Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡಬೇಕು : ಯಾದವ ರೆಡ್ಡಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ

ಸುರೇಶ್ ಪಟ್ಟಣ್
ಮೊ : 87220 22817

ಚಿತ್ರದುರ್ಗ,(ನ.15) : ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಖಾಸಗೀಕರಣವನ್ನು ಜನಪರ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದು ಯಾವುದೇ ಕಾರಣಕ್ಕೂ ಸರ್ಕಾರ ಖಾಸಗೀಕರಣ ಮಾಡಬಾರದೆಂದು ಆಗ್ರಹಿಸಿವೆ.

ಕರ್ನಾಟಕ ರಾಜ್ಯ ಸರ್ಕಾರ ತನ್ನ ಖಾಸಗಿ ವರ ಆರೋಗ್ಯ, ನೀತಿಗಳನ್ನು ಮತ್ತನ್ನು ತೀವ್ರ ಗೊಳಿಸುತ್ತಾ ಈಗ ವೈದ್ಯಕೀಯ ಕಾಲೇಜುಗಳಿಲ್ಲದ 9 ಜಿಲ್ಲೆಗಳಲ್ಲಿ ಬಿಡ್ ಮುಖಾಂತರ ಖಾಸಗಿ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳ ಒಕ್ಕೂಟವನ್ನು ಆಯ್ಕೆ ಮಾಡಿ, ಆಯ್ಕೆಯಾದ ಸಂಸ್ಥೆಗೆ ವೈದ್ಯಕೀಯ ಕಾಲೇಜು ತೆರೆದು, ನಡೆಸಲು ಭೂಮಿ ಮತ್ತು ಅನುದಾನವನ್ನು ನೀಡಲಿದೆ.

ಜೊತೆಗೆ ಈ ಜಿಲ್ಲೆಗಳಲ್ಲಿನ ಜಿಲ್ಲಾ ಆಸ್ಪತ್ರೆಗಳನ್ನು ನವೀಕರಣಗೊಳಿಸಿ, ಮಲ್ಮರ್ಜೆಗೇರಿಸುವ ನೆಪದಲ್ಲಿ, ಆಯ್ಕೆಯಾದ ಖಾಸಗಿ ಸಂಸ್ಥೆಗೆ ಜಿಲ್ಲಾ ಆಸ್ಪತ್ರೆಯ ಭೂಮಿ, ಕಟ್ಟಡ, ಸಿಬ್ಬಂದಿ, ಸಲಕರಣೆಗಳು, ಇತ್ಯಾದಿ ಒಳಗೊಂಡತೆ ಎಲ್ಲವನ್ನು ಕನಿಷ, 60 ವರ್ಷಗಳ ಅವಧಿಗೆ ಹಸ್ತಾಂತರ ಮಾಡಲು ನಿರ್ಧರಿಸಿದೆ ಎಂದು ದೂರಿದರು.

ಸರ್ಕಾರಿ- ಖಾಸಗಿ ಒಡಂಬಡಿಕೆಗಳು ನಮ್ಮ ರಾಜ್ಯಕ್ಕೆ ಹೊಸದೇನು ಅಲ್ಲ. ಆದರೆ ಇಂತಹ ಒಡಂಬಡಿಕೆಗಳು ನಮ್ಮಲ್ಲಿ ಎಲ್ಲೂ ಯಶಸ್ವಿಯಾಗಿಲ್ಲ, ಬದಲಿಗೆ ಬಡವರಿಗೆ, ಶೋಷಿತ ಸಮುದಾಯಗಳಿಗೆ ಮಾರಕವಾಗಿವ ಎಂದು ಸರ್ಕಾರದ ಸಂಶೋಧನೆಗಳು ಸಾಬಿತು ಪಡಿಸಿವೆ. ಈ ಒಡಂಬಡಿಕೆಗಳ ವಿರುದ್ಧ ಬಲವಾದ ಪುರಾವೆಗಳಿದ್ದರೂ ಅವುಗಳನ್ನು ನಿರ್ಲಕ್ಷಿಸಿ, ಅದೇ ಮಾದರಿಯನ್ನು ಜನರ ಮೇಲೆ ಹೇರಿ ರಾಜ್ಯ ಸರ್ಕಾರ ಜನರಿಗೆ ಉದ್ದೇಶವುಕವಾಗಿ ದ್ರೋಹ ಬಗೆದು, ವಂಚಿಸುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ಜನಾರೋಗ್ಯ ಚಳುವಳಿಯ ವಿಜಯ್ ಮಾತನಾಡಿ, ರಾಜ್ಯ ಸರ್ಕಾರ ಕಾತುರದಿಂದ ಕಾರ್ಯಗತಕ್ಕೆ ತರಲು ನಿರ್ಧರಿಸದ ಯೋಜನೆಯು ಮತ್ತಷ್ಟು ಅಪಾಯಕಾರಿಯಾಗಿದೆ. ಈ ಯೋಜನೆಯಡಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಯ ನಡುವ ಒಪ್ಪಂದದ ಪ್ರತಿಯನ್ನು ನೀತಿ ಆಯೋಗ ಹೊರಡಿಸಿದೆ.

