ಬೆಳಗ್ಗೆ ಎದ್ದ ತಕ್ಷಣ ಒಂದಷ್ಟು ಜನ ಟೀ ಕುಡೊಯೋ ಅಭ್ಯಾಸ ಮಾಡಿಕೊಂಡಿದ್ರೆ, ಇನ್ನೊಂದಷ್ಟು ಜನ ಯಾವ ಅಭ್ಯಾಸವನ್ನ ಮಾಡ್ಕೊಂಡಿಲ್ಲ. ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜಿದ ನಂತರ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವುದರಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ, ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡುತ್ತದೆ.
ಟೀ ಗೆ ಸ್ವಲ್ಪ ಶುಂಠಿ, ಏಲಕ್ಕಿ, ಒಂದು ಎಸಳು ಬೆಳುಳ್ಳಿ ಹಾಕಿ ಚೆನ್ನಾಗಿ ಕುದಿಸಿ ಕುಡಿದರೆ ತಲೆ ನೋವು ಕಡಿಮೆ ಮಾಡುತ್ತದೆ.
ನೆಲ್ಲಿಕಾಯಿ ಜ್ಯೂಸ್ ಗೆ ಮೆಂತೆ ಪುಡಿ ಹಾಕಿ ಪ್ರತಿದಿನವೂ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಣ ಸಾಧಿಸಲು ಆಗುತ್ತದೆ.
ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗೆಯುವುದರಿಂದ ದಂತಕ್ಷಯ ಹಾಗೂ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ರಕ್ತಹೀನತೆಯಿಂದ ಬಳಲುತ್ತಿರುವವರು ದ್ರಾಕ್ಷಾರಸದೊಂದಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
ಹಾಲು, ಸಕ್ಕರೆ ಬೆರಸದೆ ತಣ್ಣಗಿರುವ ಹಾಲನ್ನು ಕುಡಿಯಿರಿ. ತಣ್ಣಗಿರುವ ಹಾಲು ದೇಹದಲ್ಲಿರುವ ಆಸಿಡ್ ಅಂಶಗಳನ್ನು ಹೀರಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ನಿಂದಾಗುವ ಉರಿಯನ್ನು ಶಮನಗೊಳಿಸುತ್ತದೆ.
ಪ್ರತಿದಿನ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕಾಮಾಲೆ ರೋಗವನ್ನು ನಿವಾರಿಸುತ್ತದೆ ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
ಚಳಿ ಹೆಚ್ಚಿದ್ದಾಗ ಪುರುಷರು ಬಿಸಿ ನೀರಿನ ಸ್ನಾನ ಮಾಡಿದರೆ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಕಂಡು ಬರುತ್ತವೆ.
ಲೋಟ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರೆಯುವ ಮೂಲಕ ದೇಹಕ್ಕೆ ಪೋಷಣೆ ಲಭಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಅಲ್ಸರ್ ಸಮಸ್ಯೆ ಇರುವವರು ಪ್ರತಿದಿನ ಬಾಳೆಹಣ್ಣು ತಿನ್ನುವುದರಿಂದ, ಆಮ್ಲೀಯತೆಯನ್ನು ತಗ್ಗಿಸುತ್ತದೆ. ಜಠರದ ಪೊರೆಯನ್ನು ಮರುಲೇಪಿಸುವ ಮೂಲಕ, ಅದರ ಅಲ್ಸರ್ ತೊಂದರೆಯನ್ನು ಶಮನ ಮಾಡುತ್ತದೆ.
ಕೇಂದ್ರ ಬಜೆಟ್ ನಲ್ಲಿ 12 ಲಕ್ಷದ ಆದಾಯದವರೆಗೂ ತೆರಿಗೆ ವಿನಾಯಿತಿಯನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ ತಿಂಗಳಿಗೆ 1 ಲಕ್ಷ…
ಕೇಂದ್ರ ಬಜೆಟ್ 2025ರಲ್ಲಿ ದೇಶದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಇಂಟರ್ ನೆಟ್ ಸೌಲಭ್ಯವನ್ನು ಒದಗಿಸುವ ಯೋಜನೆಯನ್ನು ಘೋಷಣೆ ಮಾಡಿದೆ.…
2025ರ ಕೇಂದ್ರ ಬಜೆಟ್ ನಲ್ಲಿ ಎಂಎಸ್ಎಂಇ ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಸಾಲದ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಈ ಹಿಂದೆ…
ಕೇಂದ್ರ ಬಜೆಟ್ 2025ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡನೆ ಮಾಡಿದ್ದಾರೆ. ಸತತ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.01 : ಪ್ರಯಾಗ್ ರಾಜ್ ನಲ್ಲಿ ಜರುಗುತ್ತಿರುವ ಕುಂಭಮೇಳದಲ್ಲಿ ಇತ್ತೀಚೆಗೆ ಜರುಗಿದ ಕಾಲ್ತುಳಿತದಲ್ಲಿ ಚಿತ್ರದುರ್ಗದ ಓರ್ವರು…
ಸುದ್ದಿಒನ್ : ಅರಿಶಿನವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಅನೇಕ ಜನರಿಗೆ ತಿಳಿದಿದೆ. ಅರಿಶಿನದಿಂದ ದೇಹದ ಆರೋಗ್ಯ ಮತ್ತು…