Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

Facebook
Twitter
Telegram
WhatsApp

ಚಿತ್ರದುರ್ಗ | ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ

ಚಿತ್ರದುರ್ಗ : ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಚಿತ್ರದುರ್ಗ ಜಿಲ್ಲೆಯಲ್ಲಿ  ನಡೆದಿದೆ.

ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದ ಹನುಮಂತರಾಯ (45) ವರ್ಷದ ಮೃತ ದುರ್ದೈವಿ ರೈತನಾಗಿದ್ದಾನೆ.

ಮೃತ ರೈತನು ಹರಿಯಬ್ಬೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 60 ಸಾವಿರ ಸಾಲ, ಗ್ರಾಮ ಶಕ್ತಿ ಫೈನಾನ್ಸ್ ಕಂಪನಿಯಲ್ಲಿ 4 ಲಕ್ಷ ಸೇರಿದಂತೆ ಅದೇ ಫೈನಾನ್ಸ್ ಕಂಪನಿಯಲ್ಲಿ ಹೆಂಡತಿಯ ಹೆಸರಿನಲ್ಲಿ 11 ಸಾವಿರ ಸಾಲ ಮಾಡಿದ್ದರು. ಈ ಲಕ್ಷಾಂತರ ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಬುಧವಾರ ಬೆಳಿಗ್ಗೆ ರೈತ ಜಮೀನಿಗೆ ತೆರಳಿದ್ದು, ಸುಗಂಧರಾಜ ಹೂವಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ಸೇವಿಸಿ ಸಾವನ್ನಪ್ಪಿದ್ದಾನೆ. ಮಗ ತಂದೆಗೆ ಊಟ ತೆಗೆದುಕೊಂಡು ಹೊಲಕ್ಕೆ ಹೋದಾಗ ತಂದೆ ಮಲಗಿರುವುದನ್ನು ನೋಡಿ, ಆತಂಕಕ್ಕೆ ಒಳಗಾಗಿ, ಗಾಬರಿಯಿಂದ ಓಡಿ ಬಂದು ಮನೆಯಲ್ಲಿ  ವಿಷಯ ತಿಳಿಸಿದಾಗ, ಕುಟುಂಬಸ್ಥರು ಹೊಲಕ್ಕೆ ಹೋಗಿ ನೋಡುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಘಟನೆ ತಿಳಿಯುತ್ತಿದ್ದಂತೆಯೇ ಸಂಬಂಧಿಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೃತನನ್ನು ಕಂಡು ಕಂಬನಿ ಮಿಡಿದಿದ್ದಾರೆ. ಇನ್ನೂ
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ರೈತನಿಗೆ ಒಂದು ಗಂಡು, ಒಂದು ಹೆಣ್ಣು ಮಗಳು ಸೇರಿದಂತೆ ಒಟ್ಟು ಇಬ್ಬರು ಮಕ್ಕಳಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Apple – Diabetes: ಮಧುಮೇಹ ರೋಗಿಗಳು ಸೇಬು ತಿಂದರೆ ಏನಾಗುತ್ತೆ ಗೊತ್ತಾ..?

ಸುದ್ದಿಒನ್ : ದಿನವೂ ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯ ಬರುವುದಿಲ್ಲ ಎನ್ನುತ್ತಾರೆ. ಆದಾಗ್ಯೂ, ಸೇಬು ತಿನ್ನುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು. ವೈದ್ಯರ ಸಲಹೆಯಂತೆ ಮಧುಮೇಹ ಇರುವವರಿಗೂ ಸೇಬು ತುಂಬಾ ಒಳ್ಳೆಯದು. ಏಕೆಂದರೆ

ಈ ರಾಶಿಯವರ ಭವಿಷ್ಯ ಉಜ್ವಲವಾಗಲಿದೆ,

ಈ ರಾಶಿಯವರ ಭವಿಷ್ಯ ಉಜ್ವಲವಾಗಲಿದೆ, ಗುರುವಾರ ರಾಶಿ ಭವಿಷ್ಯ -ಏಪ್ರಿಲ್-18,2024 ಸೂರ್ಯೋದಯ: 06:01, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ, ಉತ್ತರಾಯಣಂ,ತಿಥಿ: ದಸಮಿ, ನಕ್ಷತ್ರ:

ಹಿರಿಯೂರು ಬಳಿ ರಸ್ತೆ ಅಪಘಾತ | 15 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ, ಆಸ್ಪತ್ರೆಗೆ ದಾಖಲು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 17 : ಕೆಎಸ್ಆರ್ಟಿಸಿ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ

error: Content is protected !!