ಬೆಂಗಳೂರು: ಸಂಜೆ ವೇಳೆಗೆ ರಾಜಧಾನಿಯಲ್ಲಿ ಮಳೆಯೂ ಜೋರಾಗಿ ಬಂದಿದೆ. ಇದ್ದಕ್ಕಿದ್ದಂತೆ ಸುರಿದ ಬಾರಿ ಮಳೆಗೆ ವಾಹನ ಸವಾರರಿಗೆ ಕೊಂಚ ಸಮಸ್ಯೆಯಾಗಿದೆ. ಸ್ವಲ್ಪ ಸಮಯದಲ್ಲಿಯೇ ಜೋರು ಮಳೆ ಕಡಿಮೆಯಾಗಿದೆ. ಹವಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇಮ್ಮು ಎರಡು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗಲಿದೆ ಎನ್ನಲಾಗಿದೆ.
ಇಂದು ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲದೆ ನೆಲಮಂಗಲದ ಅಕ್ಕ ಪಕ್ಕದಲ್ಲೂ ಮಳೆಯಾಗಿದೆ. ಇನ್ನು ಸಿಟಿಯಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಹಲವೆಡೆ ಮಳೆಯಿಂದಾಗಿ ಮರಗಿಡಗಳು ಉರುಳಿದೆ. ಇದರಿಂದ ಹಲವರಿಗೆ ತೊಂದರೆಯಾಗಿದೆ. ಇನ್ನು ವಾಹನಗಳ ಮೇಲು ಮರದ ಕೊಂಬೆಗಳು ಬಿದ್ದು ಜಖಂ ಆಗಿವೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಇನ್ನು ಎರಡು ದಿನ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಬಿರು ಬೇಸಿಗೆಯ ನಡುವೆಯೂ ಮಳೆಗಾಲ ಆರಂಭವಾಗಿದ್ದು, ಅಲ್ಲಲ್ಲಿ ಮಳೆಯಾಗುತ್ತಿದ್ದು, ರೈತರು ಬೆಳೆ ಬೆಳಯಲು ತಯಾರಿ ನಡೆಸುತ್ತಿದ್ದಾರೆ. ಮಳೆ ಇನ್ನು ಮುಂದುವರೆಯುವ ಕಾರಣ ಹೊರ ಹೋಗುವವರು ಮುನ್ನೆಚ್ಚರಿಕೆವಹಿಸಬೇಕಾಗಿದೆ.





GIPHY App Key not set. Please check settings