Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಜೆಪಿ ರಥಯಾತ್ರೆಗೆ ಅವಕಾಶ ಕೊಡುವುದಿಲ್ಲ : ಹೆಚ್.ಜೆ.ಕೃಷ್ಣಮೂರ್ತಿ

Facebook
Twitter
Telegram
WhatsApp

ಚಿತ್ರದುರ್ಗ : ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನಾಳಿದ ರಾಜವೀರ ಮದಕರಿನಾಯಕನ ಹೆಸರನ್ನು ಮುಂದಿಟ್ಟುಕೊಂಡು ಜೂ.3 ರಂದು ಬಿಜೆಪಿ ಯವರು ನಡೆಸಲು ಹೊರಟಿರುವ ರಥಯಾತ್ರೆಗೆ ನಾವುಗಳು ಅವಕಾಶ ಕೊಡುವುದಿಲ್ಲ ಎಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ ಬಿಜೆಪಿ. ಮುಖಂಡರುಗಳಿಗೆ ಎಚ್ಚರಿಕೆ ನೀಡಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾಯಕ ಸಮುದಾಯಕ್ಕೆ ಶೆ.7.5 ಮೀಸಲಾತಿ ನೀಡುವಂತೆ ಪ್ರಸನ್ನಾನಂದ ಸ್ವಾಮಿಗಳು  110 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಕುಳಿತಿದ್ದರೂ ಕನಿಷ್ಟ ಮಾನವೀಯತೆಯನ್ನು ತೋರದ ರಾಜ್ಯ ಬಿಜೆಪಿ.ಸರ್ಕಾರ ಮದಕರಿನಾಯಕನನ್ನು ಓಟ್ ಬ್ಯಾಂಕ್ ಮಾಡಿಕೊಳ್ಳಲು ಹೊರಟಿದೆ.

ಒಂದು ಪಕ್ಷಕ್ಕೆ ಮದಕರಿನಾಯಕನನ್ನು ಸೀಮಿತಗೊಳಿಸುವುದಕ್ಕೆ ನಮ್ಮ ವಿರೋಧವಿದೆ. ಅಮಿತ್‍ಷಾ ಚಿತ್ರದುರ್ಗಕ್ಕೆ ಬಂದಾಗ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣಕ್ಕೆ ಐದು ನೂರು ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಹೇಳಿ ಹೋಗಿದ್ದನ್ನು ಬಿಟ್ಟರೆ ಮದಕರಿನಾಯಕನನ್ನು ಗೌರವಿಸುವ ಯಾವ ಕಾರ್ಯಕ್ರಮವನ್ನು ಬಿಜೆಪಿ.ಪಕ್ಷ ಹಾಕಿಕೊಂಡಿಲ್ಲ. ಒಂದು ವೇಳೆ ರಥಯಾತ್ರೆ ನಡೆಸಿದ್ದೇ ಆದಲ್ಲಿ ತಡೆಯುತ್ತೇವೆಂದು ಆಕ್ರೋಶ ವ್ಯಕ್ತಪಡಿಸಿದರು.

ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡುತ್ತ ಎಲ್ಲಾ ಜಾತಿಯವರು ಗೌರವಿಸುವ ಮದಕರಿನಾಯಕನ ಹೆಸರಿಟ್ಟುಕೊಂಡು ಬಿಜೆಪಿ.ರಥಯಾತ್ರೆ ಮಾಡಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ. ನಮ್ಮ ಸಮಾಜದ ಅನೇಕ ನಾಯಕರುಗಳು ರಥಯಾತ್ರೆಗೆ ಆಗಮಿಸುತ್ತಾರಂತೆ. ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಬೇಡ. ರಥಯಾತ್ರೆಯನ್ನು ಬಿಜೆಪಿ.ಕೈಬಿಟ್ಟರೆ ಸಮಾಜದಲ್ಲಿ ಶಾಂತಿಯ ವಾತಾವರಣ ನೆಲೆಸುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದೆ ಎಂಬ ಜಂಬದಿಂದ ಮದಕರಿನಾಯಕನ ರಥಯಾತ್ರೆ ಮಾಡಿದ್ದೇ ಆದಲ್ಲಿ ನಾವುಗಳು ತಡೆಯುತ್ತೇವೆ. ಆಗ ಸಂಭವಿಸಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ.

ನಮ್ಮ ಒತ್ತಾಯಕ್ಕೆ ಮಣಿದು ಮದಕರಿನಾಯಕ ರಥಯಾತ್ರೆಯನ್ನು ಕೈಬಿಡದಿದ್ದರೆ ಬಿಜೆಪಿ ಪಕ್ಷದ ನಾಯಕರುಗಳ ಫೋಟೋ ಹಾಕಿ ಶವಯಾತ್ರೆ ಮಾಡಬೇಕಾಗುತ್ತದೆ. ಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಮೊದಲು ಸರಿಪಡಿಸಲಿ ಎಂದು ಸವಾಲು ಎಸೆದರು.

