ಮೈಸೂರು: ವಿಧಾನಸಭಾ ಚುನಾವಣೆಯ ರಣಕಣ ರಂಗೇರಿದೆ. ಅದರಲ್ಲೂ ಈ ಬಾರಿ ಮೈಸೂರು ಭಾಗದಲ್ಲಿ ಗೆಲುವನ್ನು ಪಡೆಯುವುದಕ್ಕೆ ಮೂರು ಪಕ್ಷಗಳು ಹಪಹಪಿಸುತ್ತಿವೆ. ಅದಕ್ಕಾಗಿಯೇ ಭರ್ಜರಿ ಪ್ರಚಾರ ಕೂಡ ನಡೆಸುತ್ತಿದ್ದಾತೆ. ಇದೇ ರೀತಿ ಪ್ರಚಾರದ ವೇಳೆ ಪ್ರಿಯಾಂಕ ಗಾಂಧಿಯವರ ವಿರುದ್ಧ ದೂರು ದಾಖಲಾಗಿದೆ.
ಲಿಂಗಾಯತರನ್ನು ಬಿಜೆಪಿ ಅವಮಾನಿಸಿದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧಿಸಿದಂತೆ ಮೈಸೂರು ಬಿಜೆಪಿ ಗ್ರಾಮಾಂತರ ನಾಯಕರು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಕೆ ಆರ್ ನಗರದ ಪ್ರಚಾರದ ವೇಳೆ ಈ ರೀತಿಯಾದಂತ ಹೇಳಿಕೆ ನೀಡಿದ್ದರು.
ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. 13ರಂದು ಫಲಿತಾಂಶ ಸಿಗಲಿದೆ. ಸದ್ಯ ರಾಜ್ಯಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.