೇ ಆ್ಯಕ್ಟೀವ್ ಆಗಿದ್ದ. ಸದಾ ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕ್ತಾ ಇದ್ದ. ಆದ್ರೆ ರಾಜ್...

ಪ್ರಮುಖ ಸುದ್ದಿ

ರಾಜಸ್ಥಾನ : ಹಿಂದಿನ ಕಾಲದಿಂದಲೂ ಪಾರಿವಾಳ ಸಂದೇಶ ರವಾನಿಸುವ, ಬೇಹುಗಾರಿಕೆಯಲ್ಲೂ ತನ್ನ ಚಾಣಾಕ್ಯತನ ತೋರಿದೆ. ತಂತ್ರಜ್ಞಾನ ಮುಂದುವರೆದ ಕಾಲದಲ್ಲೂ ಪಾಕಿಸ್ತಾನದಿಂದ ಪತ್ರವೊಂದನ್ನ ಹೊತ್ತು ತಂದಿದೆ ಪಾರಿವಾಳ. ಹೌದು, ಈ ಘಟನೆ ನಡೆದಿರೋದು ರಾಜಸ್ಥಾನದ...

You May Also Like

ಚಿತ್ರದುರ್ಗ

ಚಿತ್ರದುರ್ಗ, (ಜು.31): ಕೋಟೆನಾಡಿನಲ್ಲಿ ಮತ್ತೆ ಸರಗಳ್ಳತ ಹಾವಳಿ ಶುರುವಾಗಿದೆ. ಬೆಳಗಿ ಹೊತ್ತು ವಾಯು ವಿಹಾರಕ್ಕೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಕಳ್ಳರು ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದಾರೆ. ಶನಿವಾರ ಬೆಳಗ್ಗೆ...

ಪ್ರಮುಖ ಸುದ್ದಿ

ಅಭಿಮಾನಿಗಳು ತಮ್ಮ ಅಭಿಮಾನವನ್ನ ಒಂದೊಂದು ಬಾರಿ ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸ್ತಾರೆ. ಅದರಲ್ಲೂ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಫೋಟೋಗಳಿಗೆ ಹಾರ ಹಾಕಿ, ಅಭಿಷೇಕ‌ ಮಾಡಿ ಎಂಜಾಯ್ ಮಾಡ್ತಾರೆ. ಇನ್ನು ಒಂದೆಜ್ಜೆ...

ಆರೋಗ್ಯ

ರಾಗಿ ತಿಂದೋನಿಗೆ ರೋಗವಿಲ್ಲ ಅನ್ನೋ ಮಾತು ಕೇಳಿರ್ತೀರಿ. ಆದ್ರೆ ಈ ಮಾತು ಯಾಕೆ ಹೇಳ್ತಾರೆ ಅಂತ ಗೊತ್ತಾಗ್ಬೇಕಂದ್ರೆ ರಾಗಿಯಿಂದ ಆರೋಗ್ಯಕ್ಕೆ ಅದೆಷ್ಟೆಲ್ಲ ಲಾಭಗಳಿವೆ ಎಂದು ತಿಳ್ಕೋಬೇಕು. ರಾಗಿಯಲ್ಲಿ ಸಾಕಷ್ಟು ಕ್ಯಾಲ್ಶಿಯಂ ಇದೆ. ಆಸ್ಟಿಯೋಪೋರೋಸಿಸ್...

ಆರೋಗ್ಯ

ಅರಳಿ ಮರ ಸಾಮಾನ್ಯವಾಗಿ ಎಲ್ಲೆಡೆ ಇರುತ್ತೆ. ಅದಕ್ಕೆ ನಗರ, ಗ್ರಾಮೀಣ ಅಂತೆಲ್ಲಾ ಏನಿಲ್ಲ. ನಗರ ಪ್ರದೇಶದಲ್ಲೂ ದೇವಾಲಯದ ಮುಂದೆ ಅರಳಿಮರವನ್ನ ಕಾಣಬಹುದು. ಈ ಅರಳಿ‌ಮರದ ಎಲೆಗಳಿಂದ ಸಾಕಷ್ಟು ಲಾಭಗಳಿವೆ. ಅದು ಅಷ್ಟಾಗಿ ಯಾರಿಗೂ...

Copyright © 2021 Suddione. Kannada online news portal

error: Content is protected !!