Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ

Facebook
Twitter
Telegram
WhatsApp

ಚಿತ್ರದುರ್ಗ(ಏ.21) :  ಪ್ರತಿ ಕಡತವನ್ನು ಜೀವಂತ ವ್ಯಕ್ತಿಯ ಹಾಗೆ ಭಾವಿಸಿ, ಮಾನವೀಯ ನೆಲೆಗಟ್ಟಿನೊಂದಿಗೆ ಶೀಘ್ರವಾಗಿ ಕಡತ ವಿಲೇವಾರಿ ಮಾಡಿ. ಕಪ್ಪು ಚುಕ್ಕೆ ಬರದ ಹಾಗೆ ಕರ್ತವ್ಯ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ದಾರ್ ವಲ್ಲಭಾಯಿ ಪಟೇಲ್ ಅವರು ನಾಗರಿಕ ಸೇವಾ ವರ್ಗವನ್ನು ಭಾರತದ ಉಕ್ಕಿನ ಚೌಕಟ್ಟು ಎಂದು ಬಣ್ಣಿಸಿದ್ದಾರೆ. ಸರ್ಕಾರಿ ನೌಕರಿ ಲಕ್ಷದಲ್ಲಿ ಒಬ್ಬರಿಗೆ ಲಭಿಸುತ್ತದೆ. ಸಾರ್ವಜನಿಕ ಸೇವೆ ಮಾಡಲು ಇದು ಉತ್ತಮ ಅವಕಾಶವಾಗಿದೆ. ಕಚೇರಿಗಳಲ್ಲಿ 10 ಕಡತಗಳಲ್ಲಿ ಎರೆಡು‌ ಕಷ್ಟದ ಕಡತಗಳು ನಿಮ್ಮೆದುರು ಬರಬಹುದು.

ಮೊದಲಿಗೆ ಸರಳವಾಗಿ‌ ಇರುವ ಕಡತಗಳನ್ನು ಬಗೆಹರಿಸಿ. ಇದರಿಂದ ಕಾರ್ಯ ಒತ್ತಡ ಕಡಿಮೆಯಾಗುತ್ತದೆ. ನಂತರ ಕಷ್ಟದ ಕಡತಗಳನ್ನು ನಿರ್ವಹಿಸುವ ಆತ್ಮವಿಶ್ವಾಸವು ನಿಮ್ಮ‌ಲ್ಲಿ ಮೂಡಿ ಬರುವುದು. ಅನಗತ್ಯವಾಗಿ ಸಾರ್ವಜನಿಕರಿಗೆ ತೊಂದರೆ ನೀಡಿ ಕಚೇರಿಗೆ ಅಲೆದಾಡಿಸಬೇಡಿ. ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತೆ ಕರ್ತವ್ಯ ನಿರ್ವಹಿಸಿ ಎಂದು ತಿಳಿಸಿದರು.

ಜಿ.ಪಂ.ಸಿಇಓ ಡಾ.ಕೆ.ನಂದಿನಿದೇವಿ ಮಾತನಾಡಿ, ಸರ್ಕಾರಿ ನೌಕರರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಕಚೇರಿ ಜೊತೆಗೆ ಕುಟುಂಬದೊಂದಿಗೆ ಸಮಯ ಕಳೆಯಿರಿ. ವ್ಯಾಯಾಮ, ಕ್ರೀಡಾಕೂಟ ಹಾಗೂ ಮನರಂಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ. ಇದರಿಂದ ಕರ್ತವ್ಯ ಒತ್ತಡದ ನಡುವೆ ಬಿಡುವು ದೊರೆತು, ಪುನಃ ಉಲ್ಲಾಸದಿಂದ ಕೆಲಸದಲ್ಲಿ ತೊಡಗಲು ಸಹಾಯಕವಾಗುತ್ತದೆ. ಸರ್ವೋತ್ತಮ ಪ್ರಶಸ್ತಿಗೆ ನೌಕಕರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದರು.

ಜಿಲ್ಲಾ ರಕ್ಷಣಾಧಿಕಾರಿ ಕೆ.ಪರಶುರಾಮ ಮಾತನಾಡಿ ಸರ್ಕಾರದಲ್ಲಿ ಕಾರ್ಯಾಂಗ ಬಹಳ ಮುಖ್ಯ ಅಂಗವಾಗಿದೆ, ಶಾಸಕಾಂಗ ರೂಪಿಸುವ ಯೋಜನೆಗಳನ್ನು ಕಾರ್ಯಾಂಗ ಸರ್ವಾಜನಿಕರಿಗೆ ತಲುಪಿಸುತ್ತದೆ. ಇಂದು ಸರ್ಕಾರದ ಆಡಳಿತ ವೈಖರಿ ಬದಲಾಗಿದೆ. ಆರ್.ಟಿ.ಐ. ಕಾಯ್ದೆ ನೌಕರರನ್ನು ಹೆಚ್ಚು ಜಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಮಾಡಿದೆ. ಸರ್ಕಾರಿ ನೌಕರರು ಪ್ರಶ್ನಾತೀತರಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಬದಲಾವಣೆಯಾಗಿದೆ. ಸರ್ಕಾರಿ ನೌಕರರು ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಹಾಗೇ ದೌರ್ಜನ್ಯ ಎಸಗುವ ಉದಾಹರಣೆಗಳು ಇವೆ. ನೌಕರರು ಎಚ್ಚರ ಹಾಗೂ ಜವಬ್ದಾರಿ ಅರಿತು‌ ಕೆಲಸ ಮಾಡಬೇಕು ಎಂದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ ಪ್ರಸ್ತಾವಿಕವಾಗಿ ಮಾತನಾಡಿ, ನೌಕರರ ದಿನಾಚರಣೆಗೆ ಚಿತ್ರದುರ್ಗ ಜಿಲ್ಲಾ ಘಟಕದಿಂದ ಪ್ರಥಮವಾಗಿ ಮನವಿ ಮಾಡಲಾಗಿತ್ತು . ಇದಕ್ಕೆ ರಾಜ್ಯಾಧ್ಯಕ್ಷರು ಸ್ಪಂದಿಸಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದರು.‌ ಕಳೆದ ವರ್ಷ ರಾಜ್ಯ ನೌಕರರ ದಿನಾಚರಣೆ ಆಚರಣೆಗೆ ಸರ್ಕಾರ ಆದೇಶ ಹೊರಡಿಸಿತು. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಕಾರ್ಯಕ್ರಮ ಆಯೋಜನೆ ಮಾಡಿರಲಿಲ್ಲ. ಈ ವರ್ಷ ಮೊದಲ ಬಾರಿಗೆ ಸರ್ಕಾರಿ ನೌಕರರು ದಿನಾಚರಣೆ ಆಚರಿಸಲಾಗುತ್ತಿದೆ. ನೌಕರರ ಬೇಡಿಕೆಗಳಾದ ಕೇಂದ್ರ ಸರ್ಕಾರ ನೌಕರರ ಸರಿಸಮಾನದ ವೇತನ ಹಾಗೂ ಏಳನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ.

ಎನ್‌.ಪಿ.ಎಸ್ ರದ್ದತಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರವೇ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಆದೇಶ ಹೊರಡಿಸಲಾಗುವುದು. ಇದರಿಂದ ನೌಕರರು ಹಾಗೂ ಕುಟುಂಬದವರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ನೌಕರರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಧಿಕಾರಿ ಚಂದ್ರಯ್ಯ, ಜಿ.ಪಂ.ಕಾರ್ಯದರ್ಶಿ ರಂಗನಾಥ, ರಾಜ್ಯ ನೌಕರರ ಸಂಘದ ತಾಲ್ಲೂಕು ಮಟ್ಟದ ಅಧ್ಯಕ್ಷರುಗಳಾದ ಲೋಕೇಶ್, ಜಗನ್ನಾಥ ಡಿ.ಟಿ, ಕೆ.ಈರಣ್ಣ, ಶಿವಕುಮಾರ್, ಶಶಿಧರ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಬ್ಬಬ್ಬಾ.. ಐಫೋನ್ ಜಸ್ಟ್ 35 Thousand.. ಈ ಆಫರ್ ಎಂಡ್ ಆಗೋದು ಯಾವಾಗ..?

ಈಗಂತು ಯಾರ ಕೈನಲ್ಲಿ ನೋಡಿದರು ಐಫೋನ್ ಗಳದ್ದೇ ಹಬ್ಬ. ಹಣ ಜಾಸ್ತಿ ಆದ್ರೂ ಐಫೋನ್ ಇರಲೇಬೇಕು ಅಂತಾರೆ. ಅದರಲ್ಲೂ ಐಫೋನ್ ತರಹೇವಾರಿ ಮಾಡೆಲ್ ಗಳನ್ನ ರಿಲೀಸ್ ಮಾಡ್ತಾ ಇರುತ್ತೆ. ಆದ್ರೆ ಐಫೋನ್ ಪ್ರಿಯರಿಗಾಗಿಯೇ ಬಿಗ್ಗೆಸ್ಟ್

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

error: Content is protected !!