ಮುಂಬಯಿ : ನಟ ಅಕ್ಷಯ್ ಕುಮಾರ್ ಪ್ರಸ್ತುತ ಬಾಲಿವುಡ್ನ ಟಾಪ್ ಹೀರೋ ಆಗಿ ಮುಂದುವರೆದಿದ್ದಾರೆ .ಎಲ್ಲಾ ಸ್ಟಾರ್ ಹೀರೋಗಳು ವರ್ಷಕ್ಕೆ ಒಂದು ಚಿತ್ರ ಮಾತ್ರ ಬಿಡುಗಡೆ ಮಾಡುವ ಬಗ್ಗೆ ಯೋಚಿಸಿದರೆ ಅಕ್ಷಯ್ ಕುಮಾರ್ ಮಾತ್ರ ಮೂರು ಅಥವಾ ನಾಲ್ಕು ಚಿತ್ರಗಳನ್ನು ಸಲೀಸಾಗಿ ಮಾಡುತ್ತಾರೆ. ಇದಲ್ಲದೆ, ಅವರು ನಟಿಸಿದ ಚಲನಚಿತ್ರಗಳು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು (success rate) ಹೊಂದಿವೆ.
ಅಕ್ಷಯ್ ಚಲನಚಿತ್ರಗಳನ್ನು ಮಿನಿಮಮ್ ಗ್ಯಾರಂಟಿ ಚಿತ್ರಗಳೆಂಬ ಪರಿಕಲ್ಪನೆಯು ನಿರ್ದೇಶಕ ಮತ್ತು ನಿರ್ಮಾಪಕರಲ್ಲಿದೆ. ಸಂಭಾವನೆಯ ವಿಷಯದಲ್ಲಿ ಅಕ್ಷಯ್ ಕೂಡ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ಅವರು ಪ್ರತಿ ಚಿತ್ರಕ್ಕೂ 117 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅಕ್ಷಯ್ ಮತ್ತೊಮ್ಮೆ ತನ್ನ ಸಂಭಾವನೆಯನ್ನು ಹೆಚ್ಚಿಸುತ್ತಾರೆಂಬ ಎಂಬ ವದಂತಿಗಳಿವೆ. 2022 ರಲ್ಲಿ ತಯಾರಾಗಲಿರುವ ಚಿತ್ರಗಳಿಗೆ ಅಕ್ಷಯ್ ಒಟ್ಟು 135 ಕೋಟಿ ರೂ ಪಡೆಯಲಿದ್ದಾರೆಂಬ ವದಂತಿ ಬಿ ಟೌನ್ ನಲ್ಲಿ ಕೇಳಿ ಬರುತ್ತಿದೆ.
ಈ ಕುರಿತು ಚಲನಚಿತ್ರ ವಿಶ್ಲೇಷಕರೊಬ್ಬರು, “ಅಕ್ಷಯ್ ಕುಮಾರ್ ಚಲನಚಿತ್ರಗಳಿಗೆ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳನ್ನು 80-90 ಕೋಟಿ ರೂ. ಸಂಗ್ರಹಿಸುತ್ತಿದ್ದಾರೆ. ಪ್ರೊಡಕ್ಷನ್ ಬಜೆಟ್ 35-45 ಕೋಟಿ ರೂ. ಇರುತ್ತದೆ. ಪ್ರಿಂಟಿಂಗ್ ಮತ್ತು ಪಬ್ಲಿಸಿಟಿಗಾಗಿ 15 ಕೋಟಿ ರೂ. ಸಂಭಾವನೆಯ ಹೊರತಾಗಿ, ಅಕ್ಷಯ್ ಅವರ ಚಿತ್ರದ ಬಜೆಟ್ ಒಟ್ಟಾರೆ ಸುಮಾರು 185-200 ಕೋಟಿ ರೂ. ಗಳವರೆಗೂ ಇರುತ್ತದೆ.
ಪ್ರತಿ ಚಲನಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕನಿಷ್ಠ 500 ಕೋಟಿ ರೂ.ಗಳನ್ನು ವಸೂಲಿ ಮಾಡುತ್ತದೆ. ಇದರೊಂದಿಗೆ ಅವರು ತಮ್ಮ ಸಂಭಾವನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡರು. ಅಕ್ಷಯ್ ಅವರ ಕ್ರೇಜ್ ಅನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಸಹ ಈ ದೊಡ್ಡ ಮೊತ್ತವನ್ನು ಪಾವತಿಸಲು ಒಪ್ಪಿದ್ದಾರೆ. ಪ್ರಸ್ತುತ, ಅಕ್ಷಯ್ ಅವರು ಸೂರ್ಯವಂಶಿ, ಅಟ್ರಂಗಿ ರೇ, ಬೆಲ್ ಬಾಟಮ್, ಬಚ್ಚನ್ ಪಾಂಡೆ, ರಕ್ಷಾ ಬಂಧನ್, ಪೃಥ್ವಿರಾಜ್ ಮತ್ತು ರಾಮ್ ಸೇತು ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
