Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಕ್ಕಳ ಪಠ್ಯ ಪುಸ್ತಕ ಬದಲಾವಣೆಯಾಗುತ್ತಾ..? : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

Facebook
Twitter
Telegram
WhatsApp

ಬೆಂಗಳೂರು: ಕಳೆದ ವರ್ಷ ಪಠ್ಯ ಪುಸ್ತಕದ ವಿಚಾರವಾಗಿ ಸಾಕಷ್ಟು ಪರ ವಿರೋಧದ ಅಲೆ ಎದ್ದಿತ್ತು. ಜೊತೆಗೆ ಶಾಲೆ ಆರಂಭವಾದ ಮೂರ್ನಾಲ್ಕು ತಿಂಗಳಾದರೂ ಪಠ್ಯ ಪುಸ್ತಕ ಸರಿಯಾದ ಪ್ರಮಾಣದಲ್ಲಿ ಮಕ್ಕಳ ಕೈ ಸೇರಿರಲಿಲ್ಲ. ಈ ಬಾರಿಯ ಪಠ್ಯ ಪುಸ್ತಕದಲ್ಲಿ ಏನಾದರೂ ಬದಲಾವಣೆಯಾಗುತ್ತಾ ಎಂದು ಎಲ್ಲರೂ ಕಾಯುತ್ತಾ ಇದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಮಾತನಾಡಿದ್ದು, ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಬರಹ, ಸಾಹಿತಿಗಳು ಹಾಗೂ ನಾನಾ ಸಂಘಟನೆಗಳ ಮುಖ್ಯಸ್ಥರ ಜೊತೆಗೆ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.

ಭಯದ ವಾತಾವರಣ ಅಳಿಸಿ ನೆಮ್ಮದಿಯ ವಾತಾವರಣ ಸೃಷ್ಟಿಸಲಾಗುವುದು. ಕನ್ನಡ ನಾಡಿನ ಸೌಹಾರ್ದ ಮತ್ತು ಜಾತ್ಯಾತೀತ ಪರಂಪರೆಯ ರಜ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಚರ್ಚಿಸಿ‌ಕ್ರಮ ಕೈಗೊಳ್ಳಲಾಗುವುದು.

ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಚರ್ಚಿಸಿ ನಿಷ್ಠುರ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಾಹಿತಿ, ಬರಹಗಾರ, ಕನ್ನಡ ಹೋರಾಟಗಾರರು, ದಲಿತ ಚಳವಳಿಗಳ ಹೋರಾಟಗಾರರು, ರೈತ-ಕಾರ್ಮಿಕರ ಮೇಲೆ ಹಾಕಿದ್ದ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು. ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೃತ ನೇಹಾ ಮನೆಗೆ ಮುಸ್ಲಿಂ ಮುಖಂಡರ ಭೇಟಿ : ನಿರಂಜನ ದೇಶಪಾಂಡೆಗೆ ಸಾಂತ್ವನ

ಹುಬ್ಬಳ್ಳಿ: ನೇಹಾ ಎಂಬ ಎಂಸಿಎ ವಿದ್ಯಾರ್ಥಿನಿಯನ್ನು ಫಯಾಜ್ ನಿನ್ನೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯನ್ನು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೋರಾಟಗಳು ಕೂಡ ನಡೆದಿವೆ. ಇದೀಗ ಮುಸ್ಲಿಂ ಮುಖಂಡರು

ಚಿತ್ರದುರ್ಗ-ಹೊಳಲ್ಕೆರೆ ಹೆದ್ದಾರಿಯಲ್ಲಿ ಅಪಘಾತ | ಓರ್ವ ಮೃತ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 20 : ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮಂಜುನಾಥ (36) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಹೊಳಲ್ಕೆರೆ ಹೆದ್ದಾರಿಯ ಕಣಿವೆ ಬಳಿ ಶನಿವಾರ ಸಂಜೆ ನಡೆದಿದೆ. ಬೆಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ

ಈ ವರ್ಷ ಒಳ್ಳೆಯದ್ದಕ್ಕಿಂತ ಕೆಟ್ಟದೇ ಹೆಚ್ಚು : ಭವಿಷ್ಯ ನುಡಿದ ವಿಜಯಪುರ ಬಸವೇಶ್ವರ ಕಾರ್ಣಿಕಾ

ವಿಜಯಪುರ: ಕಾರ್ಣಿಕಾ ನುಡಿಯನ್ನು ರಾಜ್ಯದ ಜನತೆ ಹೆಚ್ಚಾಗಿ ನಂಬುತ್ತಾರೆ. ಇದೀಗ ವಿಜಯಪುರದ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಶೂನ್ಯ ಶಂಕರಲಿಂಗ ದಿಂಡವಾರ ಶರಣರು ಮಳೆ ಬೆಳೆ ಬಗ್ಗೆ ಕಾರ್ಣಿಕಾ ನುಡಿದಿದ್ದಾರೆ‌. ಜಾತ್ರೆಯಿದ್ದ ಹಿನ್ನೆಲೆ ಪುರಾಣ ಮುಕ್ತಾಯ,

error: Content is protected !!