Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಎಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಡಿಸೆಂಬರ್ 09 ರಂದು ರಕ್ತದಾನ ಶಿಬಿರ

Facebook
Twitter
Telegram
WhatsApp

ವರದಿ :  ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 7899864552

ಚಿತ್ರದುರ್ಗ, (ಡಿ.08) : ಭಾರತದ ಮುಂಚೂಣಿ ಖಾಸಗಿ ಎಚ್.ಡಿ.ಎಫ್.ಸಿ. ಬ್ಯಾಂಕ್ ಡಿಸೆಂಬರ್ 09 ರಂದು ರಾಷ್ಟ್ರವ್ಯಾಪಿ ರಕ್ತದಾನ ಶಿಬಿರ ನಡೆಸಲಿದೆ.

ನಗರದ ದಾವಣಗೆರೆ ರಸ್ತೆಯಲ್ಲಿರುವ ಎಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿಯೂ ಸಹಾ ನಾಳೆ (ಡಿಸೆಂಬರ್ 09) ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಈ ವಾರ್ಷಿಕ ಅಭಿಯಾನವು ಎಚ್.ಡಿ.ಎಫ್.ಸಿ.ಬ್ಯಾಂಕ್ ತನ್ನ ಮುಂಚೂಣಿಯ ಸಿ.ಎಸ್.ಆರ್. ಕಾರ್ಯಕ್ರಮ ಪರಿವರ್ತನ್ ಅಡಿಯಲ್ಲಿ ರಕ್ತದಾನ ಶಿಬಿರ ನಡೆಸುತ್ತಿದ್ದು, ತನ್ನ ಹದಿನಾಲ್ಕನೇ ವರ್ಷದಲ್ಲಿ ಭಾರತಾದ್ಯಂತ 1150 ನಗರಗಳ 5500 ಕೇಂದ್ರಗಳಲ್ಲಿ ಆಯೋಜಿಸುತ್ತಿದೆ.

ಇದರಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು, ಕಾಲೇಜು, ಮತ್ತು ಬ್ಯಾಂಕ್‍ಗಳು, ಒಳಗೊಂಡಿವೆ. 4.5 ಲಕ್ಷಕ್ಕೂ ಹೆಚ್ಚು ದಾನಿಗಳು ಈ ಬಾರಿಯ ಉಪಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ತಾಂತ್ರಿಕ ಮತ್ತು ಕಾರ್ಯನಿರ್ವಹಣೆಯ ನೆರವಿಗೆ ಸ್ಥಳೀಯ ಆಸ್ಪತ್ರೆಗಳು ರಕ್ತನಿಧಿಗಳು, ಕಾಲೇಜುಗಳು ಸಹಯೋಗ ಹೊಂದಿವೆ. ದೇಶಾದ್ಯಂತ 1200 ಕ್ಕೂ ಹೆಚ್ಚು ಕಾಲೇಜುಗಳನ್ನು ರಕ್ತದಾನದ ಕೇಂದ್ರಗಳಾಗಿ ಗುರುತಿಸಲಾಗಿದೆ.

ಆಸ್ಪತ್ರೆಗೆ ಸೇರುವ ಏಳು ಮಂದಿಯಲ್ಲಿ ಒಬ್ಬರಿಗೆ ರಕ್ತದ ಅವಶ್ಯಕತೆಯಿರುತ್ತದೆ. ಎಚ್.ಡಿ.ಎಫ್.ಸಿ.ಬ್ಯಾಂಕ್ ಪರಿವರ್ತನ್ ಸಮಾಜದಲ್ಲಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಹೊರಟಿದ್ದು, ರಕ್ತದಾನದ ಮಹತ್ವ ಹಾಗೂ ಪ್ರಾಮುಖ್ಯತೆ ಕುರಿತು ಸಾರ್ವಜನಿರಲ್ಲಿ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದ್ದು, ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು ಎಂದು ಸ್ಟ್ರಾಟಜಿ ಅಡ್ಮಿನಿಸ್ಟ್ರೇಷನ್ ಇನ್ಪ್ರಾಸ್ಟ್ರಕ್ಚರ್ ಅಂಡ್ ಸಿ.ಎಸ್.ಆರ್.ಗ್ರೂಪ್ ಹೆಡ್ ಅಶಿಮಾ ಭಟ್ ತಿಳಿಸಿದ್ದಾರೆ.

ಈ ಉಪಕ್ರಮವು 2013 ರಲ್ಲಿ ಅತ್ಯಂತ ದೊಡ್ಡ ಹಲವು ತಾಣದಲ್ಲಿ ರಕ್ತದಾನ ಉಪಕ್ರಮಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯ ಪುಸ್ತಕದಲ್ಲಿ ಮಾನ್ಯತೆ ಹಾಗೂ ಪ್ರಮಾಣ ಪತ್ರ ಪಡೆದಿದೆ. 2007 ರಲ್ಲಿ ಕೇವಲ 88 ಕೇಂದ್ರಗಳಲ್ಲಿ ನಾಲ್ಕು ಸಾವಿರ ದಾನಿಗಳಿಂದ ಪ್ರಾರಂಭವಾಯಿತು.

ಇದು ಹದಿನಾಲ್ಕನೇ ಅಖಿಲ ಭಾರತ ರಕ್ತದಾನ ಅಭಿಯಾನವಾಗಿದ್ದು, 2007 ರಿಂದಲೂ ಬೆಂಬಲಿಸಿಕೊಂಡು ಬರುತ್ತಿದ್ದೇವೆಂದು ಎಚ್.ಡಿ.ಎಫ್.ಸಿ. ಬ್ಯಾಂಕ್‍ನ ಆಪರೇಷನ್ಸ್ ಗ್ರೂಪ್ ಹೆಡ್ ಭವೇಶ್ ಜುವೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಕ್ತದಾನ ಮಾಡಬಯಸುವವರು ನಗರದ ದಾವಣಗೆರೆ ರಸ್ತೆಯ ಎಚ್.ಡಿ.ಎಫ್.ಸಿ. ಬ್ಯಾಂಕ್‍ನ್ನು ಸಂಪರ್ಕಿಸಬಹುದಾಗಿದೆ.

ಉಮೇಶ್ ಕೋಲಾರ
ಮೊ : 8722220688

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!