ಮೆಗಾಸ್ಟಾರ್ ಮಗಳು ಡಿವೋರ್ಸ್ ಹಂತ ತಲುಪಿದ್ರಾ.. ಆ ಒಂದು ಬದಲಾವಣೆ ಮೂಡಿಸುತ್ತಿದೆ ಅನುಮಾನ..!

suddionenews
1 Min Read

ಅದ್ಯಾಕೋ ಏನೋ ಸೆಲೆಬ್ರೆಟಿಗಳ ಬದುಕಲ್ಲಿ ಸಾಂಸಾರಿಕ ಜೀವನದ ಬದಲಾವಣೆಗಳು ಸಾಕಷ್ಟು ನಡೆಯುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಸಮಂತಾ ನಾಗಚೈತನ್ಯ ದೂರಾಗಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ರು. ನಿನ್ನೆಯಿಂದಯಿಂದ ರಜನೀಕಾಂತ್ ಮಗಳ ವಿಚ್ಛೇದನ ಕೇಸ್ ಸೌಂಡ್ ಮಾಡ್ತಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿಯ ವಿಚಾರವೂ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂಬ ಅನುಮಾನ ಮೂಡಿದೆ.

ಚಿರಂಜೀವಿ ಪುತ್ರಿ ಶ್ರೀಜಾ ದಾಂಪತ್ಯ ಜೀವನಕ್ಕೆ ಅಂತ್ಯವಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಯಾಕಂದ್ರೆ ಶ್ರೀಜಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಹೆಸರನ್ನ ಬದಲಾಯಿಸಿದ್ದಾರೆ. ಶ್ರೀಜಾ ಕಲ್ಯಾಣ್ ಅಂತ ಇದ್ದ ಹೆಸರು ಇದೀಗ ಶ್ರೀಜಾ ಕೋನಿಡೇಲಾ ಎಂದಾಗಿದೆ. ಈ ಮುಂಚೆ ಸಮಂತಾ ಕೂಡ ಇದೇ ರೀತಿ ಮಾಡಿದ್ದರು. ಅಕ್ಕಿನೇನಿ ಕುಟುಂಬದ ಹೆಸರನ್ನ ದಿಢೀರನೇ ತೆಗೆದಿದ್ದರು. ಅದು ಕೊನೆಗೆ ವಿಚ್ಛೇಧನದ ಹಂತಕ್ಕೆ ಬಂದಿತ್ತು. ಇದೀಗ ಶ್ರೀಜಾ ಕೂಡ ಅದೇ ಹಾದಿ ತುಳಿದರಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಶ್ರೀಜಾ ಮತ್ತು ಕಲ್ಯಾಣ್ ದೇವ್ 2016 ರಲ್ಲಿ ಮದುವೆಯಾಗಿದ್ದರು. ಅವರಿಗೆ ಒಂದು ಹೆಣ್ಣು‌ ಮಗು ಕೂಡ ಇದೆ. ಇನ್ನು ಶ್ರೀಜಾಗೆ ಇದು ಎರಡನೇ ಮದುವೆ. ಮೊದಲ ಪತಿಯಿಂದ ಡಿವೋರ್ಸ್ ಪಡೆದ ಬಳಿಕ ಬಾಲ್ಯದ ಗೆಳೆಯ ಕಲ್ಯಾಣ್ ದೇವ್ ಅವರನ್ನ ಮದುವೆಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಶ್ರೀಜಾಗೆ. ಇದೀಗ ಇವರ ಡಿವೋರ್ಸ್ ವಿಚಾರ ಟಾಲಿವುಡ್ ಅಂಗಳದಲ್ಲಿ ಬಾರಿ ಸದ್ದು ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *