ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31: ಆಕಸ್ಮಿಕ ಬೆಂಕಿಯಿಂದಾಗಿ ನಗರದ ಬಿ.ಡಿ. ರಸ್ತೆಯ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ (ಎಸ್.ಬಿ.ಐ. ವೃತ್ತ) ಸಮೀಪವಿರುವ ವೀರ ಸಾವರ್ಕರ್ ರಸ್ತೆಯಲ್ಲಿದ್ದ ಶ್ರೀ ನಂದೀಶ್ವರ ಫೋಟೋ ಫ್ರೇಂ ವರ್ಕ್ಸ್ ಸಂಪೂರ್ಣ ಅಗ್ನಿಗೆ ಆಹುತಿಯಾದ ಪರಿಣಾಮ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿದ ಘಟನೆ ನಗರದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ : ಪಂಚಾಕ್ಷರಿ ಮತ್ತು ಶೃತಿ ಕೀರ್ತಿ ಅವರ ಮಾಲೀಕತ್ವದ ವೀರ ಸಾವರ್ಕರ್ ರಸ್ತೆಯಲ್ಲಿದ್ದ ಶ್ರೀ ನಂದೀಶ್ವರ ಫೋಟೋ ಫ್ರೇಂ ವರ್ಕ್ಸ್ ಅಂಗಡಿಯಿದೆ. ಇದರ ಪಕ್ಕದಲ್ಲಿ ಖಾಲಿ ನಿವೇಶನವಿದೆ. ಆ ನಿವೇಶನಕ್ಕೆ ಈ ಮೊದಲು ಗೇಟ್ ಇತ್ತು. ಹಾಗಾಗಿ ಇಲ್ಲಿಯವರೆಗೂ ನಮಗೆ ಯಾವುದೇ ತೊಂದರೆಯಾಗಿರಲಿಲ್ಲ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ನಿವೇಶನವನ್ನು ಸ್ವಚ್ಛಗೊಳೊಸಲಾಗಿತ್ತು. ಕಸವನ್ನು ಅಲ್ಲಿಯೇ ಬಿಡಲಾಗಿತ್ತು. ನಾವು ಅವರಿಗೆ ಕಸವನ್ನು ತೆಗೆಸುವಂತೆಯೂ ಹೇಳಿದ್ದೆವು. ಆದರೆ ಕಸದ ರಾಶಿ ಅಲ್ಲೇ ಇತ್ತು. ಈ ಘಟನೆ ನಡೆಯುವ ಅಂದರೆ ಸುಮಾರು 7 ಗಂಟಯವರೆಗೂ ನಮ್ಮ ಅಂಗಡಿಯಲ್ಲೇ ಇದ್ದೆವು. ನಾವು ಬಂದ ಸ್ವಲ್ಪ ಸಮಯದ ನಂತರ ಅಂದರೆ ಸುಮಾರು 7:45 ರ ಬೇಳೆಗೆ ಅಲ್ಲಿಂದ ನಮಗೆ ಯಾರೋ ಫೋನ್ ಮಾಡಿ ಹೀಗೆ ನಿಮ್ಮ ಅಂಗಡಿಯ ಪಕ್ಕದಲ್ಲಿದ್ದ ಖಾಲಿನಿವೇಶನದಲ್ಲಿದ್ದ ಕಸದ ರಾಶಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು. ಈ ಬೆಂಕಿ ನಿಮ್ಮ ಫ್ರೇಂ ವರ್ಕ್ಸ್ ಅಂಗಡಿಗೂ ವ್ಯಾಪಿಸಿದೆ ಎಂದು ತಿಳಿಸಿದರು . ಕೂಡಲೇ ನಾವು ಸ್ಥಳಕ್ಕೆ ಬಂದೆವು. ಅಷ್ಟೊತ್ತಿಗಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿತ್ತು.
ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಾ ತಕ್ಷಣವೇ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದರು. ಬೆಂಕಿಯ ತೀವ್ರತೆಯನ್ನು ಕಡಿಮೆ ಮಾಡಲು ಹರಸಾಹಸ ಪಡಬೇಕಾಯಿತು. ರಾತ್ರಿ ಸುಮಾರು 11 : 30 ವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿಯವರು ಬೆಂಕಿ ನಂದಿಸುವ ಕೆಲಸವನ್ನು ಮಾಡಿದರು. ನೋಡುನೋಡುತ್ತಲೇ ಬೆಂಕಿಯ ಕೆನ್ನಾಲಿಗೆಯು ನಮ್ಮ ಅಂಗಡಿಗೆ ಹೊಂದಿಕೊಂಡಿದ್ದ ಎಸ್.ಬಿ.ಐ ರಸ್ತೆಯ ಕರ್ನಾಟಕ ಒನ್ ಕೇಂದ್ರಕ್ಕೂ ಆವರಿಸಿತು. ಈ ಹಬ್ಬಕ್ಕೆಂದು ನಾವು ಫ್ರೇಂ ವರ್ಕ್ಸ್ ಗೆಂದು ಹೆಚ್ಚಿನ ಸರಕುಗಳನ್ನು ತರಿಸಿದ್ದೆವು. ಈ ಘಟನೆಯಿಂದ ನಮಗೆ ಅಂದಾಜು 8 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಹಾಗೂ ಕರ್ನಾಟಕ ಒನ್ ಕೇಂದ್ರದ ಕಂಪ್ಯೂಟರ್, ಪ್ರಿಂಟರ್, ಪೀಠೋಪಕರಣಗಳು ಬೆಂಕಿಗಾಹುತಿಯಾಗಿದ್ದು ಸುಮಾರು ಆರು ಲಕ್ಷ ರೂಪಾಯಿಗಳಷ್ಟು ಹಾನಿಯಾಗಿದೆ ಎಂದು ಸುದ್ದಿಒನ್ ಗೆ ತಿಳಿಸಿದರು.
ಸುದ್ದಿಒನ್, ಮೊಳಕಾಲ್ಮೂರು, ಏಪ್ರಿಲ್. 03 : ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ತಾಯಿ ಮಗ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ…
ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲೂ ಬೆಲೆ ಏರಿಕೆ ಮಾಡಿ ಬಡ, ಮಧ್ಯಮವರ್ಗದ ಜನರು ಬದುಕು ನಡೆಸುವುದು ಹೇಗೆ ಎಂಬ ಪ್ರಶ್ನೆಯನ್ನು…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 : ಇತ್ತೀಚಿನ ದಿನಗಳಲ್ಲಿ ಚಿರತೆಗಳು ಸೇರಿದಂತೆ ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬರುವುದು…
ಚಿತ್ರದುರ್ಗ. ಏ.03: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಾಲಿಬಾಲ್, ಅಥ್ಲೆಟಿಕ್ಸ್ ಮತ್ತು ಷಟಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಸಂಬಂಧಿಸಿದಂತೆ,…
ಸುದ್ದಿಒನ್ : ಚಿತ್ರದುರ್ಗ, ಏಪ್ರಿಲ್. 03 : ಈ ವರ್ಷ ಫೆಬ್ರವರಿಯಿಂದಲೇ ಆರಂಭವಾದ ಬೇಸಿಗೆಯ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನತೆಗೆ…
ಸುದ್ದಿಒನ್, ಹಿರಿಯೂರು, ಏಪ್ರಿಲ್. 02 : ತಾಲ್ಲೂಕಿನ ಸೂರಪ್ಪನಹಟ್ಟಿ ಗ್ರಾಮದಲ್ಲಿ ಹೊನ್ನಾರು ಹೊಡೆಯುವ ಪದ್ದತಿ ನಡೆದುಕೊಂಡು ಬಂದಿದೆ. ಹಳ್ಳಿಗಳಲ್ಲಿ ರೈತರು…