ಒಪ್ಪಂದದ ಪುತಿಯಲ್ಲಿ ಜನವಿರೋಧಿ ಅಂಶಗಳಿವೆ:  ಈಗಿರುವ ಜಿಲ್ಲಾ ಆಸ್ಪತ್ರೆಯನ್ನು ತಮಗೆ ತೋಚಿದ ರೀತಿಯಲ್ಲಿ ಬದಲಾಯಿಸುವ, ಬಳಸುವ, ಮತ್ತು ಸೇವೆಗಳಿಗೆ ಶುಲ್ಕ ವಿಧಿಸುವ ಸಂಪೂರ್ಣ ಹಕ್ಕನ್ನು ಆಯ್ಕೆಯಾದ ಖಾಸಗಿ ಸಂಸ್ಥೆ ಹೊಂದಿರುತ್ತದೆ. ನವೀಕರಣಗೊಂಡ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲ’ ಬೆಡ್ ಗಳನ್ನು ಉಚಿತ ಬೆಡ್‍ಗಳೆಂದು ನೇಮಿಸಲಾಗುವುದು. ಈ ಉಚಿತ ಬೆಡ್‍ಗಳಲ್ಲಿ ಚಿಕಿತ್ಸೆ ಪಡೆಯಲು ಬಯಸುವವರು, ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಒಂದು ಪ್ರಮಾಣ ಪತ್ರ ತರಬೇಕಾಗುತ್ತದೆ. ‘ಉಚಿತ’ ಬೆಡ್‍ಗಳನ್ನು ಹೊರತುಪಡಿಸಿ ಉಳಿದ ಬೆಡ್‍ಗಳು ‘mಚಿಡಿಞeಣ’ ಬೆಡ್ ಗಳಾಗಿರುತ್ತವೆ.

ಅಂದರೇ, ಈ ‘mಚಿಡಿಞeಣ’ ಬೆಡ್‍ಗಳ ಮೇಲೆ ಖಾಸಗಿ ಸಂಸ್ಥೆಯು ತನಗೆ ತೋಚಿದ ಶುಲ್ಕವನ್ನು ವಿಧಿಸಬಹುದು, ಅದರ ಮೇಲೆ ಸರ್ಕಾರದ ಯಾವುದೇ ಹತೋಟಿ ಇರುವುದಿಲ್ಲ. ಅಂದರೆ ಉಳ್ಳವರಿಗೆ ಉತ್ತಮ ಗುಣಮಟ್ಟದ ಸೇವಗಳು ಇಲ್ಲದವರಿಗೆ ಕಳಪೆ ಸೇವೆಗಳನ್ನು ನೀಡುವ ದ್ವಂದ್ವವ ವ್ಯವಸ್ಥೆ ಉಂಟಾಗಿ ಬಡವರಿಗೆ, ಶೋಷಿತ ಸಮುದಾಯಗಳಿಗೆ, ಅದರಲ್ಲೂ ಮಹಿಳೆಯರಿಗೆ, ಮಕ್ಕಳಿಗೆ, ವೈದ್ಯರಿಗೆ ಆರೋಗ್ಯ ಸೇವೆಗಳು ಕೈಗೆಟಕದಂತಾಗುತ್ತದೆ ಎಂದು ಆರೋಪಿಸಿದರು.

