ಚಾಂಪಿಯನ್ ಟ್ರೋಫಿ-2025 : ಪಾಕಿಸ್ತಾನಕ್ಕೆ ಹೋಗ್ತಾರಾ ಇಲ್ವಾ ನಮ್ಮ ಟೀಂ ಇಂಡಿಯಾ ಆಟಗಾರರು..? ಇಲ್ಲಿದೆ ಮಾಹಿತಿ…!

 

ಚಾಂಪಿಯನ್ಸ್ 2025 ಟ್ರೋಫಿಯನ್ನು ಪಾಕಿಸ್ತಾನ ಆಯೋಜನೆ ಮಾಡಲಾಗಿದೆ. ಈ ಟೂರ್ನಿಯನ್ನು ಪಾಕಿಸ್ತಾನದಲ್ಲಿಯೇ ಆಯೋಜನೆ ಮಾಡಿದ್ದು, ಭಾರತೀಯ ತಂಡ ಪಾಕಿಸ್ತಾನಕ್ಕೆ ಹೋಗುತ್ತಾರಾ ಇಲ್ವಾ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಆದರೆ ವರದಿಯ ಪ್ರಕಾರ ಟೀಂ ಇಂಡಿಯಾ, ಪಾಕಿಸ್ತಾನಕ್ಕೆ ಹೋಗುತ್ತಿಲ್ಲ ಎನ್ನಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಈ ಬಗ್ಗೆ ಐಸಿಸಿ ಜೊತೆಗೆ ಚರ್ಚೆ ಮಾಡಲಿದೆ‌. ಟೀಂ ಇಂಡಿಯಾದ ಮ್ಯಾಚ್ ಗಳು ದುಬೈ ಅಥವಾ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಇದೆ. ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಭಾರತೀಯ ಆಟಗಾರರು ಪಾಕಿಸ್ತಾನಕ್ಕೆ ಹೋಗುವುದಕ್ಕೆ ಸಿದ್ದರಿಲ್ಲ ಎಂದು ವರದಿಯಾಗಿದೆ. ಆದರೂ ಈ ಬಗ್ಗೆ ಇನ್ನು ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಕಳೆದ ವರ್ಷ ಏಕದಿನ ವಿಶ್ವಕಪ್ ಪಂದ್ಯಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಬಂದಿತ್ತು. ಹೀಗಾಗಿ ಭಾರತವೂ ಪಾಕಿಸ್ತಾನಕ್ಕೆ ಬರಬೇಕು ಎಂಬ ಮಾತುಗಳು ಚರ್ಚೆಯಲ್ಲಿವೆ. ಇದರ ನಡುವೆ ಪಾಕಿಸ್ತಾನ ಇತ್ತಿಚೆಗೆ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿಯನ್ನು ಐಸಿಸಿಗೆ ತಿಳಿಸಿತ್ತು. ಲಾಹೋರ್ ನಲ್ಲಿಯೇ ಪಂದ್ಯವನ್ನು ಆಯೋಜಿಸುವುದಕ್ಕೆ ಮುಂದಾಗಿತ್ತು. ಆ ಪಂದ್ಯ ಮಾರ್ಚ್ ನಲ್ಲೇ ನಡೆಯಬೇಕಿತ್ತು. ಆದರೆ ಭಾರತ ತಂಡ ಹೋಗದೆ ಇದ್ದ ಕಾರಣ ಪಂದ್ಯ ನಡೆಯಲಿಲ್ಲ.

ಈಗ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ಮೈದಾನದ ದುರಸ್ತಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಹಲವು ಟೀಂಗಳು ಈ ಚಾಂಪಿಯನ್ಸ್ ನಲ್ಲಿ ಸೆಣೆಸಾಡಲಿವೆ. ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಎ ಗುಂಪಿನಲ್ಲಿವೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಹೋಗಿ ಆಡುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಸದ್ಯದ ವರದಿಯ ಪ್ರಕಾರ ಅದು ಅಸಾಧ್ಯ ಎನ್ನಲಾಗಿದೆ.

suddionenews

Recent Posts

ಚಿತ್ರದುರ್ಗ | ಫೆಬ್ರವರಿ 22 ಮತ್ತು 23 ರಂದು ಸರಿಗಮ ಸಂಗೀತ ನಾಟಕೋತ್ಸವ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 19…

23 minutes ago

ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಭಾರತ ಸರ್ಕಾರ

ಸುದ್ದಿಒನ್ ಗೂಗಲ್ ಕ್ರೋಮ್ ಬಳಕೆದಾರರು ಮೊದಲ ಬಾರಿಗೆ ಪ್ರಮುಖ ಭದ್ರತಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಭಾರತ ಸರ್ಕಾರ ಎಚ್ಚರಿಸಿದೆ. ವಿಂಡೋಸ್…

30 minutes ago

ಶೀಘ್ರದಲ್ಲೇ ಚಿನ್ನದ ಬೆಲೆ 1 ಲಕ್ಷ ರೂಪಾಯಿ…?

ಸುದ್ದಿಒನ್ : ಗಗನಕ್ಕೇರುತ್ತಿರುವ ಬಂಗಾರದ ಬೆಲೆ ಏರಿಕೆ ನಿಲ್ಲುತ್ತಿಲ್ಲ. ಊಹೆಗೆ ನಿಲುಕದ ರೀತಿಯಲ್ಲಿ ನಿರೀಕ್ಷೆಗಿಂತ ವೇಗವಾಗಿ ಬೆಲೆ ಏರುತ್ತಿದೆ. ಚಿನ್ನದ…

5 hours ago

ಚಿತ್ರದುರ್ಗ | ಪಿಯು ಕಾಲೇಜಿಗೆ ಉಪನ್ಯಾಸಕರು ಬೇಕಾಗಿದ್ದಾರೆ…!

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 18 : ಜಿಲ್ಲೆಯ ಪ್ರತಿಷ್ಠಿತ ಸುನಂದಾ ವಿದ್ಯಾಸಂಸ್ಥೆಯ ಜ್ಞಾನ ಪೂರ್ಣ ಪಿಯು ಕಾಲೇಜಿಗೆ ಉಪನ್ಯಾಸಕರು ಬೇಕಾಗಿದ್ದಾರೆ.…

5 hours ago

ಪ್ರತಿದಿನ ಒಂದು ಲವಂಗ ತಿಂದರೆ ಎಷ್ಟೊಂದು ಪ್ರಯೋಜನ ಗೊತ್ತಾ ?

  ಸುದ್ದಿಒನ್ ಆಯುರ್ವೇದವು ಪ್ರತಿದಿನ ಒಂದು ಲವಂಗವನ್ನು ಬಾಯಿಯಲ್ಲಿ ಹಾಕಿಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳುತ್ತದೆ. ಇವುಗಳನ್ನು ನಮ್ಮ ದೈನಂದಿನ…

5 hours ago

ಕಲ್ಲಂಗಡಿ ಹಣ್ಣಿನ ಸಮಯ ಬಂತು ಬೀಜಗಳನ್ನು ಶೇಖರಿಸಿ

ಬೇಸಿಗೆ ಕಾಲ ಈಗಾಗಲೇ ಶುರುವಾಗಿದೆ. ಶಿವರಾತ್ರಿ ಬಂದು ಚಳಿ ಶಿವ ಶಿವ ಅಂತ ಹೋಗುತ್ತೆ. ಆಮೇಲೆ ಬೇಸಿಗೆ ಕಾಲ ಶುರುವಾಗುವುದು…

6 hours ago