*ಬಿಬಿಎಂಪಿ ನಿರ್ಲಕ್ಷ್ಯ, ೯ ವರ್ಷದ ಬಾಲಕ ಸಾವು*
ಬೆಂಗಳೂರು: ಸರಿಯಾದ ನಿರ್ವಹಣೆಯಿಲ್ಲದ ಬಿಬಿಎಂಪಿ ಪಾರ್ಕ್ನ ಹೊಂಡಕ್ಕೆ 9 ವರ್ಷದ ಬಾಲಕ ಬಿದ್ದು ಸಾವನ್ನಪ್ಪಿರೋ ಘಟನೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿ ಸಮೀಪದ ಮಲ್ಲಸಂದ್ರದ 13 ನೇ ವಾರ್ಡ್ ನಲ್ಲಿರೋ ನಾಡಪ್ರಭು ಕೆಂಪೇಗೌಡ ಉದ್ಯಾನವನದಲ್ಲಿ ನೆಡೆದಿದೆ.
ಇನ್ನೂ ಮಲ್ಲಸಂದ್ರದಲ್ಲಿ ವಾಸವಿರೋ
ಗಾರ್ಮೆಂಟ್ಸ್ ನೌಕರ ರುದ್ರಮುನಿ ಹಾಗೂ ತಾಯಿ ಕಾಂತಮಣಿ ದಂಪತಿಗಳ 9 ವರ್ಷದ ಮಗು ಪ್ರತಾಪ್ ಮೃತ ದುರ್ದೈವಿಯಾಗಿ ಎನ್ನಲಾಗಿದೆ.
ಇನ್ನೂ ತೀವ್ರ ವಿರೋಧದ ನಡುವೆ ಸಂಸದ ಸದಾನಂದಗೌಡ ಉದ್ಘಾಟಿಸಿದ ಉದ್ಯಾವನ ಇದಾಗಿದ್ದು, ಉದ್ಯಾನವನ ನಿರ್ವಹಣೆ ಮಾಡಲು ಹಾಗೂ ಭದ್ರತಾ ಸಿಬ್ಬಂದಿ ಇಲ್ಲದಿರುವುದೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.