in

ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ : ಅಮಿತ್ ಶಾ ಹೇಳಿಕೆಗೆ ಬಹುಪರಾಕ್ ಎಂದ ಶೆಟ್ಟರ್

suddione whatsapp group join

ಬೆಂಗಳೂರು: ಸಿಎಂ ಸ್ಥಾನಕ್ಕೆ ಬದಲಾವಣೆಯಾಗುತ್ತೆ, ಬೊಮ್ಮಾಯಿ ಬಳಿಕ ಮತ್ತೊಬ್ರು ಬರ್ತಾರೆ ಅನ್ನೋ ಮಾತು ಕೇಳಿ ಬರ್ತಾ ಇತ್ತು. ಆದ್ರೆ ಅದಕ್ಕೆ ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ತೆರೆ ಎಳೆದಿದ್ದಾರೆ. ಈ ಬಾರಿ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದಿದ್ದಾರೆ. ಅದಕ್ಕೆ ಸ್ಪಷ್ಟ ಉತ್ತರ ಸಿಕ್ಕ ಬಳಿಕ ಈ ಬಗ್ಗೆ ಮಾಜಿ ಸಚಿವ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೀತಾ ಇದೆ. ಕುಟುಂಬ ಸಮೇತ ಮತದಾನ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ನಡೆಯುತ್ತೆ ಎಂದು ಹೇಳಿರೋದು ಸಂತಸದ ವಿಚಾರ ಎಂದಿದ್ದಾರೆ. ಪಕ್ಷದ ನಿರ್ಧಾರದಂತೆ ನಾವೂ ಮುಂದುವರೆಯುತ್ತೇವೆ. ಆದ್ರೆ ಚುನಾವಣೆ ಇನ್ನೂ ತುಂಬಾ ದೂರ ಇದೆ ಎಂದಿದ್ದಾರೆ.

ಸರ್ಕಾರದಲ್ಲಿ ಹಿರಿಯರನ್ನು ಕಡೆಗಣಿಸಿದ್ದರ ಬಗ್ಗೆ ಈಗಾಗಲೇ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇವೆ.ಪಾಲಿಕೆ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಿ ನಾನು ಪ್ರಚಾರ ಮಾಡಿದ್ದೇನೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಂಡಾಯಗಾರರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಸಪೋರ್ಟ್ ಮಾಡಿಲ್ಲ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ರಾಯನ್ ರಾಜ್ ಸರ್ಜಾ : ಜ್ಯೂನಿಯರ್ ಚಿರು ಈಗ ಯುವರಾಜ

ಕೆನಡಾದಲ್ಲಿ ಗೌರಿ ಲಂಕೇಶ್ ದಿನಾಚರಣೆಗೆ ಸಿದ್ಧತೆ