ಖಾಸಗಿ ಸಂಸ್ಥೆಯ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರಿ ಅಧಿಕಾರಿಗಳ ಅಥವ ಚುನಾಯಿತ ಪ್ರತಿನಿಧಿಗಳ ಪ್ರತಿನಿಧಿತ್ವ ಇಲ್ಲ, ಜನ ಪ್ರತಿನಿದಿಗಳೂ ಕೂಡ ಜಿಲ್ಲಾ ಆಸ್ಪತ್ರೆಯ ಮತ್ತು ಜಿಲ್ಲಾ ವೈದ್ಯಕೀಯ ಕಾಲೇಜಿನ ಆಗುಹೋಗುಗಳಲ್ಲಿ ಭಾಗವಹಿಸುವ, ಅವುಗಳನ್ನು ವುಶ್ನಿಸುವ ಹಕ್ಕನ್ನು ಹೊಂದಿರುವುದಿಲ್ಲ. ಅಲ್ಲಿ ಏನಾದರೂ ಅನಾಹುತ ನಡೆದರೂ, ಎಲ್ಲರೂ ಮೂಕ ಪ್ರೇಕ್ಷಕರಾಗಿ ಸಹಿಸಿಕೊಳ್ಳಬೇಕಾಗುತ್ತದೆ. ಈ ರೀತಿಯಲ್ಲಿ ರಾಜ್ಯ ಸರ್ಕಾರ ನಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಹರಾಜು ಹಾಕಲಿದೆ ಹಸ್ತಾಂತರಗೊಂಡ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಯನ್ನು ಹೊಸ ಮಡಿಕಲ್ ಕಾಲೇಜಿನಲ್ಲಿ ಜಿಚಿಛಿuಟಣಥಿಯಾಗಿ ಕೂಡ ಬಳಸಿಕೊಳ್ಳಬಹುದು, ಇಚ್ಛೆಯಿದ್ದವರು, ಸರ್ಕಾರಿ ಕೆಲಸಕ್ಕೆ ರಾಜೀನಾಮ ನೀಡಿ ಮೆಡಿಕಲ್ ಕಾಲೇಜಿಗೆ ಸೇರಬಹುದು. ಅಂದರೆ, ಈಗಾಗಲೇ ವ್ಯದ್ಯರ ಕೊರತೆಯಿಂದ ತತ್ತರಿಸುತ್ತಿರುವ ಸರ್ಕಾರಿ ಆರೋಗ ವ್ಯವಸ್ಥೆಯಿಂದ ಈಗಿರುವ ಸರ್ಕಾರಿ ವ್ಯದ್ಯರೂ ಕೂಡ ಖಾಸಗಿ ಪಾಲಾಗಲು ಈ ಒಪ್ಪಂದ ದಾರಿ ಮಾಡಿಕೊಡಲಿದೆ ಎಂದರು.

ಚಿಂತಕರಾದ ಯಾದವ್ ರೆಡ್ಡಿ ಮಾತನಾಡಿ, ಮೆಡಿಕಲ್ ಕಾಲೇಜಿನಲ್ಲಿ ಎಷ್ಟು ಶುಲ್ಕ ವಿಧಿಸಬೇಕೆಂಬುದರ ಬಗ್ಗೆ, ಸ್ಪಷ್ಟತೆ ಇಲ್ಲ. ಹಾಗಾಗಿ ಖಾಸಗಿ ಸಂಖ್ಯೆಯು ಇತರ ಖಾಸಗಿ ವೈದ್ಯಕೀಯ ಕಾಲೇಜುಗಳಂತೆ ತನಗೆ ತೋಚಿದ ಶುಲ್ಕ ವಿಧಿಸಬಹುದು. ಆದ್ದರಿಂದ ವೈದ್ಯಕೀಯ ಶಿಕ್ಷಣ ಬಡವರಿಗೆ, ಶೋಷಿತ ಸಮುದಾಯಗಳಿಗೆ ಕೈಗೆಟುಕುವುದಿಲ್ಲ. ಈಗಾಗಲೇ ಪ್ರದ ವೃತ್ತಿಯಲ್ಲಿ ಶೋಷಿತ ಸಮುದಾಯಗಳ ಪ್ರತಿನಿಧಿಘ್ನ ಅತ್ಯಲ್ಪವಾಗಿದ್ದು ಇನ್ನು ಮುಂದೆ ಗಣನೆಗೆ ಬಾರದಂತಾಗಲಿದೆ ಎಂದರು.

