ರೈತರಿಗೆ ಬಂಪರ್ ಆಫರ್ ನೀಡಿದ ಕೇಂದ್ರ ಸರ್ಕಾರ ; ಏನದು..?

ರೈತರಿಗೆ ಯುಗಾದಿ ಹಬ್ಬದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡರದ ಸಚಿವ ಸಂಪುಟ ಸಭೆಯಲ್ಲಿ ರಸಗೊಬ್ಬರದ ಮೇಲೆ ಪೋಷಾಕಾಂಶ ಆಧಾರಿತ ಸಬ್ಸಿಡಿ‌ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ ಫಾಸ್ಫೆಟಿಕ್ ಮತ್ತು ಪೊಟ್ಯಾಸಿಯಮ್‌ ರಸಗೊಬ್ಬರಗಳ ಮೇಲೆ ಖಾರಿಫ್ -2025 ಇಂದಿನಿಂದ ಅಂದರೆ 1-4-2025 ರಿಂದ ಐದು ತಿಂಗಳ ಕಾಲ ಅಂದರೆ 30-9-2025ರ ತನಕ ಪೋಷಕಾಂಶ ಆಧಾರಿತ ಸಬ್ಸಿಡಿ ದರಗಳಿಗೆ ಅನುಮೋದನೆ ನೀಡಿದೆ‌.

2025ರ ಖಾರಿಫ್ ಋತುವಿಗೆ ಪಿ ಮತ್ತು ಕೆ ರಸಗೊಬ್ಬರಗಳ ಮೇಲೆ ಪೋಷಾಕಾಂಶ ಆಧಾರಿತ ಸಬ್ಸಿಡಿ ದರಗಳನ್ನು ನಿಗದಿಪಡಿಸಲು ರಸಗೊಬ್ಬರ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿತ್ತು. ಇದಕ್ಕೆ ಒಪ್ಪಿಗೆ ನೀಡಲಾಗಿದೆ.2024ರ ಖಾರಿಫ್ ಋತುವಿಗೆ ಬಜೆಟ್ ಅವಶ್ಯಕತೆ ಸುಮಾರು 37,216,15 ಕೋಟಿ ರೂಪಾಯಿ ಇದೆ. 2024-25ರ ರಬಿ ಋತುವಿನ ಬಜೆಟ್ ಅಗತ್ಯಕ್ಕಿಂತ ಅಂದಾಜು 13 ಸಾವುರ ಕೋಟಿ ರೂಪಾಯಿ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ರಸಗೊಬ್ಬರ ಸಬ್ಸಿಡಿ ನೀಡುವುದರಿಂದ ಕಡಿಮೆ ದರದಲ್ಲಿ ಕೈಗೆಟಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರೈತರಿಗೆ ರಸಗೊಬ್ಬರ ಲಭ್ಯವಾಗಲಿದೆ. ರಸಗೊಬ್ಬರದ ಬೆಲೆ ಮತ್ತು ಅಂತರಾಷ್ಟ್ರೀಯ ಬೆಲೆಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳನ್ನು ಗಮನದಲ್ಲಿಟ್ಟುಕೊಂಡು ಪಿ ಮತ್ತು ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ತರ್ಕಬದ್ಧಗೊಳಿಸುತ್ತದೆ. ಸರ್ಕಾರವು ರಸಗೊಬ್ಬರ ತಯಾರಕರು ಅಥವಾ ಆಮದುದಾರರ ಮೂಲಕ ರೈತರುಗೆ ಸಬ್ಸಿಡು ದರದಲ್ಲಿ 28 ದರ್ಜೆಯ ಪಿ ಮತ್ತು ಕೆ ರಸಗೊಬ್ಬರಗಳನ್ನು ಒದಗಿಸುತ್ತಿದೆ. ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ರಸಗೊಬ್ಬರ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

suddionenews

Recent Posts

ಪಿತ್ತ ಬೇಗ ಕಡಿಮೆ ಆಗ್ಬೇಕು ಅಂದ್ರೆ ಹೀಗೆ ಮಾಡಿ

ಸಾಕಷ್ಟು ಜನರಿಗೆ ಪಿತ್ತದ ಸಮಸ್ಯೆ ಇರುತ್ತದೆ.‌ ಪಿತ್ತ ಜಾಸ್ತಿಯಾದಷ್ಟು ಮನುಷ್ಯನಿಗೆ ಕಂಫರ್ಟಬಲ್ ಇರುವುದೇ ಇಲ್ಲ. ಪಿತ್ತ ಹೆಚ್ಚಾದರೆ ತಲೆ ಸುತ್ತು…

45 seconds ago

ಈ ರಾಶಿಯ ಮಠದ ಸಾರಥ್ಯ ಹೊಂದಿದವರಿಗೆ ತೊಂದರೆ

ಈ ರಾಶಿಯ ಮಠದ ಸಾರಥ್ಯ ಹೊಂದಿದವರಿಗೆ ತೊಂದರೆ, ಈ ರಾಶಿಯ ಗಂಡ ಹೆಂಡತಿ ಎಷ್ಟುಚೆನ್ನಾಗಿದ್ದರೆ ಗೊತ್ತು, ಶನಿವಾರದ ರಾಶಿ ಭವಿಷ್ಯ…

1 hour ago

ದೇಶದ ಮೊದಲ ಹಿಂದೂ ಗ್ರಾಮಕ್ಕೆ ಶಂಕುಸ್ಥಾಪನೆ : ಈ ಗ್ರಾಮದ ವಿಶೇಷತೆ ಏನು ಗೊತ್ತಾ ?

  ಸುದ್ದಿಒನ್ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿರುವ ಬಾಗೇಶ್ವರ ಧಾಮ ಪೀಠದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಏಪ್ರಿಲ್ 2 ರಂದು…

9 hours ago

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ; ಕಾರಣವೇನು..?

ಅಣ್ಣಾಮಲೈ ಅಂದ್ರೆನೇ ಅದೆಷ್ಟೋ ಜನ ಗಢಗಢ ಅಂತ ನಡುಗುತ್ತಾ ಇದ್ದರು. ಕರ್ನಾಟಕದ ರಿಯಲ್ ಸಿಂಗಂ ಆಗಿ ಘರ್ಜಿಸಿದ್ದರು. ಆದರೆ ಬಿಜೆಪಿಗೆ…

9 hours ago

ಚಿನ್ನ – ಬೆಳ್ಳಿ ಬೆಲೆ ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಇಳಿಕೆ ; ಕಾರಣವೇನು..? ಅಕ್ಷಯ ತೃತೀಯ ತನಕವೂ ಇಳಿಯಲಿದೆಯಾ..?

  ಚಿನ್ನ ಬೆಳ್ಳಿ ದರ ಏರಿಕೆಯತ್ತಲೇ ಸಾಗುತ್ತಿತ್ತು. ಇಂದು ಮಹಿಳೆಯರ ಚಿನ್ನದ ಕನಸಿಗೆ ಬೇಸರವನ್ನೇ ತಂದಿತ್ತು. ಇದೀಗ ದಿಢೀರನೇ ಚಿನ್ನ…

11 hours ago

ಸೃಜನಶೀಲ ಯುವ ಬರಹಗಾರರಿಗೆ ಆರ್ಥಿಕ ನೆರವು ನೀಡಿ : ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 04…

12 hours ago