in

LPG ಗ್ಯಾಸ್ ಏರಿಕೆಯಾಗಿರೋದಕ್ಕೆ ಕಾಂಗ್ರೆಸ್ ಕಾರಣ : ಸಿ ಟಿ ರವಿ..!

suddione whatsapp group join

ಚಿಕ್ಕಮಗಳೂರು: ಸದ್ಯದ ಸ್ಥಿತಿ ಹೇಗಿದೆ ಅಂದ್ರೆ ಜನ ಅಂದಿನ ದುಡಿಮೆ ಮಾಡಿದ್ರೆ ಅಂದು ಹೊಟ್ಟೆ ತುಂಬುತ್ತೆ ಅನ್ನೋ ಸ್ಥಿತಿಗೆ ಬಂದಿದೆ. ಎಲ್ಲಾ ಬೆಲೆಯೂ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಎಲ್ಲಾ ಬೆಲೆಯೂ ಗಗನದಲ್ಲಿದೆ. ಅದರಲ್ಲಿ ದಿನೇ ದಿನೆ ಎಲ್ಪಿಜಿ ಗ್ಯಾಸ್ ಏರಿಕೆಯಾಗ್ತಾ ಇದ್ದು, ಜನರಿಗೆ ಮುಂದೇನು ಅನ್ನೋ ಚಿಂತೆ ಶುರುವಾಗುವಂತೆ ಮಾಡಿಟ್ಟಿದೆ. ಎಲ್ಪಿಜಿ ಗ್ಯಾಸ್ ಸಿಲಿಂಡರ್ ಏರಿಕೆಯಾಗಿರುವ ಸಂಬಂಧ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, 292 ರೂಪಾಯಿಯಿದ್ದ ಗ್ಯಾಸ್ ಬೆಲೆಯನ್ನ 981 ರೂಪಾಯಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಎಂದಿದ್ದಾರೆ.

2004 ರಲ್ಲಿ 292 ರೂಪಾಯಿಯಿದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಬಳಿಕ 981 ರೂಪಾಯಿ ಮಾಡಲಾಗಿತ್ತು. ಇದಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕಾರಣ. ಇಡೀ ಜಗತ್ತು ಕೊರೊನಾದಿಂದ ತತ್ತರಿಸಿದೆ. ಗ್ಯಾಸ್ ಬೆಲೆ ಏರಿಕೆ ತಾತ್ಕಾಲಿಕ ಎನಿಸುತ್ತೆ. ಗ್ಲೋಬಲ್ Crisis ಆಗಿರೋದ್ರಿಂದ ಅಗತ್ಯ ಬೆಲೆಯಲ್ಲಿ ಏರಿಕೆಯಾಗಿದೆ. ಇದು ತಾತ್ಕಾಲಿಕ ಎನಿಸುತ್ತೆ ಎಂದಿದ್ದಾರೆ.

ಇನ್ನು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ನವರು ಈಗಾಗಲೇ ಸಾಕಷ್ಟು ಸಲ ಪ್ರತಿಭಟಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಸಿ ಟಿ ರವಿ, ಬೆಲೆ ಏರಿಕೆ ಸಂಬಂಧ ಪ್ರತಿಭಟನೆ ಮಾಡುವ ಹಕ್ಕು ಕಾಂಗ್ರೆಸ್ ನವರಿಗಿಲ್ಲ. ಅವರು ಹೋರಾಟ ಮಾಡುವಷ್ಟು ಬೆಲೆ ಏರಿಕೆಯಾಗಿಲ್ಲ ಎಂಬ ಉತ್ತರ ನೀಡಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸಮುದಾಯ, ಸರ್ಕಾರ ನನಗೆ ಎರಡು ಕಣ್ಣು; ಸಚಿವ ಸಿ.ಸಿ.ಪಾಟೀಲ್

ಗಣೇಶ ಹಬ್ಬಕ್ಕಾಗಿ ಕಾಯ್ತಿದ್ದವರಿಗೆ ಗುಡ್ ನ್ಯೂಸ್..ಬಟ್ ಗೈಡ್ ಲೈನ್ಸ್ ಓದ್ಕೋಬಿಡಿ