ಶಿವಮೊಗ್ಗ: ಕಳೆದ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿತ್ತು. ಆದ್ರೆ ಕೆಲವೇ ತಿಂಗಳಲ್ಲಿ ಆ ಸರ್ಕಾರ ಬಿದ್ದು ಹೋಯ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿ ಸೇರಿಕೊಂಡು ಆ ಸರ್ಕಾರವನ್ನು ರಚಿಸಿದ್ರು. ಈ ಬಗ್ಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಮಾತನಾಡಿದ್ದು, ನಾವು ತಪ್ಪು ಮಾಡಿದ್ದೇವೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಧಿಕಾರದ ಆಸೆಗೆ ನಾವೂ ಕಾಂಗ್ರೆಸ್ ನವರನ್ನು ಕರೆದುಕೊಂಡು ಬಂದಿದ್ದೇವೆ. ಅಲ್ಲಿ ಬೇಸರ ಆಗಿ ನಾವೂ ಬರ್ತೀವಿ ಎಂದವರನ್ನು ಮಾತ್ರ ಕರೆದಿದ್ದು. ಅಲ್ಲಿಯ ತನಕ ನಾವಾಗಿ ನಾವೂ ಬನ್ನಿ ಎಂದು ಕರೆದಿಲ್ಲ. ಹದಿನೈದು ಜನ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಹರಿದುಬಂದ್ರು. ಕೊನೆಗೆ ಚುನಾವಣೆಗೆ ನಿಲ್ಲಿ ಗೆಲ್ಸಿ ಕೊಡ್ತೀವಿ ಅಂದ್ರು. ಕಡೆಗೆ ಚುನಾವಣೆ ಹೇಗಾಯ್ತು, ಗೆಲುವು ಹೇಗೆ ಸಿಕ್ತು ಅದೆಲ್ಲವೂ ರಾಜ್ಯಕ್ಕೂ ಗೊತ್ತು. ನಾನು ಮಾತನಾಡಲ್ಲ ಎಂದಿದ್ದಾರೆ.
ನೈತಿಕತೆಯಿಂದ ರಾಜಕಾರಣ ಮಾಡ್ತೀರಾ ಇವತ್ತಲ್ಲ ನಾಳೆ ಅಧಿಕಾರಕ್ಕೆ ಬರುತ್ತೆ. ಅಧಿಕಾರಕ್ಕೋಸ್ಕರ ಪಕ್ಷ ಈಗ ಮಾಡುತ್ತಾ ಇರುವುದು ನನಗೆ ಇಷ್ಟವಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಒಂದೇ ಒಂದು ದಿನದಲ್ಲಿ ಪ್ರಧಾನಮಂತ್ರಿ ಹುದ್ದೆ ಕಳೆದುಕೊಂಡರು. ಇದು ನಮ್ಮ ಬಿಜೆಪಿಯ ವಿಶೇಷತೆ ಎಂದಿದ್ದಾರೆ.





GIPHY App Key not set. Please check settings