in

ಸಿಲಿಕಾನ್ ಸಿಟಿಯಲ್ಲಿ ಕಟ್ಟಡ ಕುಸಿತ : ತಾಯಿ, ಮಗು ಅಪಾಯದಿಂದ ಪಾರು..!

suddione whatsapp group join

ಬೆಂಗಳೂರು: ಆಯಸ್ಸು ಗಟ್ಟಿಯಿದ್ರೆ ತಲೆ ಮೇಲೆ ಬಂಡೆ ಬಿದ್ರು ಉಳಿತಾರೆ ಅನ್ನೋ ಮಾತಿದೆ. ಸಿಲಿಕಾನ್ ಸಿಟಿಯಲ್ಲಿ ಸಂಭವಿಸಿದ ಘಟನೆ ಈ ಮಾತನ್ನ ನೆನಪಿಸಿದೆ. ಹೌದು, ನಗರದ ವಿಲ್ಸನ್ ಗಾರ್ಡನ್ ಬಳಿ ಇರೋ ಲಕ್ಕಸಂದ್ರದಲ್ಲಿ ಕಟ್ಟಡ ಕುಸಿದಿದೆ. ಅಮ್ಮ-ಮಗು ಅದೃಷ್ಟದಲ್ಲಿ ಪಾರಾಗಿದ್ದಾರೆ.

ಈ ಕಟ್ಟಡ ಕಳೆದ ಎರಡು ವರ್ಷಗಳ ಹಿಂದೆಯೇ ವಾಲಿಕೊಂಡಿತ್ತು. ಪಕ್ಕದ ಮನೆಯವರು ಮಾಲೀಕನಿಗೆ ಎಷ್ಟೇ ಬಾರಿ ಹೇಳಿದ್ರು ಯಾವುದೇ ಪ್ರಯೋಜನವಾಗಲ್ಲ. ಮಾಲೀಕನ ನಿರ್ಲಕ್ಷ್ಯವೇ ಇಂದು ಈ ಘಟನೆ ನಡೆಯೋದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಅಲ್ಲೆ ಹತ್ತಿರದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಕಾರಣ ಕೂಲಿ ಕಾರ್ಮಿಕರಿಗೂ ಪಕ್ಕದಲ್ಲೇ ಬಾಡುಗೆ ಕೊಟ್ಟಿದ್ದರಂತೆ. ಜೊತೆಗೆ ಆ ಕಟ್ಟಡದಲ್ಲಿ 40 ಕುಟುಂಬಗಳು ವಾಸವಿದ್ದರಂತೆ. ಎಲ್ಲರೂ ಕೂಲಿ ಕಾರ್ಮಿಕರೇ ಆಗಿದ್ದರಂತೆ. ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದರೆ ಭಾರೀ ಅನಾಹುತವೇ ಆಗ್ತಾ ಇತ್ತು.

ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಬೆಳಗ್ಗೆ 11 ಗಂಟೆಗೆ ಬಿರುಕು ಬಿಟ್ಟು ಮಧ್ಯಾಹ್ನದ ವೇಳೆಗೆ ಕುಸಿದಿದೆ. ಇನ್ನು ಅಕ್ಕಪಕ್ಕದ ಮನೆಗೂ ದೊಡ್ಡ ಹಾನಿಯಾವಿದೆ. ಗೋಡೆಗಳು ಬಿರುಕು ಬಿಟ್ಟಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಲಾರಿ- ಬೈಕ್ ಅಪಘಾತ ; ಬೈಕ್ ಸವಾರ ಸಾವು

ಶಿಷ್ಯನ ವಿರುದ್ಧ ದೇವೇಗೌಡರ ಕಿಡಿ : ಅಂಥದ್ದೇನೇಳಿದ್ರು ಸಿದ್ದರಾಮಯ್ಯ..?