ಎಎಪಿ ಸೇರಿದ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ರಾಘವೇಂದ್ರ ಚಿಂಚನಸೂರ್‌ ಮತ್ತು ಬಿಜೆಪಿ ಐಟಿ ಸೆಲ್ ಶರಣ್..!

ಬಿಜೆಪಿಯ ಕಲಬುರ್ಗಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾಗಿರುವ ರಾಘವೇಂದ್ರ ಚಿಂಚನಸೂರರವರು ಮತ್ತು ಕಲಬುರಗಿ ಬಿಜೆಪಿಯ ಐಟಿ ಸೆಲ್ ಪ್ರಮುಖರಾದ ಶರಣ್‌ರವರು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಮ್‌ ಆದ್ಮಿ ಪಾರ್ಟಿಯನ್ನು ಸೇರಿದ್ದಾರೆ.

ಬಳಿಕ ಮಾತನಾಡಿದ ಅವರು, ದಲಿತರಿಗೆ, ಹಿಂದುಳಿದವರಿಗೆ ಹಾಗೂ ಸಮಾಜದ ದಮನಿತ ಜನರಿಗೆ ಸೌಕರ್ಯಗಳು ಸಿಗುವಂತೆ ಮಾಡಲು ಹೋರಾಡುತ್ತಿದ್ದೇನೆ. ಇದಕ್ಕಾಗಿ ಸ್ವಾಭಿಮಾನ ಜನತಾ ಸಂಘ ಎಂಬ ಸಂಘಟನೆಯನ್ನು ರಚಿಸಿಕೊಂಡು ಕಳೆದ ಒಂದುವರೆ ದಶಕದಿಂದ ಸಮಾಜದ ದನಿಯಾಗಿದ್ದೇನೆ. ಬಿಜೆಪಿಯಲ್ಲಿ ನಂಬಿಕೆಯಿಟ್ಟು ಆ ಪಕ್ಷವನ್ನು ಸೇರಿದ್ದೆ. ಆದರೆ ಜನವಿರೋಧಿಯಾಗಿರುವ ಬಿಜೆಪಿಯಿಂದ ದಲಿತರು ಸೇರಿದಂತೆ ಯಾರಿಗೂ ಉಪಯೋಗವಿಲ್ಲ ಎಂಬುದು ಅರಿವಾಗಿದೆ. ಕಲಬುರ್ಗಿ ಸೇರಿದಂತೆ ಸಂಪೂರ್ಣ ಉತ್ತರ ಕರ್ನಾಟಕವನ್ನು ಬಿಜೆಪಿ ಕಡೆಗಣಿಸುತ್ತಿದೆ” ಎಂದು ರಾಘವೇಂದ್ರ ಚಿಂಚನಸೂರ ಆರೋಪಿಸಿದರು.

ಆಮ್‌ ಆದ್ಮಿ ಪಕ್ಷದ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜು ಮಾತನಾಡಿ, ರಾಘವೇಂದ್ರ ಚಿಂಚನಸೂರರವರು ದಲಿತರು, ಹಿಂದುಳಿದವರು ಹಾಗೂ ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ನಾಯಕರಾಗಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಿದ ಅನುಭವ ಅವರಿಗಿದೆ. ಅವರ ಸೇರ್ಪಡೆಯಿಂದ ವಿಶೇಷವಾಗಿ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಆನೆಬಲ ಬಂದಂತಾಗಿದೆ. ಅಲ್ಲಿನ ಇನ್ನಷ್ಟು ಯುವ ನಾಯಕರು ಪಕ್ಷ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.

suddionenews

Recent Posts

ಈ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆ ಪದೇ ಪದೇ ಕಿರಿಕಿರಿ

ಈ ರಾಶಿಯವರಿಗೆ ಹಣಕಾಸಿನ ವಿಚಾರಕ್ಕಾಗಿ ಟೆನ್ಷನ್, ಈ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಜೊತೆ ಪದೇ ಪದೇ ಕಿರಿಕಿರಿ, ಬುಧವಾರದ…

55 minutes ago

ಕಾಯಕ ಪ್ರಜ್ಞೆ ಮೈಗೂಡಿಸಿಕೊಂಡರೆ ಬಸವ ತತ್ವ ಪಾಲಿಸಿದಂತೆ : ಸಂಸದ ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ. ಫೆ. 25 :…

10 hours ago

ಮಾರ್ಚ್ 01 ರಿಂದ 09 ರವರೆಗೆ ವನಕಲ್ಲು ಮಲ್ಲೇಶ್ವರ ಜಾತ್ರಾ ಮಹೋತ್ಸವ : ಬಸವ ರಮಾನಂದ ಮಹಾಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

10 hours ago

ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ ವರ್ಗಾವಣೆ…!

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

10 hours ago

ವೇಷಗಾರ ಸಮುದಾಯದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಖಂಡಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

10 hours ago

ಸಂವಿಧಾನಕ್ಕೆ ಅಪಾಯವಾದರೆ ಜನಸಾಮಾನ್ಯರ ಪಾಡೇನು ?  ಜೆ.ಯಾದವರೆಡ್ಡಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

10 hours ago