ನಗರಸಭೆ ಸದಸ್ಯ ವೆಂಕಟೇಶ್ ಮಾತನಾಡುತ್ತ ನಾಯಕ ಸಮಾಜಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಪ್ರಸನ್ನಾನಂದ ಸ್ವಾಮೀಜಿ 110 ದಿನಗಳಿಂದ ಬೆಂಗಳೂರಿನಲ್ಲಿ ಧರಣಿ ನಡೆಸುತ್ತಿರುವುದನ್ನು ಗಮನಿಸಿದ ಬಿಜೆಪಿಯ ಮದಕರಿನಾಯಕ ರಥಯಾತ್ರೆಯನ್ನು ನಾವುಗಳು ತಿರಸ್ಕರಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಎಸ್ಟಿ ಮೋರ್ಚ ಉಪಾಧ್ಯಕ್ಷ ಬಿ.ತಿಪ್ಪೇಸ್ವಾಮಿ ಮಾತನಾಡಿ ಪ್ರಸನ್ನಾನಂದ ಸ್ವಾಮೀಜಿ ನೂರ ಹತ್ತು ದಿನಗಳಿಂದಲೂ ಮೀಸಲಾತಿಗಾಗಿ ಧರಣಿ ನಡೆಸುತ್ತಿದ್ದರೂ ಗಮನ ಕೊಡದ ಸರ್ಕಾರ ಓಟಿಗಾಗಿ ಗಿಮಿಕ್ ಮಾಡುತ್ತಿದೆ. ಜೂ.3 ನೇ ತಾರೀಖಿನ ಒಳಗೆ ಮೀಸಲಾತಿಯನ್ನು ಘೋಷಿಸಲಿ. ಅದನ್ನು ಬಿಟ್ಟು ಮದಕರಿ ರಥಯಾತ್ರೆ ಆಚರಿಸುವುದು ಏಕೆ ಎಂದು ಪ್ರಶ್ನಿಸಿದರು?
ನಗರಸಭೆ ಸದಸ್ಯ ದೀಪು, ಹೆಚ್.ಅಂಜಿನಪ್ಪ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಹಾರಾಷ್ಟ್ರದಲ್ಲಿ ಯಾರಾಗಲಿದ್ದಾರೆ ನೂತನ ಸಿಎಂ ?

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಗಾದರೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಪ್ರತಿಕ್ರಿಯಿಸಿದ್ದಾರೆ. ದೇವೇಂದ್ರ ಫಡ್ನವೀಸ್

ಸಿಎಂ ಸಿದ್ದರಾಮಯ್ಯ ಅವರ ಪ್ರಚಾರದಿಂದ ಗೆಲುವು : ಬಿಜೆಪಿ ಸೋಲಿನ ಬಗ್ಗೆ ಜನಾರ್ದನ ರೆಡ್ಡಿ ಫಸ್ಟ್ ರಿಯಾಕ್ಷನ್

ಬಳ್ಳಾರಿ: ಇಂದು ಸಂಡೂರು ವಿಧಾನಸಭಾ ಕ್ಷೇತ್ರದಲ್ಲೂ ಫಲಿತಾಂಶ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನ್ನಪುರ್ಣ ತುಕರಾಂ ಗೆಲುವು ಸಾಧಿಸಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಅನೌನ್ಸ್ ಆಗಲಿದೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಜನಾರ್ದನ ರೆಡ್ಡಿ ಅವರು ಸಾಕಷ್ಟು

ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ಮತ್ತೊಮ್ಮೆ ಅಧಿಕಾರಕ್ಕೆ…!

ಸುದ್ದಿಒನ್ | ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿ ದೊಡ್ಡ ಅಬ್ಬರವನ್ನೇ ಸೃಷ್ಟಿಸಿದೆ. ದ್ವಿಶತಕದ ಸೀಟುಗಳನ್ನು ದಾಟಿ ದಾಖಲೆ ಸೃಷ್ಟಿಸಿದ್ದಾರೆ. ಮಹಾಯುತಿ ಈಗಾಗಲೇ 220 ಸ್ಥಾನಗಳಲ್ಲಿ ಮುನ್ನಡೆಯಲ್ಲಿ ಮುಂದುವರಿದಿದೆ. ಏತನ್ಮಧ್ಯೆ, ಮಹಾವಿಕಾಸ್ ಅಘಾಡಿ 53 ಸ್ಥಾನಗಳಲ್ಲಿ ಮುನ್ನಡೆ

error: Content is protected !!