ಮಕ್ಕಳು ವೈಜ್ಞಾನಿಕ ಮನೋಭಾವನೆ ಮತ್ತು ತಾರ್ಕಿಕ ಚಿಂತನೆ ಬೆಳೆಸಿಕೊಳ್ಳಬೇಕು : ಬಿ.ವಿಜಯ್ ಕುಮಾರ್

1 Min Read

ಚಿತ್ರದುರ್ಗ, (ನ.30) : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ  2022-23ನೇ ಸಾಲಿನ ‘ವಿಜ್ಞಾನ ವಸ್ತು ಪ್ರದರ್ಶನವನ್ನು’ ಏರ್ಪಡಿಸಲಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್ ಕುಮಾರ್  ಮಾತನಾಡುತ್ತಾ ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ವೈಜ್ಞಾನಿಕ ಮನೋಭಾವನೆ, ತಾರ್ಕಿಕ ಚಿಂತನೆ ಬೆಳೆಯುವಲ್ಲಿ ಸಹಕಾರಿಯಾಗಲಿದೆ, ಎಂದರು.

ವೈಜ್ಞಾನಿಕ  ಚಿಂತನೆ ಕೇವಲ ಶಿಕ್ಷಣಕಷ್ಟೇ ಸೀಮಿತವಾಗದೆ, ಮಕ್ಕಳು ರೂಢಿಸಿಕೊಳ್ಳುವುದು ಅತ್ಯವಶ್ಯಕ. ಎಂದು ಮನೋಹರ್ ನಿವೃತ್ತ ಶಿಕ್ಷಕರು ತೀರ್ಪುಗಾರರಾಗಿ ಆಗಮಿಸಿ ಮಾತನಾಡುತ್ತಾ ಹೇಳಿದರು. ಅಲ್ಲದೇ ಮಕ್ಕಳು ತಮ್ಮ ಯೋಚನಾ ಶಕ್ತಿಯನ್ನು ಬಳಸಿ ವಿಜ್ಞಾನ ಮಾದರಿಗಳನ್ನು ತಯಾರಿಸಬೇಕು.  ಮಾರುಕಟ್ಟೆಯಲ್ಲಿ ದೊರೆಯುವ ರೆಡಿ ವಸ್ತುಗಳನ್ನು ತಂದು ತಯಾರಿಸುವುದರಿಂದ ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ   ಪ್ರಗತಿಯಾಗುವುದಿಲ್ಲ ಎಂದರು.

ಮತ್ತೋರ್ವ ಕಾರ್ಯಕ್ರಮದ ತೀರ್ಪುಗಾರರಾಗಿ ಆಗಮಿಸಿದ ವೀರಭದ್ರಯ್ಯ ಶಿಕ್ಷಕರು  ಮಾತನಾಡುತ್ತಾ ವಿಜ್ಞಾನ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ವೈಜ್ಞಾನಿಕ   ಮನೋಭಾವನೆ  ಹಾಗೂ ವೈಜ್ಞಾನಿಕ ಚಿಂತನೆಗಳು ಬೆಳೆಯುವಲ್ಲಿ ಇಂತಹ ಕಾರ್ಯಕ್ರಮಗಳು  ಸಹಕಾರಿಯಾಗುತ್ತವೆ ಎಂದರು.

6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ  ಸಾರಿಗೆ ಮತ್ತು ಸಂವಹನ, ತ್ಯಾಜ್ಯ ವಸ್ತುಗಳ ಸದ್ಭಳಕೆ, ಮಳೆ ಕೊಯ್ಲು, ಆಹಾರ ಸಂರಕ್ಷಣೆ ಮತ್ತು ಭದ್ರತೆ,  ಗಣಿತದ ಮಾದರಿ ರಚನೆ, ಪರ್ಯಾಯ ಸಂಪನ್ಮೂಲಗಳ ನಿರ್ವಹಣೆ, ನೀರಿನ ಸರಿಯಾದ ನಿರ್ವಹಣೆ ಮತ್ತು ಆರೋಗ್ಯ ಮತ್ತು ಸಧೃಡತೆ ಈ ವಿಷಯಗಳ ಅಡಿಯಲ್ಲಿ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಮಾದರಿಗಳೊಂದಿಗೆ ಭಾಗವಹಿಸಿ ಪ್ರದರ್ಶಿಸಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಗುರುಪ್ರಕಾಶ್ ನಿವೃತ್ತ ಶಿಕ್ಷಕರು, ತೀರ್ಪುಗಾರರಾಗಿದ್ದರು, ಸಂಸ್ಥೆಯ ನಿರ್ದೇಶಕರಾದ ಪೃಥ್ವೀಶ್ ಎಸ್.ಎಂ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ|| ಕೆ.ಎನ್. ಸ್ವಾಮಿ ಮತ್ತು ಮುಖ್ಯೋಪಾಧ್ಯಾಯರಾದ ಶ್ರೀ ಸಿ ಡಿ ಸಂಪತ್ ಕುಮಾರ್  ಹಾಗೂ ಸಂಸ್ಥೆಯ ಬೋಧಕ / ಬೋಧಕೇತರ ವರ್ಗದವರು ಹಾಗೂ  ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತೃಷಾ 8ನೇ ತರಗತಿ ವಿದ್ಯಾರ್ಥಿನಿ ಪ್ರಾರ್ಥಿಸಿದರು.  ಫಾರ್ಹಾ ಹಶ್ಮಿ ನಿರೂಪಿಸಿದರು, ಮೇಘನಾ.ಡಿ.ವಿ ಸ್ವಾಗತಿಸಿದರು, ಭುವನ  ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *