Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BREAKING : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಟ್ರ್ಯಾಪ್ ಶೂಟಿಂಗ್ ತಂಡಕ್ಕೆ ಬೆಳ್ಳಿ ಪದಕ : ಫೈನಲ್‌ ಪ್ರವೇಶಿಸಿದ ನೀರು ಧಂಡಾ

---Advertisement---

ಐಚಿ-ನಗೋಯಾ (ಜಪಾನ್): ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಶೂಟರ್‌ಗಳು ಅಮೋಘ ಪ್ರದರ್ಶನ ನೀಡಿದ್ದು, ಮಂಗಳವಾರ ನಡೆದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಇದೇ ವೇಳೆ ಭಾರತದ ನೀರು ಧಂಡಾ ವೈಯಕ್ತಿಕ ವಿಭಾಗದ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಭಾರತದ ನೀರು ಧಂಡಾ (118), ಆಶಿಮಾ ಅಹ್ಲಾವತ್ (106) ಮತ್ತು ಮನೀಶಾ ಕೀರ್ (104) ಅವರನ್ನೊಳಗೊಂಡ ತ್ರಿವಳಿ ಪಡೆ ಒಟ್ಟು 328 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ರಜತ ಪದಕಕ್ಕೆ ಕೊರಳು ಹಾಕಿತು. 346 ಅಂಕ ಕಲೆಹಾಕಿದ ಚೀನಾ ಚಿನ್ನದ ಪದಕ ಗೆದ್ದರೆ, ಕುವೈತ್ (325) ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.

ಒಟ್ಟು 27 ಶೂಟರ್‌ಗಳು ಭಾಗವಹಿಸಿದ್ದ ಅರ್ಹತಾ ಸುತ್ತಿನಲ್ಲಿ ಭಾರತದ ಆಶಿಮಾ 16ನೇ ಸ್ಥಾನ ಪಡೆದರೆ, ಮನೀಶಾ 23ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ನೀರು ಧಂಡಾ ಅವರ ವೈಯಕ್ತಿಕ ವಿಭಾಗದ ಫೈನಲ್ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ನಡೆಯಲಿದೆ.

Join WhatsApp

Join Now

Join Telegram

Join Now