ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : ತಾಲೂಕಿನ ಭೀಮಸಮುದ್ರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ರದ್ದುಗೊಂಡಿದೆ.
ಫೆಬ್ರವರಿ 05 ರಂದು ಒಟ್ಟು 20 ಸದಸ್ಯರ ಪೈಕಿ 14 ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ, ಉಪ ವಿಭಾಗಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದರು. ಅವಿಶ್ವಾಸ ನಿರ್ಣಯ ಮಂಡಿಸಲು ಇಂದು (ಮಾರ್ಚ್.03, ಸೋಮವಾರ) 12 ಗಂಟೆಗೆ ಸಮಯ ನಿಗದಿಗೊಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ಸಭೆ ಕರೆದಿದ್ದರು. ಕೇವಲ ಒಬ್ಬರನ್ನು ಹೊರತುಪಡಿಸಿ ಎಲ್ಲ ಸದಸ್ಯರು ಗೈರು ಹಾಜರಾದ ಕಾರಣ ಅವಿಶ್ವಾಸ ಸೂಚನೆ ಸಭೆ ಕರೆಯಲು ನೀಡಿದ್ದ ಅರ್ಜಿ ರದ್ದುಗೊಳಿಸಲಾಗಿದೆ. ಅಧ್ಯಕ್ಷರಾಗಿ ಪಾಲಾಕ್ಷಮ್ಮ ಮತ್ತು ಉಪಾಧ್ಯಕ್ಷರಾಗಿ ಉಮೇಶ್ ಮುಂದುವರೆದರು. ಅವಿಶ್ವಾಸ ಸೂಚನೆ ಸಭೆ ರದ್ದಾದ ಹಿನ್ನಲೆಯಲ್ಲಿ ಉಪಾಧ್ಯಕ್ಷರಿಗೆ ಗ್ರಾಮದ ಮುಖಂಡರು ಹೂವಿನ ಹಾರ ಹಾಕಿಕೊಂಡು ಸಂತಸ ಹಂಚಿಕೊಂಡರು.
ಹೊರಗೆ ಹೋದರೆ ತಣ್ಣನೆಯ ಗಾಳಿ ಎಲ್ಲಾದರೂ ಬೀಸುತ್ತಾ, ನೆರಳು ಸಿಗುತಚತಾ, ಎಷ್ಟೊತ್ತಿಗೆ ಮನೆ ಸೇರ್ತೀವಿ ಎಂಬ ಚಿಂತೆ ಶುರುವಾಗುತ್ತದೆ. ಅದಕ್ಕೆ…
ಈ ರಾಶಿಯವರ ವ್ಯಾಪಾರ ಡಬಲ ಲಾಭ, ಈ ರಾಶಿಯವರ ವ್ಯಾಪಾರದಲ್ಲಿ ಬರೀ ನಷ್ಟ, ಶುಕ್ರವಾರದ ರಾಶಿ ಭವಿಷ್ಯ 21 ಮಾರ್ಚ್…
ಮಾರ್ಚ್ 22ರಿಂದ 18ನೇ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ. ಈ 17 ಆವೃತ್ತಿಗಳಲ್ಲೂ ಒಂದೇ ಒಂದು ಮ್ಯಾಚ್ ಅನ್ನು ಆರ್ಸಿಬಿ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 20 : ಜಿಲ್ಲೆಯಾದ್ಯಂತ ಇಸ್ಪೀಟು ಜೂಜು ಅಡ್ಡೆಗಳ ಮೇಲೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 20 : ಪ್ರಶಿಕ್ಷಣಾರ್ಥಿಗಳು ಪಠ್ಯ ಬೋಧನೆಯಲ್ಲಿ ರಂಗಭೂಮಿಯ ಕೌಶಲಗಳನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು. ಪರಿಣಾಮ ಬೋಧನೆಗೆ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಮಾರ್ಚ್. 20…