ಚಳ್ಳಕೆರೆ : ಗ್ಯಾಸ್ ಸೋರಿಕೆ ಗೃಹಪಯೋಗಿ ವಸ್ತುಗಳು ಸುಟ್ಟು ಭಸ್ಮ

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 27 : ಸಿಲೆಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿ ಉರಿದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟಿರುವ ಘಟನೆ ಇಂದು ನಡೆದಿದೆ.

ನಗರದ ಗಾಂಧಿನಗರದ ಮಹಮದ್ ರಫಿ ಎನ್ನುವವರ ಮನೆಯಲ್ಲಿ ಈ ಘಟನೆ ನಡೆದಿದ್ದು ಮನೆಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಬೀರುವಿನಲ್ಲಿದ್ದ ಬಟ್ಟೆಗಳು ಹಾಗೂ ಗೃಹ ಉಪಯೋಗಿ ವಸ್ತುಗಳು ಸುಟ್ಟಿದ್ದು ಸಲ್ಮ ಬಾನು ಎನ್ನುವ ಮಹಿಳೆಗೆ ಸ್ವಲ್ಪಮಟ್ಟಿನ ಗಾಯಗಳಾಗಿದ್ದು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಆಗಮಿಸಿ ಮನೆಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಹರ ಸಹಾಸ ಮಾಡಲಾಯಿತು . ಈ ವೇಳೆ ಸಾರ್ವಜನಿಕರು ಸಹ ಈ ಕಾರ್ಯದಲ್ಲಿ ಭಾಗಿಯಾದರು. ಅಗ್ನಿಶಾಮಕ ದಳದ ಸಿಬ್ಬಂದಿ ಸರಿಯಾದ ಸಮಯಕ್ಕೆ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು ಮನೆಯಲ್ಲಿದ್ದಂತಹ ಗೃಹಪಯೋಗಿ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿವೆ.

suddionenews

Recent Posts

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಅಷ್ಟೊಂದು ಅಪಾಯಕಾರಿಯೇ ?

ಸುದ್ದಿಒನ್ : ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇದು ಒಳ್ಳೆಯದಾ ? ಅಥವಾ ಕೆಟ್ಟದಾ…

6 hours ago

ಈ ರಾಶಿಯವರು ಹೋಟೆಲ್ ಪ್ರಾರಂಭ ಮಾಡಿ ಶುಭದಾಯಕ

ಈ ರಾಶಿಯವರು ಹೋಟೆಲ್ ಪ್ರಾರಂಭ ಮಾಡಿ ಶುಭದಾಯಕ, ಈ ರಾಶಿಯವರಿಗೆ ಆಸ್ತಿ ಮಾರಾಟ ವಿಳಂಬ ಇದರಿಂದ ತುಂಬಾ ಬೇಸರ, ಗುರುವಾರದ…

7 hours ago

ಘಿಬ್ಲಿ ಫೋಟೋಗೆ ನೀವೂ ಮಾರು ಹೋಗಿದ್ದೀರಾ..? ಇದು ಎಷ್ಟು ಡೇಂಜರ್ ಗೊತ್ತಾ..? ಸೈಬರ್ Expert ಹೇಳೋದೇನು..?

  ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ಟ್ರೆಂಡ್ ಕ್ರಿಯೇಟ್ ಆಗ್ತಾ ಇರುತ್ತವೆ. ಆ ಟ್ರೆಂಡ್ ಬಿರುಗಾಳಿ ಬೀಸಿದಂತೆ ಹಬ್ಬಿ ಬಿಡುತ್ತದೆ.…

18 hours ago

ಚಳ್ಳಕೆರೆ : ಜಮೀನು ವಿಚಾರ ಗಲಾಟೆ : ಇಬ್ಬರ ಮೇಲೆ ಹಲ್ಲೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 02…

18 hours ago

ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

ಚಿತ್ರದುರ್ಗ. ಏ.02: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು "ಶೂನ್ಯ"ಗೊಳಿಸಲು ವಿಶೇಷ ಮುತುವರ್ಜಿಯಿಂದ  ಪೊಲೀಸ್   ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ, ಮಾರ್ಗದರ್ಶನ ನೀಡುವ ಮೂಲಕ ಎಲ್ಲ…

19 hours ago

ಉಚಿತ ಷಟಲ್ ಬ್ಯಾಡ್ಮಿಂಟನ್ ತರಬೇತಿ : ಯಾರಿಗೆಲ್ಲಾ ಈ ಅವಕಾಶ ಇದೆ ? ಇಲ್ಲಿದೆ ಮಾಹಿತಿ…!

ಚಿತ್ರದುರ್ಗ. ಎಪ್ರಿಲ್.02 : ಖೇಲೋ ಇಂಡಿಯಾ ಯೋಜನೆಯಡಿ ಚಿತ್ರದುರ್ಗ ನಗರದ ಬಾಲಕ ಮತ್ತು ಬಾಲಕಿಯರಿಗೆ ಉಚಿತ ಷಟಲ್ ಬ್ಯಾಡ್ಮಿಂಟನ್ ತರಬೇತಿ…

19 hours ago