ಮೈಸೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಘಟಾನುಘಟಿ ನಾಯಕರೇ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಈ ಬಗ್ಗೆ ಈಗಾಗಲೇ ಬಿಜೆಪಿ ನಾಯಕರು ವಿಶ್ಲೇಷಣೆ ಮಾಡಿಕೊಂಡಿದ್ದಾರೆ. ಇದೀಗ ಸಂಸದ ಪ್ರತಾಪ್ ಸಿಂಹ ಕೂಡ ಈ ಬಗ್ಗೆ ತಮ್ಮ ಕಾರ್ಯಕರ್ತರಿಗೆ ಟ್ವೀಟ್ ಮಾಡುವ ಮೂಲಕ ಸಮಾಧಾನ ಮಾಡಿದ್ದಾರೆ.
“ನನ್ನ ಪ್ರೀತಿಯ ಬಿಜೆಪಿ ಕಾರ್ಯಕರ್ತರೇ, ಅಧೀರರಾಗಬೇಡಿ. ಮತದಾರರನ್ನು ದೂಷಿಸಬೇಡಿ. ಮತದಾರ ನಮಗಿಂತ ಬುದ್ಧಿವಂತ. ನಮ್ಮನ್ನು ಎರಡು ಸಲ ಅಧಿಕಾರಕ್ಕೆ ತಂದವರು ಅವರೇ. ಅವರಿಗೆ ಶರಣಾಗಿ ಮತ್ತೆ ವಿಶ್ವಾಸ ಗಳಿಸೋಣ” ಎಂದಿದ್ದಾರೆ.
224 ಕ್ಷೇತ್ರದ ಫಲಿತಾಂಶ ಶನಿವಾರ ಹೊರ ಬಿದ್ದಿದೆ. ಕಾಂಗ್ರೆಸ್ ಬಹುಮತದ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಸ್ವತಂತ್ರ ಸರ್ಕಾರ ರಚನೆ ಮಾಡುತ್ತದೆ. ಪ್ರತಾಪ್ ಸಿಂಹ ಈ ರೀತಿ ಟ್ವೀಟ್ ಮಾಡಿದ ಕೂಡಲೇ ನೆಟ್ಟಿಗರು ಕೂಡ ವ್ಯಂಗ್ಯವಾಡದ್ದಾರೆ. ನೀವೂ ಪ್ರತಿನಿಧಿಅಉವ ಕ್ಷೇತ್ರದಲ್ಲಿ ಫುಲ್ ಹೊಗೆ ಅಂತೆ ಎಂದಿದ್ದಾರೆ.





GIPHY App Key not set. Please check settings