ಈ ಒಪ್ಪಂದದಲ್ಲಿ ಖಾಸಗಿ ಸಂಸ್ಥೆ ವಹಿಸಿಕೊಳ್ಳಲೇಬೇಕಾದ ಮೂಲ ಜವಾಬ್ದಾರಿಗಳ ಬಗ್ಗೆ, ಯಾವುದೇ ಉಲ್ಲೇಖ ಇಲ್ಲ, ಯಾವುದೇ ಒಪ್ಪಂದದಲ್ಲಿ ಖಾಸಗಿ ಸಂಸ್ಥೆ ಮುಟ್ಟಲೇಬೇಕಾದ ಮೂಲ ಆರೋಗ್ಯ ಸೂಚಿಗಳ ಗುರಿಗಳುಇರಲೇಬೇಕು. ಆದರೇ ಈ ಒಪ್ಪಂದದಲ್ಲಿ ಅಂತಹ ಗುರಿಗಳ ಯಾವುದೇ ಉಲ್ಲೇಖವಿಲ್ಲ. ರಾಜ್ಯ ಸರ್ಕಾರದ ಅನಾಹುತಕಾರಿ ಖಾಸಗಿಕರಣದ ನೀತಿಯನ್ನು ಎಲ್ಲಾ ಪ್ರಗತಿಪರ, ಜನಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಮತ್ತು ಈ ದುರ್ನೀತಿಯನ್ನು ಈ ತಕ್ಷಣವೇ ಹಿಂಪಡೆದು, ರದ್ದು ಮಾಡಬೇಕೆಂದು ಆಗ್ರಹಿತ್ತವೆ. ಜೊತೆಗೆ, ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರದ ಆಡಳಿತದಲ್ಲಿ ನಡೆಯುವ ಒಂದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ತೆರೆಯಬೇಕು ಮತ್ತು ಈಗಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸಿ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡಬೇಕೆಂದು ಒತ್ತಾಯಿಸಲಾಯಿತು.

ಕರ್ನಾಟಕ ಜನಶಕ್ತಿಯ ಷಫಿವುಲ್ಲಾ ಮಾತನಾಡಿ, ಯಾವುದೇ ಕಾರಣಕ್ಕೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿ ವಾಲಾಗಲು ಬಿಡುವುದಿಲ್ಲ, ಜಿಲ್ಲಾ ಆಸ್ಪತ್ರೆಯನ್ನು ಜನರಿಗೆ ದಕ್ಕಿಸಿಕೊಳ್ಳಲು ವಿವಿಧ ರೀತಿಯ ಹೋರಾಟಗಳನ್ನು ಪ್ರಾರಂಭಿಸುತ್ತೇವೆ ಮತ್ತು ಆಸ್ಪತ್ರೆಯಲ್ಲಿ ಏನೆ ಸಮಸ್ಯೆಗಳಿದಲ್ಲಿ ಅವುಗಳನ್ನು ಪರಿಹರಿಸಲು ನಮ್ಮ ಬೆಂಬಲ ಸದಾಕಾಲ ಇರುವುದೆಂದು ತಿಳಿಸಿದರು.

ಗೋಷ್ಟಿಯಲ್ಲಿ ಸ್ವಾವಲಂಬಿ ಒಕ್ಕೂಟದ ಅರುಂದತಿ, ಸ್ಪಿನ್‍ನ ಜಿಲ್ಲಾ ಸ್ವಯಂ ಒಕ್ಕೂಟದ ಕುಮಾರ್, ಎಸ್ತರ್ ಸುನಂದ ಸಾಗರ್, ಕರಿಯಪ್ಪ, ಲೋಕೇಶ್, ತಿಪ್ಪೇಸ್ವಾಮಿ, ಹಂಪಣ್ಣ, ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಎಸ್ಐಟಿ ತನಿಖೆಗೆ : ಡಿಸಿಎಂ ಮಾತಿಗೆ ಅಭಿನಂದನೆ ಸಲ್ಲಿಸಿದ ಠೇವಣಿದಾರರು

ಬೆಂಗಳೂರು: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಈ ಮೊದಲು ಸಾಕಷ್ಟು ಸದ್ದು ಮಾಡಿತ್ತು. ಇದೀಗ ಅದರ ತನಿಖೆಯನ್ನು ಎಸ್ಐಟಿಗೆ ವಹಿಸುತ್ತೇನೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದು

ಮೋದಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೀದರ್, ಏಪ್ರಿಲ್ 25: ಹುಬ್ಬಳಿಯ ನೇಹಾ ಹೀರೆಮಠ ಕೊಲೆ ಪ್ರಕರಣವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ ಹಾಗೂ ಆರೋಪಿಗೆ ಘೋರ ಶಿಕ್ಷೆ ವಿಧಿಸಲು ಸಿಐಡಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

error: Content is protected !!