ಗಡಿಯಲ್ಲಿ ಭಾರೀ ಪ್ರಮಾಣದ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿರುವ ಚೀನಾ : ಪೆಂಟಗನ್ ವರದಿಯಲ್ಲೇನಿದೆ ?

 

 

ಸುದ್ದಿಒನ್ : ಗಡಿ ವಿಚಾರದಲ್ಲಿ ಭಾರತದೊಂದಿಗೆ ನಿರಂತರವಾಗಿ ಘರ್ಷಣೆ ನಡೆಸುತ್ತಿರುವ ಚೀನಾ ಭಾರೀ ಪ್ರಮಾಣದ ಸೇನಾ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜಿಸುತ್ತಿದೆ. ಗಡಿಗಳಲ್ಲಿ ಪರಮಾಣು ಅಸ್ತ್ರಗಳನ್ನು ಕೂಡ ನಿಯೋಜಿಸಲಾಗುತ್ತಿದೆ.  ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯ ನಂತರ, ಈ ವ್ಯವಸ್ಥೆಗಳ ಉಲ್ಬಣವು ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

2021 ಕ್ಕೆ ಹೋಲಿಸಿದರೆ 2022 ರಲ್ಲಿ ಚೀನಾವು ಆರ್ಸೆನಲ್‌ಗೆ 100 ಹೊಸ ಸಿಡಿತಲೆಗಳನ್ನು (nuclear warhead)
ಸೇರಿಸಲಾಗಿದೆ ಎಂದು ಯುಎಸ್ ರಕ್ಷಣಾ ಇಲಾಖೆ ಇತ್ತೀಚೆಗೆ ಬಹಿರಂಗಪಡಿಸಿದೆ. ಇದರ ಪ್ರಕಾರ ಭಾರತ ಮತ್ತು ಚೀನಾ ಗಡಿಯಲ್ಲಿ 500 ಪರಮಾಣು ಸಿಡಿತಲೆಗಳನ್ನು (nuclear warhead) ಇರಿಸಲಾಗಿದೆ. ಅವುಗಳನ್ನು ಸಾವಿರಕ್ಕೆ ಏರಿಸಲು ಚೀನಾ ಪ್ರಯತ್ನ ನಡೆಸುತ್ತಿದೆ ಎಂದು ಅದು ಹೇಳಿದೆ. ಚೀನಾ ಸೇನೆಗೆ ಸಂಬಂಧಿಸಿದಂತೆ 2022 ರಲ್ಲಿ ನಡೆದ ಪ್ರಮುಖ ವಿಷಯಗಳನ್ನು ಪೆಂಟಗನ್ ತನ್ನ ಇತ್ತೀಚಿನ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಸ್ತುತ ಚೀನಾ ಬಳಿ 500 ಸಿದ್ಧ ಅಣ್ವಸ್ತ್ರ (nuclear warhead) ಸಿಡಿತಲೆಗಳಿವೆ. ಈ ಪರಮಾಣು ಸಿಡಿತಲೆಗಳನ್ನು (nuclear warhead) 2030 ರ ವೇಳೆಗೆ ಸಾವಿರಕ್ಕೆ ಏರಿಸಲು ಯೋಜಿಸುತ್ತಿದೆ ಎಂದು ಚೀನಾ ಬಹಿರಂಗಪಡಿಸಿದೆ. ಪ್ರಸ್ತುತ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯು ಭೂಗತ ಸುರಂಗಗಳಲ್ಲಿ 300 ಖಂಡಾಂತರ ಕ್ಷಿಪಣಿಗಳನ್ನು ಸಿದ್ಧಪಡಿಸಿದೆ. 2022 ರಲ್ಲಿ, ಕ್ಷಿಪಣಿಗಳನ್ನು ಉಡಾಯಿಸಲು ಭೂಗತ ಸುರಂಗಗಳನ್ನು ಚೀನಾದ 3 ಪ್ರದೇಶಗಳಲ್ಲಿ ಸ್ಥಾಪಿಸಲಾಯಿತು. ಇವುಗಳಲ್ಲದೆ, ಸಿಡಿತಲೆಗಳನ್ನು (nuclear warhead) ಉಡಾಯಿಸಬಲ್ಲ ಖಂಡಾಂತರ ಕ್ಷಿಪಣಿ ವ್ಯವಸ್ಥೆಗಳಿಗಾಗಿ ಚೀನಾ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ

ಇದಲ್ಲದೇ ವಿದೇಶದಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಇಂಡೋನೇಷ್ಯಾ, ಯುಎಇ, ಬರ್ಮಾ, ಥೈಲ್ಯಾಂಡ್, ಕೀನ್ಯಾ, ನೈಜೀರಿಯಾ, ಬಾಂಗ್ಲಾದೇಶ, ನಮೀಬಿಯಾ, ಮೊಜಾಂಬಿಕ್, ಪಪುವಾ ನ್ಯೂಗಿನಿಯಾ, ಸಾಲ್ಮನ್ ದ್ವೀಪಗಳು ಮತ್ತು ತಜಕಿಸ್ತಾನದಂತಹ ದೇಶಗಳಲ್ಲಿ ಲಾಜಿಸ್ಟಿಕ್ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ ಎಂದು ಪೆಂಟಗನ್ ವರದಿಯಲ್ಲಿ ವಿವರಿಸಿದೆ. ವರ್ಷದಲ್ಲಿ ಚೀನಾ ತನ್ನ ನೌಕಾಪಡೆಗೆ 30 ಹೊಸ ಯುದ್ಧನೌಕೆಗಳನ್ನು ಸೇರಿಸಿದೆ. ಇದರೊಂದಿಗೆ ಚೀನಾ ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 370 ಯುದ್ಧನೌಕೆಗಳನ್ನು ಹೊಂದಿದೆ ಎಂದು ಪೆಂಟಗನ್ ಸ್ಪಷ್ಟಪಡಿಸಿದೆ.

ಈ ಸಂಖ್ಯೆ 2025 ರ ವೇಳೆಗೆ 395 ಮತ್ತು 2030 ರ ವೇಳೆಗೆ 435 ಕ್ಕೆ ಹೆಚ್ಚಾಗುತ್ತದೆ.  ವಾಸ್ತವಿಕ ಗಡಿರೇಖೆಯಲ್ಲಿ ಚೀನಾ ಬೃಹತ್ ಮೂಲಸೌಕರ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ.  ಭೂಗತ ಸ್ಟೋರೇಜ್‌ಗಳು, ರಸ್ತೆಗಳು, ವಿಮಾನ ನಿಲ್ದಾಣಗಳು ಮತ್ತು ಹೆಲಿಪ್ಯಾಡ್‌ಗಳನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಪೆಂಟಗನ್ ವರದಿ ಹೇಳಿದೆ. ಇವುಗಳ ಜೊತೆಗೆ, ಡೋಕ್ಲಾಮ್‌ನಲ್ಲಿ ಭೂಗತ ಸಂಗ್ರಹಣೆ, ಪ್ಯಾಂಗಾಂಗ್ ಸರೋವರದ ಮೇಲಿನ ಎರಡನೇ ಸೇತುವೆಯ ಜೊತೆಗೆ, ಭೂತಾನ್ ಗಡಿಯಲ್ಲಿನ ವಿವಾದಿತ ಪ್ರದೇಶದ ಬಳಿ ಗ್ರಾಮಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ.

suddionenews

Recent Posts

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

9 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

9 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

9 hours ago

ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದಲ್ಲಿ ಎಫ್.ಐ.ಆರ್ ದಾಖಲಿಸಿ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು  ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್‌ಐಆರ್…

9 hours ago

ವಾಹನ ಚಾಲನೆ ವೇಳೆ ತಾಳ್ಮೆ ಅಗತ್ಯ : ಮಹಾಂತೇಶ್

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು…

9 hours ago

ಮಹೇಶ್ ಮೋಟಾರ್ಸ್ ನಲ್ಲಿ ಹೊಸ ಹೀರೋ ಡೆಸ್ಟಿನಿ 125 ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಯಾದ ಹೀರೊ ಮೋಟೋಕಾರ್ಪ್ ನ ಹೊಸ ಮಾದರಿಯ ದ್ವಿಚಕ್ರ…

10 hours ago