
ಚಾಮರಾಜನಗರ: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಸ್ವಾಮೀಜಿ ಇದೀಗ ಶವವಾಗಿ ಪತ್ತೆಯಾವಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಪಿ ಜಿ ಪಾಳ್ಯದಲ್ಲಿ ನಡೆದಿದೆ. 70 ವರ್ಷದ ರಾಜಶೇಖರ ಬುದ್ಧಿ ಸ್ವಾಮೀಜಿ ಹೀಗೆ ಶವವಾಗಿ ಪತ್ತೆಯಾಗಿದ್ದಾರೆ.

ರಾಜಶೇಖರ ಬುದ್ಧಿ ಸ್ವಾಮೀಜಿಗೆ ಮರೆವಿನ ಕಾಯಿಲೆ ಇತ್ತು ಎಂದು ಹೇಳಲಾಗುತ್ತಿದೆ. ಮೂರು ದಿನಗಳ ಹಿಂದೆ ಸುತ್ತೂರು ಜಾತ್ರೆಗೆ ಹೋಗಿ ಬರುವುದಾಗಿ ತಿಳಿಸಿದ್ದರು. ಆದ್ರೆ ಎಷ್ಟು ಸಮಯವಾದರೂ ಸ್ವಾಮೀಜಿ ಮರಳಿ ಬಂದಿರಲಿಲ್ಲ. ಬಳಿಕ ಅವರ ಹುಡುಕಾಟ ಶುರುವಾಗಿತ್ತು.
ಆದ್ರೆ ಇಂದು ಸ್ವಾಮೀಜಿಯ ಶವ ಸತ್ತೇಗಾಲದಲ್ಲಿ ಹರಿಯುವ ನದಿಯಲ್ಲಿ ಪತ್ತೆಯಾಗಿದೆ. ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಸತ್ಯಾಸತ್ಯತೆ ಹೊರಗೆ ಬರುವ ಸಾಧ್ಯತೆ ಇದೆ.
GIPHY App Key not set. Please check settings