ಡಾ.ವೀರೇಂದ್ರ ಹೆಗಡೆ ಸೇರಿದಂತೆ ದಕ್ಷಿಣ ಭಾರತದ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ : ಪ್ರಧಾನಿ ನರೇಂದ್ರ ಮೋದಿ ಘೋಷಣೆ

 

ನವದೆಹಲಿ:  ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಸಭೆಯ ಖಾಲಿ ಸ್ಥಾನಗಳ ಭರ್ತಿ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಿದೆ. ಈ ಕ್ರಮದಲ್ಲಿ ದಕ್ಷಿಣ ಭಾರತದ ನಾಲ್ವರು ಸೆಲೆಬ್ರಿಟಿಗಳನ್ನು ನಾಮಿನೇಟ್ ಮಾಡಿ ಬುಧವಾರ ಅವರ ಹೆಸರನ್ನು ಪ್ರಕಟಿಸಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಇಳಯರಾಜ, ಪಿ.ಟಿ.ಉಷಾ ಮತ್ತು
ವಿಜಯೇಂದ್ರ ಪ್ರಸಾದ್ (ಎಸ್ ಎಸ್ ರಾಜಮೌಳಿ ತಂದೆ) ಅವರನ್ನು ನಾಮನಿರ್ದೇಶನ ಮಾಡಿದೆ. ರಾಷ್ಟ್ರಪತಿ ಕೋಟಾದಲ್ಲಿ ಇವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

 

 

ಅವರ ನಾಮನಿರ್ದೇಶನವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಟ್ವಿಟರ್‌ನಲ್ಲಿ ಪ್ರಕಟಿಸಿ, ಆಯಾ ಕ್ಷೇತ್ರಗಳಲ್ಲಿ ಅವರ ಹಿರಿಮೆಯನ್ನು ವ್ಯಕ್ತಪಡಿಸಿ, ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ಹೆಮ್ಮೆಪಡುತ್ತೇನೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *