ಚಿತ್ರದುರ್ಗ : ವಿಶ್ವ ಹಿಂದು ಪರಿಷತ್ ವೀರಮದಕರಿ ಸೇವಾ ಟ್ರಸ್ಟ್ (ರಿ) ಚಿತ್ರದುರ್ಗ ವತಿಯಿಂದ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ ಸಮರ್ಪಣ ಕಾರ್ಯಕ್ರಮದಡಿಯಲ್ಲಿ ಏರ್ಪಡಿಸಿದ್ದ ದೇಸಿ ತಳಿಗಳ ಗೋ ಪ್ರದರ್ಶನ ಸ್ಫರ್ದೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡಿಯಿಂದ ಸುಮಾರು 30 ಹಸು ಮತ್ತು ಎತ್ತುಗಳು ಭಾಗವಹಿಸಿದ್ದವು.
ಇದರಲ್ಲಿ ಮೆಲೆನಾಡ ಗಿಡ್ಡ, ಹಳ್ಳಿಕಾರ್, ಕಾಂಕ್ರೇಜ್ ತಳಿ, ಅಮೃತ್ ಮಹಲ್, ದೇವಣಿ ಸಾಯಿಮಲ್ ತಳಿ, ಗಿರಿ ತಳಿ ಸೇರಿದಂತೆ ಇತರೆ ತಳಿಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಹಸು ಮತ್ತು ಎತ್ತುಗಳ ಮಾಲಿಕರು ತಮ್ಮ ಜಾನುವಾರುಗಳಿಗೆ ವಿವಿಧ ರೀತಿಯಲ್ಲಿ ಅಲಂಕಾರವನ್ನು ಮಾಡಿಕೊಂಡು ಬಂದಿದ್ದು ನೋಡುಗರನ್ನು ಗಮನ ಸೆಳೆದವು.
ಜಾನುವಾರಗಳ ಮೈಗೆ ವಿವಿಧ ರೀತಿಯ ಹೂಗಳಿಂದ ಅಲಂಕಾರ ಹಾಗೂ ಅದರ ಕೊಂಬುಗಳಿಗೆ ವಿವಿಧ ಬಣ್ಣದ ದಾರದಿಂದ ಸುತ್ತುವರೆಯುವುದರ ಮೂಲಕ ಅಲಂಕಾರ ಮಾಡಲಾಗಿತ್ತು. ಸಂಘಟಕರಿಂದ ಜಾನುವಾರುಗಳಿಗೆ ಮೇವು ಮತ್ತು ಕುಡಿಯವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು ಅಲ್ಲದೆ ಪಶು ವ್ಯದ್ಯರಿಂದ ಜಾನುವಾರುಗಳ ತಪಾಸಣೆಯನ್ನು ಸಹಾ ಏರ್ಪಡಿಸಲಾಗಿತ್ತು.
ನಗರದ ಗೋನೂರಿನ ರಾಜ ರಾಜೇಶ್ವರಿ ಗೋಶಾಲೆಯ ಜಾನುವಾರು ಕಾಂಕ್ರೇಜ್ ತಳಿ ಪ್ರಥಮ ಸ್ಥಾನವಾಗಿ 25 ಸಾವಿರ ನಗದು ಬಹುಮಾನ ಪ್ರಶಸ್ತಿ ಪತ್ರ, ದ್ವೀತೀಯ ಸ್ಥಾನವನ್ನು ತೊಡರನಾಳ್‍ನ ದಿವಾಕರರವರ ಗಿರಿತಳಿ ಜಾನುವಾರು ಪಡೆದು 15 ಸಾವಿರ ನಗದು ಪ್ರಶಸ್ತಿ ಪತ್ರ ಹಾಗೂ ತೃತೀಯ ಸ್ಥಾನವನ್ನು ಈರಜ್ಜನಹಟ್ಟಿಯ ಕೃಷ್ಣಮೂರ್ತಿಯವರ ಅಮೃತ್ ಮಹಲ್ ಜಾನುವಾರು ಪಡೆದು 10 ಸಾವಿರ ನಗದು ಪ್ರಶಸ್ತಿ ಪತ್ರವನ್ನು ಪಡೆಯಿತು.
ವಿಶೇಷ ಸ್ಥಾನವಾಗಿ ಹಿರಿಯೂರಿನ ಸ್ವರ್ಣ ಭೂಮಿ ಗೋಶಾಲೆಯ ಜಾನುವಾರುಗಳಿಗೆ 5000 ಬಹುಮಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ಗೋವಿನ ಉತ್ಪನ್ನಗಳಿಂದ ತಯಾರು ಮಾಡಲಾದ ವಿವಿಧ ರೀತಿಯ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿತ್ತು.