in ,

ಚಿರು ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳೋಕೆ ಹೆದರೋರು, ಅವರ ಬಗ್ಗೆ ನೆಗೆಟಿವ್ ಮಾತಾಡೋರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ : ಮೇಘನಾ ರಾಜ್

suddione whatsapp group join

ಚಿರಂಜೀವಿ ಸರ್ಜಾ ನಿಧನರಾಗಿ ವರ್ಷವೇ ಕಳೆದಿದೆ. ರಾಯನ್ ರಾಜ್ ಸರ್ಜಾ ಹುಟ್ಟಿದ‌ ಮೇಲೆ ಅವನ ಆರೈಕೆಯಿಂದಾಗಿ ಮೇಘನಾ ರಾಜ್ ಕೊಂಚ ಸುಧಾರಿಸಿಕೊಂಡಿದ್ದಾರೆ. ಆದ್ರೆ ಚಿರಂಜೀವಿ ಸರ್ಜಾ ನಿಧನದ ಬಳಿಕ ಸಾಕಷ್ಟು ಜನ ಸಾಕಷ್ಟು ಮಾತಾಡಿದ್ರು, ಆ ಬಗ್ಗೆ ನೋವನ್ನು ತೋಡಿಕೊಂಡಿದ್ದಾರೆ.

ರಾಯನ್ ರಾಜ್ ಸರ್ಜಾ ನಾಮಕರಣವಾದ ಬಳಿಕ ಖಾಸಗಿ ಮಾಧ್ಯಮವೊಂದಕ್ಕೆ ಮೇಘನಾ ಮನಬಿಚ್ಚಿ ಮಾತನಾಡಿದ್ದಾರೆ. ಎಲ್ಲರಿಗೂ ಗೊತ್ತೆ ಇದೆ ಮೇಘನಾ ಹಾಗೂ ಚಿರು ಪ್ರೀತಿಸಿ, ಮದುವೆಯಾದವರು ಹೀಗಾಗಿ ಚಿರು ಬಗ್ಗೆ ಮೇಘನಾಗಿಂತ ಬೇರೆ ಯಾರು ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲವೇನೋ. ಅದನ್ನೇ ಆ ಸಂದರ್ಶನದಲ್ಲೂ ಮೇಘನಾ ಹೇಳಿರೋದು.

ಚಿರುನಾ ಹತ್ತಿರದಿಂದ ಬಲ್ಲವರ್ಯಾರು ಈ ರೀತಿ ಮಾತನಾಡಲ್ಲ. ಚಿರು ಬಗ್ಗೆ ನೆಗೆಟಿವ್ ಮಾತನಾಡೋರಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ. ಚಿರು ಅವರು ಒಂದು ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳೋಕೆ ಹೆದರೋರು, ಆಸ್ಪತ್ರೆ ಅಂದ್ರೆ ಭಯ ಪಡೋರು. ಅಂಥದ್ರಲ್ಲಿ ಚಿರು ಹಂಗ್ ಮಾಡ್ತಿದ್ರು, ಹಿಂಗ್ ಮಾಡ್ತಿದ್ರು ಅಂದ್ರೆ…? ಚಿರು ಏ‌ನು ಅಂತ ನಮಗೆ ಗೊತ್ತು ಯಾರು ಏನೋ ಹೇಳಿದ್ರೆ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಹಬ್ಬದ ದಿನವೇ ಸಾವಿನ ದಾರಿ ಹಿಡಿದ ಬೈಕ್ ಸವಾರರು..!

ಅಕ್ಟೋಬರ್ ವೇಳೆಗೆ ಗ್ಯಾಸ್ ಬೆಲೆ ಇನ್ನು ಹೆಚ್ಚಾಗುವ ಸಾದ್ಯತೆ ಇದೆ..!