ಚಿತ್ರದುರ್ಗ, (ಜ.11): ಜಿಲ್ಲೆಯ ವಿವಿಧ ಗ್ರಾಮಗಳಿಗೆ ಹೊಸ ಬಸ್ ವ್ಯವಸ್ಥೆ ಸಂಚಾರ ಆರಂಭಿಸಬೇಕೆಂದು ಬೇಡಿಕೆಗಳು ಬಂದಿದ್ದು, ವಿಶೇಷವಾಗಿ 1947 ರಿಂದ ಸರ್ಕಾರಿ ಬಸ್ ಕಾಣದ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಮಾರ್ಗಕ್ಕೆ ಬಸ್ ಸಂಚಾರ ಆರಂಭಿಸಿದ್ದು ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ ಎಂದು ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ (ಡಿಸಿ) ಕೆ.ಸತ್ಯ ಸುಂದರಮ್ ತಿಳಿಸಿದರು.

ಚಿತ್ರದುರ್ಗ ವಿಭಾಗೀಯ ಕಚೇರಿಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸಾರಿಗೆ ಸಚಿವರಾದ ಶ್ರೀರಾಮುಲು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರಾದ ಎಂ. ಚಂದ್ರಪ್ಪನವರ ಮಾರ್ಗದರ್ಶನದಲ್ಲಿ ಇಡೀ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
1947 ರಿಂದಲೂ ಸರ್ಕಾರಿ ಬಸ್ ಕಾಣದ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಮಾರ್ಗಕ್ಕೆ ಬಸ್ ಸಂಚಾರ ಆರಂಭಿಸಿದ್ದು ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದು, ಆಲೂರು, ಕಸವನಹಳ್ಳಿ, ರಂಗಾಪುರ, ಆರನಕಟ್ಟೆ, ಕುಂದಲಗುರ, ಇಕ್ಕನೂರು, ಕೋಡಿಹಳ್ಳಿ, ಗೊಲ್ಲರಹಟ್ಟಿ, ಕೋಡಿಹಳ್ಳಿಗೆ ತಲುಪಲಿದ್ದು,. ಈ ಭಾಗ ಜನರಿಗೆ. ಮಹಿಳೆಯರಿಗೆ. ಹಿರಿಯರಿಗೆ, ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಲಿ ಎಂದರು.
ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಡಿಪೋ ಆರಂಭಿಸಲಾಗುತ್ತಿದ್ದು ಎಲ್ಲರಿಗೂ ಅನುಕೂಲವಾಗಲಿದೆ. ಇಕ್ಕನೂರು ಪಂಚಾಯಿತಿ ಕೋಡಿಹಳ್ಳಿ ಸದಸ್ಯರಾದ ಮಹದೇವಮ್ಮ ಅವರು ಹೊಸ ಬಸ್‍ಗೆ ಚಾಲನೆ ನೀಡಿದರು. ವಿಭಾಗೀಯ ಸಂಚಾರ ಅಧಿಕಾರಿ ಚನ್ನಬಸಪ್ಪ, ಇಕ್ಕನೂರು ಪಂಚಾಯಿತಿ ಕೋಡಿಹಳ್ಳಿ ಸದಸ್ಯರಾದ ಮಹದೇವಮ್ಮ, ಇತರರು ಮತ್ತು ಗ್ರಾಮಸ್ಥರು ಇದ್ದರು.

