ವಿಶ್ವಹಿಂದೂ ಪರಿಷತ್, ಭಜರಂಗದಳದ ವತಿಯಿಂದ ರಕ್ತದಾನ ಶಿಬಿರ

1 Min Read

ಚಿತ್ರದುರ್ಗ : ಅಯೋಧ್ಯೆ ಬಲಿದಾನ ದಿನದ ಅಂಗವಾಗಿ ವಿಶ್ವಹಿಂದೂ ಪರಿಷತ್, ಭಜರಂಗದಳದ ವತಿಯಿಂದ ಜೆ.ಸಿ.ಆರ್.ಬಡಾವಣೆ ಮೂರನೆ ತಿರುವಿನಲ್ಲಿರುವ ಕಾರ್ಯಾಲಯದಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಭಜರಂಗದಳದ ಶಿವಮೊಗ್ಗ ವಿಭಾಗ ಸಂಚಾಲಕ ಪ್ರಬಂಜನ್ ಮಾತನಾಡಿ ಅಯೋಧ್ಯೆಯ ರಾಮಮಂದಿರ ಕ್ಷೇತ್ರ 1990 ರಲ್ಲಿ ವಿವಾಧಿತ ಸ್ಥಳವಾಗಿತ್ತು. ಅಲ್ಲಿಗೆ ಹಿಂದೂಗಳು ತೆರಳಿ ಕರಸೇವೆ ನಡೆಸಿದರು. ಕೊಲ್ಕತ್ತಾದ ಕೊಠಾರಿ ಸಹೋದರರು ಭಾಗವಹಿಸಿ ಧ್ವಜ ಹಾರಿಸಿದಾಗ ಅಂದಿನ ಮುಲಾಯಂಸಿಂಗ್ ಯಾದವ್ ಸರ್ಕಾರ ಕರಸೇವಕರ ಮೇಲೆ ಗುಂಡು ಹಾರಿಸಿದ ಪರಿಣಾಮವಾಗಿ ಕೊಠಾರಿ ಸಹೋದರರು ಪ್ರಾಣಬಿಟ್ಟರು. ಜೊತೆಗೆ ಐದುನೂರಕ್ಕು ಹೆಚ್ಚು ಸಾಧು ಸಂತರು ಪೊಲೀಸರ ಗುಂಡಿಗೆ ಬಲಿಯಾದರು.

ರಾಮಜನ್ಮಭೂಮಿಗಾಗಿ ಹೋರಾಡಿ ಬಲಿದಾನಗೈದವರ ನೆನಪಿಗಾಗಿ ಬಲಿದಾನ ದಿವಸ್ ಆಚರಿಸುತ್ತಿರುವ ಈ ಸಂದರ್ಭದಲ್ಲಿ ರಕ್ತದಾನ ಏರ್ಪಡಿಸಿರುವುದು ಅತ್ಯಂತ ಮಹತ್ವದ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಜರಂಗದಳದ ಜಿಲ್ಲಾ ಸಂಚಾಲಕ ಸಂದೀಪ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್, ಬಿಜೆಪಿ.ಯುವ ಮುಖಂಡ ಸಿದ್ದಾರ್ಥ ಗುಂಡಾರ್ಪಿ, ವಿಪುಲ್‍ಜೈನ್, ವೀರಮದಕರಿ ಟ್ರಸ್ಟ್‌ನ ವಿಶ್ವನಾಥ್, ರಂಗನಾಥ್, ಕೇಶವ್, ಶಕ್ತಿದಿನೇಶ್ ಹಾಗೂ ವಿಶ್ವಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *