ಕೊರೊನಾ ರೂಲ್ಸ್ ಬ್ರೇಕ್ ಮಾಡಿದ ಬಿಜೆಪಿ ನಾಯಕರ ವಿರುದ್ಧವೂ ಕೇಸ್ ದಾಖಲಿಸಿ : ಕಾಂಗ್ರೆಸ್ ನಾಯಕರ ಪಟ್ಟು..!

1 Min Read

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ‌ ಕೊರೊನಾ ಕೇಸ್ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಕೊರೊನಾ ಟಫ್ ರೂಲ್ಸ್ ಕೂಡ ಜಾರಿಯಲ್ಲಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರ ಪಾದಯಾತ್ರೆಯನ್ನು ಸ್ಥಗಿತಗೊಳಿಸಬೇಕಾಗಿ ಬಂತು. ಆದ್ರೆ ಕಾಂಗ್ರೆಸ್ ನಾಯಕರು ಸಖತ್ತಾಗಿಯೇ ಫ್ಲ್ಯಾನ್ ಮಾಡಿಕೊಂಡಿದ್ದಾರೆ.

ಬಿಜೆಪಿ ಮಣಿಸಲು ಅವರ ಅಸ್ತ್ರವನ್ನ ಅವರಿಗೆ ಬಿಡಲು ಸಿದ್ದರಾಗಿದ್ದಾರೆ. ಕೊರೊನಾ ರೂಲ್ಸ್ ಅಂತ ಪಾದಯಾತ್ರೆ ಮೊಟುಕೊಳಿಸುವಂತೆ ಮಾಡಿದ ಬಿಜೆಪಿ ಮೇಲೆ ಗರಂ ಆಗಿದ್ದಾರೆ. ಅಷ್ಟೇ ಅಲ್ಲ ನಮ್ಮ ಮೇಲೆ ಕೇಸ್ ಬಿದ್ದಂತೆ ಬಿಜೆಪಿಗರ ಮೇಲೂ ಕೇಸ್ ಹಾಕಲೇಬೇಕೆಂದು ಒತ್ತಡ ಹೇರುತ್ತಿದ್ದಾರೆ.

ಹೌದು, ರಾಜ್ಯದಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡುತ್ತಿರುವವರು ಸಾಮಾನ್ಯ ಜನರಲ್ಲಿ ಹೆಚ್ಚಾಗಿ ರಾಜಕಾರಣಿಗಳು. ಅವರೇ ರೂಲ್ಸ್ ಮಾಡಿ, ಅವರೇ ಮುರಿಯುವುದರಲ್ಲಿ ಮುಂದೆ ಇರ್ತಾರೆ. ಇದು ಜನಸಾಮಾನ್ಯರ ಕೋಪಕ್ಕೂ ಒಂದು ಕಾರಣ. ಆದ್ರೆ ಸಾಮಾನ್ಯರ ಕೋಪದಿಂದ ನೋ ಯೂಸ್ ಅಲ್ವಾ. ಬಡವರ ಕೋಪ ದವಡೆಗೆ ಮೂಲ ಎಂಬ ಗಾದೆ ಮಾತಿನಂತೆ. ಆದ್ರೆ ಇದಕ್ಕೆ ತಿರುಗೇಟು‌ ನೀಡಲು ಕಾಂಗ್ರೆಸ್ ನವರು ಪಣತೊಟ್ಟಿದ್ದಾರೆ.

ಹೇಗೆಂದ್ರೆ ಬಿಜೆಪಿ ನಾಯಕರು ಕೂಡ ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಸಭೆ, ಸಮಾರಂಭ ಅಂತ ಪಾಲ್ಗೊಳ್ತಾ ಇದ್ದಾರೆ. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸಲೇಬೇಕೆಂದು ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ. ಕೊರೊನಾ ನಿಯಮ ಇದ್ರು ಕೆಲವು ಬಿಜೆಪಿ ನಾಯಕರು ಕಾರ್ಯಕ್ರಮ ಮಾಡಿದ್ದಾರೆ. ಆದ್ರೆ ಅವರ ವಿರುದ್ಧ ಕೇಸ್ ದಾಖಲಾಗಿಲ್ಲ. ನಾವೂ ಪಾದಯಾತ್ರೆ ಮಾಡಿದ್ದು ರಾಜ್ಯದ ಜನತೆಯ ಹಿತದೃಷ್ಟಿಯಿಂದ. ಕಾಂಗ್ರೆಸ್ ನಾಯಕರನ್ನ ಮಾತ್ರ ಟಾರ್ಗೆಟ್ ಮಾಡಿ, ನಮ್ಮ ವಿರುದ್ಧ ಕೇಸ್ ದಾಖಲಿಸಿದ್ರಿ. ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕರ ವಿರುದ್ಧ ಕೇಸ್ ದಾಖಲಿಸದೆ ಇದ್ರೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಧರಣಿ ಕೂರ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಕಾಂಗ್ರೆಸ್ ನಾಯಕರು.

Share This Article
Leave a Comment

Leave a Reply

Your email address will not be published. Required fields are marked *