Chinabirthrate : ಸತತ ಐದನೇ ವರ್ಷವೂ ಕುಸಿದ ಜನನ ಪ್ರಮಾಣ..!

ಚೀನಾದಲ್ಲಿ ಮಕ್ಕಳದ್ದೇ ಚಿಂತೆ ಎಂಬಂತ ಪರಿಸ್ಥಿತಿ ಶುರುವಾಗಿದೆ. ಮಕ್ಕಳದ್ದೇ ಚಿಂತೆ ಅಂದ್ರೆ ತುಂಟಾಟ, ಜಗಳದ ಬಗ್ಗೆ ಥಿಂಕ್ ಮಾಡ್ಬೇಡಿ ಬದಲಿಗೆ ಚೀನಾದಲ್ಲಿ ಮಕ್ಕಳ ಹುಟ್ಟುವಿಕೆ ಬಗ್ಗೆಯೇ ಅಲ್ಲಿನ ಸರ್ಕಾರಕ್ಕೆ ಚಿಂತೆ ಕಾಡೋದಕ್ಕೆ ಶುರುವಾಗಿದೆ.

ಹೌದು, ಕಳೆದ ಐದು ವರ್ಷಗಳಿಂದ ಚೀನಾದಲ್ಲಿ ಜನನ ಪ್ರಮಾಣ ಸಂಖ್ಯೆ ಗಣನೀಯವಾಗಿ‌ ಕುಸಿಯುತ್ತಿರುವ ವರದಿಯಾಗಿದೆ. 2021ರಲ್ಲಿ ಕೇವಲ 4.80 ಲಕ್ಷ ಜನನವಾಗಿದೆ. ಈ ಮೂಲಕ 141.26 ಕೋಟಿ ಒಟ್ಟು ಜನಸಂಖ್ಯೆ ಲೆಕ್ಕವಾಗಿದೆ.

ಇದು ದೇಶದ ಆರ್ಥಿಕತೆ ಮೇಲೆ ಸಾಕಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿನ ಸರ್ಕಾರ ಕೂಡ ಜನಸಂಖ್ಯೆ ಹೆಚ್ಚಳ ಮಾಡೋದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಸಿದೆ. ಹೀಗಾಗಿ ಅಲ್ಲಿನ ಜನರಿಗೆ ಮಕ್ಕಳಿಗೆ ಜನ್ಮ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ‌. ಒಂದು ಕುಟುಂಬ 3 ಮಕ್ಕಳನ್ನು ಹೊಂದುವಂತೆ ಪ್ರೇರಪಣೆ ಮಾಡಲಾಗಿದೆ. ಅದಕ್ಕಾಗಿಯೆ ಜನರಿಗೆ ಸೌಲಭ್ಯ ಹೆಚ್ಚಿಸಲು ಗಮನ ಹರಿಸಲಾಗಿದೆ. ಪೋಷಕರ ರಜೆ, ಹೆರಿಗೆ ರಜೆ, ಮದುವೆ ರಜೆ ಸೇರಿದಂತೆ ಹಲವು ಸೌಲಭ್ಯ ಹೆಚ್ವಿಸಲು ಚಿಂತನೆ ನಡೆಸಿದೆ.

Share This Article
Leave a Comment

Leave a Reply

Your email address will not be published. Required fields are marked *